
- ʼಪಾದಯಾತ್ರೆ ಮೂಲಕ ಪರ್ಯಾಯ ನಾಯಕ ಇದ್ದಾನೆ ಎನ್ನವುದನ್ನು ರಾಹುಲ್ ತೋರಿಸಿದ್ದಾರೆʼ
- ಇವತ್ತಿನ ರಾಜಕಾರಣ ಹೀಗೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ : ಎ ಎಚ್ ವಿಶ್ವನಾಥ್
“ಇವತ್ತಿನ ರಾಜಕಾರಣ ಹೀಗೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾಲಚಕ್ರದಲ್ಲಿ ಏನು ಬೇಕಾದರೂ ಆಗಬಹುದು…”
ʼಮತ್ತೆ ಕಾಂಗ್ರೆಸ್ ಸೇರುವಿರಾ?ʼ ಎಂಬ ಸುದ್ದಿಗಾರರ ಪ್ರಶ್ನೆಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಎ ಎಚ್ ವಿಶ್ವನಾಥ್ ಉತ್ತರಿಸಿದ್ದು ಹೀಗೆ.
ಸೋಮವಾರ ಕೆ ಆರ್ ನಗರದಲ್ಲಿ ಮಾತನಾಡಿದ ಅವರು, “ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇವತ್ತಿನ ರಾಜಕಾರಣ ಹೀಗೆಯೇ ಇರುತ್ತದೆ ಎಂದು ಹೇಳಲು ಕಷ್ಟ. ಕಾಲಚಕ್ರದಲ್ಲಿ ಏನು ಬೇಕಾದರೂ ಸಂಭವಿಸಬಹುದು . ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಈ ಯಾವ ಪಕ್ಷಗಳೂ ಮುಳುಗುವ ಹಡಗುಗಳಲ್ಲ. ಅವು ಜನರೊಂದಿಗೆ ತೇಲುವಂಥವು; ಸದಾ ಮುಂದೆ ಇರುವಂಥವು” ಎಂದರು.
ಪರ್ಯಾಯ ನಾಯಕ ರಾಹುಲ್ ಗಾಂಧಿ!
“ಕಾಂಗ್ರೆಸ್ಗೆ ಭಾರತ್ ಜೋಡೊ ಯಾತ್ರೆ ಸಾಕಷ್ಟು ಶಕ್ತಿ ತುಂಬಿದೆ. ಪಾದಯಾತ್ರೆಯ ಮೂಲಕ ದೇಶದಲ್ಲಿ ಪರ್ಯಾಯ ನಾಯಕ ಇದ್ದಾನೆ ಎಂಬುದನ್ನು ರಾಹುಲ್ ಗಾಂಧಿ ತೋರಿಸಿಕೊಟ್ಟಿದ್ದಾರೆ. ಆದರೆ, ರಾಹುಲ್ ಗಾಂಧಿ ಉದ್ದೇಶ ಪೂರ್ವಕವಾಗಿ ಜನರಲ್ಲಿ ಬಹಳಷ್ಟು ಕೆಟ್ಟ ಅಭಿಪ್ರಾಯಗಳನ್ನು ವಿರೋಧಿಗಳು ಮೂಡಿಸಿದ್ದರು” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? 'ಭಾರತ್ ಜೋಡೋ ಯಾತ್ರೆʼ ಆಶಯ ಈಡೇರಿದೆಯೇ ಎಂಬುದನ್ನು ಕಾಂಗ್ರೆಸ್ ಉತ್ತರಿಸಲಿ : ಸಚಿವ ಸುಧಾಕರ್
“10 ಲಕ್ಷ ಉದ್ಯೋಗದ ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿ ಆಧಾರದ ಮೇಲೆ ಹುದ್ದೆಗಳ ಭರ್ತಿಗೆ ಮುಂದಾಗಬೇಕು. ಹಿಂದುಳಿದ ವರ್ಗದವರು ಉದ್ಯೋಗದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು” ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.