ಕೋವಿಡ್ ಅಲೆ ತಡೆಗೆ ಲಸಿಕೆಯೊಂದೇ ಉಪಾಯ: ಸಚಿವ ಡಾ ಕೆ ಸುಧಾಕರ

DR. K Sudhakar
  • ಮಾಸ್ಕ್ ಹಾಕಿಕೊಳ್ಳುವುದು ಕೂಡ ಅತ್ಯಗತ್ಯ
  • 32 ಲಕ್ಷ ಮಂದಿ ಎರಡನೇ ಡೋಸ್ ಪಡೆಯಬೇಕಿದೆ

ಕೋವಿಡ್ ನಾಲ್ಕನೇಯ ಅಲೆ ತಡೆಗೆ ಲಸಿಕೆಯೊಂದೇ ಉಪಾಯ. ವಿಳಂಬ ಮಾಡದೇ ಲಸಿಕೆ ಪಡೆಯಿರಿ ಎಂದು ಸಚಿವ ಡಾ. ಕೆ ಸುಧಾಕರ ಮನವಿ ಮಾಡಿದರು.

ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು “ಸೆಪ್ಟೆಂಬರ್ ವೇಳೆಗೆ ನಾಲ್ಕನೇ ಅಲೆ ಬರಬಹುದು ಎಂದು ತಜ್ಞರು ತಿಳಿಸಿದ್ದಾರೆ. ಅದನ್ನು ಮುಂಚಿತವಾಗಿ ಎದುರಿಸಿ ನಿಯಂತ್ರಿಸಲು ಕರ್ನಾಟಕ ಸಿದ್ಧವಾಗಿದೆ. ಆತಂಕ ಪಡುವ ಅವಶ್ಯಕತೆ ಇಲ್ಲ. ಈಗಾಗಲೇ 8 ದೇಶಗಳಲ್ಲಿ ಕೋವಿಡ್ ಹೆಚ್ಚಾಗಿದ್ದು, ಅಲ್ಲಿಂದ ಬರುವವರಿಗೂ ತಪಾಸಣೆ ಮಾಡಲಾಗುತ್ತಿದೆ" ಎಂದು ತಿಳಿಸಿದರು.

"ಮಾಸ್ಕ್ ಹಾಕಿಕೊಳ್ಳುವುದು ಅತ್ಯಗತ್ಯ. 6ರಿಂದ 12 ವರ್ಷದ 5 ಸಾವಿರ ಮಕ್ಕಳಿಗೆ ಲಸಿಕೆ ಕೊಟ್ಟಿಲ್ಲ. ಅವರ ಸ್ಕ್ರೀನಿಂಗ್ ಮಾಡಲು ಸೂಚಿಸಲಾಗಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕೊಡಲಾಗುತ್ತಿದೆ. ಈವರೆಗೆ 185 ಕೋಟಿ 90 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ. ಡಿಎನ್ಎ ವ್ಯಾಕ್ಸಿನ್ ನಮ್ಮಲ್ಲಿ ಮಾತ್ರ ಲಭ್ಯವಿದೆ. ವಿವಿಧ ಕಂಪನಿಗಳ ಲಸಿಕೆಗಳ ಉತ್ಪಾದನೆ ನಡೆದಿದೆ. ಲಸಿಕೆಯೊಂದರಿಂದಲೇ ಕೊವೀಡ್ ನಿಯಂತ್ರಣ ಸಾಧ್ಯ" ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಅಂಬೇಡ್ಕರ್ ನಾಮಫಲಕ ತೆರವು| ಬಿಎಸ್‌ಪಿ ಕಾಲ್ನಡಿಗೆ ಜಾಥಾ

"ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ 10.54 ಕೋಟಿ ಲಸಿಕೆ ನೀಡಲಾಗಿದೆ. ಶೇ.98ರಷ್ಟು ಎರಡನೇ ಡೋಸ್ ಲಸಿಕೆ ನೀಡಿಕೆ ಸಾಧ್ಯವಾಗಿದೆ. ಕೊವೀಡ್ ಕುರಿತಂತೆ ಉದಾಸೀನ ಸಲ್ಲದು. 32 ಲಕ್ಷ ಜನರು ಎರಡನೇ ಡೋಸ್ ಪಡೆಯಬೇಕಿದೆ. ಮುನ್ನೆಚ್ಚರಿಕೆ ಡೋಸ್ ಕೂಡ ಪಡೆಯಬೇಕು" ಎಂದು ಎಚ್ಚರಿಸಿದರು.

"135 ಕೋಟಿ ಜನರಿರುವ ದೇಶದಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲನೆ ಆಗಿದ್ದು, ಊಹಿಸಲೂ ಕಷ್ಟ. ಹಿಂದಿನ ಆಡಳಿತದಲ್ಲಿ 'ಹೆಪಟೈಟಿಸ್ ಬಿ' ವ್ಯಾಕ್ಸಿನ್, 20-25 ವರ್ಷಗಳ ಬಳಿಕ 'ಬಿಸಿಜಿ ವ್ಯಾಕ್ಸಿನ್', 45 ವರ್ಷಗಳ ಬಳಿಕ ಬಂದಿತ್ತು. ಆದರೆ, 'ಕೋವಿಡ್ ವ್ಯಾಕ್ಸಿನ್' 2020ರ ಡಿಸೆಂಬರ್‍‌ನಲ್ಲಿ ವಿಶ್ವಕ್ಕೆ ಪರಿಚಯವಾದರೆ, 2021ರ ಜನವರಿಯಲ್ಲೇ ನಮ್ಮ ದೇಶಕ್ಕೂ ಪರಿಚಯಗೊಂಡಿತು" ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app