ಉತ್ತರ ಕನ್ನಡ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಇಬ್ಬರು ಆರೋಪಿಗಳ ಬಂಧನ

Rape

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಇಬ್ಬರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಶಂಕರ ನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನವೆಂಬರ್ 11ರಂದು ಬಾಲಕಿಯ ಆರೋಪಿಗಳು ದೌರ್ಜನ್ಯ ಎಸಗಿದ್ದರು. ಘಟನೆ ಕುರಿತು ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶಿವಮೊಗ್ಗ ಮೂಲದ ಆರೋಪಿ ಪ್ರವೀಣ ಮತ್ತು ಅಜಯ್‌ನನ್ನು ಬಂಧಿಸಿದ್ದಾರೆ. 

"ಸಿದ್ದಾಪುರ ಗ್ರಾಮದಲ್ಲಿ 14 ವರ್ಷದ ಬಾಲಕಿ ತಮ್ಮ ಅಜ್ಜಿಯೊಂದಿಗೆ ವಾಸವಾಗಿದ್ದಳು. ನ.11ರಂದು ಆರೋಪಿಗಳು ಆಕೆಯನ್ನು ಪುಸಲಾಯಿಸಿ ಮೆಣಸಿನ ಹಾಡಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಆಕೆಯೊಂದಿಗೆ ಅಸರ್ಭವಾಗಿ ವರ್ತಿಸಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.

"ಆರೋಪಿಗಳ ವರ್ತನೆಯಿಂದ ಆತಂಕಗೊಂಡ ಬಾಲಕಿ, ಪ್ರತಿರೋಧವೊಡ್ಡಿದ್ದಾಳೆ. ಆದರೂ, ಆರೋಪಿಗಳು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಕಾಮಪಿಪಾಸುಗಳ ವರ್ತನೆಯಿಂದ ಗಾಬರಿಯಾದ ಬಾಲಕಿ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಆಕೆಯನ್ನು ಹುಡುಕಾಡಿದ ಗ್ರಾಮಸ್ಥರು, ಆಕೆಯನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ" ಎಂದು ಪೊಲೀಸರು ವಿವರಿಸಿದ್ದಾರೆ.

AV Eye Hospital ad

ಆರೋಪಿಗಳನ್ನು ಬಂಧಿಸಿರುವ ಶಂಕ ನಾರಾಯಣ ಪೊಲೀಸರು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app