ವಿಜಯನಗರ | ರಾತ್ರಿ ಸಮಯದಲ್ಲಿ ಕರಡಿಗಳ ಹಾವಳಿ; ಬೆಳೆ ನಾಶ

vijayanagar
  • ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಗ್ರಾಮದ ಹೊಲದಲ್ಲಿ ಕರಡಿಗಳ ದಾಳಿ
  • ಒಂದೂವರೆ ಎಕರೆ ಜೋಳದ ಬೆಳೆಯಲ್ಲಿ ಅರ್ಧ ಎಕರೆ ಬೆಳೆ ನಾಶ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜಮೀನುಗಳಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಬೆಳೆದ ಬೆಳೆಯನ್ನು ನಾಶ ಮಾಡಿದ್ದು, ರೈತರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ತಾಲೂಕಿನ ಭೀಮಸಮುದ್ರ ಗ್ರಾಮದ ಮಾರಮ್ಮ ಮೇಗಳಮನೆ ಎನ್ನುವವರ ಹೊಲದಲ್ಲಿ ಸುಮಾರು ಒಂದುವರೆ ಎಕರೆ ಜೋಳ ಬೆಳೆದಿದ್ದು, ಆಗಷ್ಟ್‌ 18ರ ತಡರಾತ್ರಿ ಹೊಲಕ್ಕೆ ನುಗ್ಗಿರುವ ಕರಡಿಗಳು ಸುಮಾರು ಅರ್ಧ ಎಕರೆ ಜೋಳವನ್ನು ನಾಶ ಮಾಡಿವೆ.

ಈ ಸುದ್ದಿ ಓದಿದ್ದೀರಾ?; ಕಲಬುರಗಿ | ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ಭರ್ತಿಗೆ ನಿರ್ಲಕ್ಷ್ಯ; ಭೀಮನಗೌಡ ಆರೋಪ

ಕರಡಿಧಾಮವೇ ಸಮೀಪವಿರುವುದರಿಂದ ಕರಡಿಗಳು ಪಕ್ಕದ ಗ್ರಾಮಗಳ ರೈತರ ಜಮೀನುಗಳಿಗೆ ಸುಲಭವಾಗಿ ನುಗ್ಗಿ ಬೆಳೆ ನಾಶ ಮಾಡುತ್ತಿದ್ದು ರೈತರಿಗೆ ಚಿಂತೆಯಾಗಿದೆ.

ಕರಡಿಗಳ ಬೆಳೆ ನಾಶ ಮಾಡಿರುವ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿದ ಮಾರೆಮ್ಮ "ಕಡುಬಡತನದಲ್ಲಿ ಸಾಲ ಮಾಡಿ ಒಂದೂವರೆ ಎಕರೆಯಲ್ಲಿ ಜೋಳ ಬಿತ್ತನೆ ಮಾಡಿದ್ದೆ. ಆದರೆ ಅದರಲ್ಲಿ ಅರ್ಧ ಎಕರೆ ಜೋಳವನ್ನು ಕರಡಿಗಳು ತಿಂದು ಓಡಾಡಿ ಬೆಳೆಯನ್ನು ನಾಶ ಮಾಡಿದ್ದು ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ. ಸಾಲ ಕೊಟ್ಟವರಿಗೆ ಮರಳಿ ನಾನೇಗೆ ಸಾಲ ಕಟ್ಟಬೇಕು" ಎಂದು ಅಳಲು ತೋಡಿಕೊಂಡರು.

ಮಾಸ್ ಮೀಡಿಯಾ ರಾಯಚೂರು ವಲಯ ಸಂಯೋಜಕ ಮಹಮ್ಮದ್ ರಫಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180