ಉತ್ತರ ಕನ್ನಡ | ತಮ್ಮ ಸಿಗಲಿಲ್ಲವೆಂದು ಅಣ್ಣನನ್ನು ಬಂಧಿಸಿದ ಎನ್‌ಐಎ

  • ಸಂಶಯಾಸ್ಪದ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕೆ
  • ಸ್ಥಳೀಯ ಪೊಲೀಸರ ಸಹಾಯದಿಂದ ಕಾರ್ಯಾಚರಣೆ

ದೇಶಾದ್ಯಂತ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಚೇರಿ ಮತ್ತು ಮುಖಂಡರ ಮನೆ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ನಡೆಸುತ್ತಿದೆ. ರಾಜ್ಯದಲ್ಲೂ ಹಲವರನ್ನು ವಶಕ್ಕೆ ಪಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ದಾಳಿ ನಡೆಸುತ್ತಿದೆ.

ಸಂಶಯಾಸ್ಪದ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಂಬ ಸಂಶಯದ ಮೇಲೆ ಎಸ್‌ಡಿಪಿಐನಲ್ಲಿ ತೊಡಗಿಸಿಕೊಂಡಿದ್ದ ಮೌಸಿನ್ ಹೊನ್ನಾವರ (36) ಎಂಬಾತನನ್ನು ಬಂಧಿಸಲು ಎನ್‌ಐಎ ಅಧಿಕಾರಿಗಳು ತೆರಳಿದ್ದರು. ಆದರೆ, ಆತ ಸಿಗಲಿಲ್ಲವೆಂಬ ಕಾರಣಕ್ಕೆ, ಆತನೊಂದಿಗೆ ಸಂಪರ್ಕದಲ್ಲಿದ್ದ ಆತನ ಸಹೋದರ ಅಬ್ದುಲ್ ಅಜೀಜ್ ಶುಕೂರ್ ಹೊನ್ನಾವರ (43) ಎಂಬುವವರನ್ನು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಶಿ ತಾಲೂಕಿನ ಟಿಪ್ಪು ನಗರದಲ್ಲಿ ವಾಸವಾಗಿದ್ದ ಅಬ್ದುಲ್ ಅಜೀಜ್ ಅವರನ್ನು ಗುರುವಾರ ಎನ್‌ಐಎ ವಶಕ್ಕೆ ಪಡೆದಿದೆ.

ಈ ಸುದ್ದಿ ಓದಿದ್ದೀರಾ? : ರಾಜ್ಯದ ಹಲವೆಡೆ ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ; ಹಲವರು ವಶಕ್ಕೆ

ಮೌಸಿನ್ ಎಂಬಾತ ಕೆಲವು ಸಂಶಯಾಸ್ಪದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾನೆಂಬ ಆರೋಪದ ಮೇಲೆ ಆತನನ್ನು ಬಂಧಿಸಲು ಸ್ಥಳೀಯ ಪೊಲೀಸರ ಸಹಾಯದಿಂದ ಎನ್‌ಐಎ ತಂಡವು ದಾಳಿ ಮಾಡಿದೆ. ಆದರೆ, ಆತ ಪತ್ತೆಯಾಗದೇ ಇರುವುದರಿಂದ ಆತನ ಜೊತೆಗೆ ನಿರಂತರವಾಗಿ ಸಂಪರ್ಕದಲಿದ್ದ ಸಹೋದರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180