ರಾಷ್ಟ್ರ ಲಾಂಛನದ ಬದಲಾವಣೆ ವಿವಾದ | ವಿರೋಧ ಪಕ್ಷಗಳಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ: ಮುಖ್ಯಮಂತ್ರಿ ಬೊಮ್ಮಾಯಿ ಕಿಡಿ

Basavaraj Bommai
  • ನಿದ್ದೆಯಲ್ಲಿರುವ ಸಿಂಹವೇ ವಿರೋಧ ಪಕ್ಷದವರ ಸಂಸ್ಕೃತಿ
  • ನಮ್ಮ ದೃಷ್ಟಿಯಲ್ಲಿ ಸಿಂಹ ಸಶಕ್ತ ರೂಪವಾಗಿದೆ: ಬೊಮ್ಮಾಯಿ

“ಪ್ರಧಾನಿ ನರೇಂದ್ರ ಮೋದಿ ಕ್ರಿಯಾಶೀಲವಾಗಿದ್ದಾರೆ. ಅದಕ್ಕೆ ತಕ್ಕ ಹಾಗೆ ನಮ್ಮ ದೇಶದ ಲಾಂಛನವಾಗಿರುವ ಸಿಂಹ ಸಶಕ್ತ ಹಾಗೂ ಘರ್ಜನಾ ರೂಪದಲ್ಲಿ ಇರಬೇಕು. ಆ ರೀತಿಯಲ್ಲಿ ಸಿಂಹ ಲಾಂಛನ ಇದೆ. ಆದರೆ, ವಿರೋಧ ಪಕ್ಷದವರು ನಿದ್ದೆ ಮಾಡಿಕೊಂಡೇ ಇರುವ ಸಿಂಹವನ್ನು ನಂಬಿಕೊಂಡಿರುವ ಸಂಸ್ಕೃತಿಯವರು” ಎಂದು ಮುಂಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಂಹದ ಲಾಂಛನ ಉಗ್ರವಾಗಿದೆ, ವ್ಯಗ್ರವಾಗಿದೆ ಎಂಬುದು ನೋಡುವವರ ದೃಷ್ಟಿಕೋನವಾಗಿದೆ. ಕಾಂಗ್ರೆಸ್‌ನವರು ಈ ವಿಷಯವನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಿದ್ದಾರೆ. ಭಾರತಕ್ಕೆ ಈಗ ಕ್ರಿಯಾಶೀಲವಾಗಿರುವ, ಚುರುಕಾಗಿರುವ ಪ್ರಧಾನಮಂತ್ರಿಗಳಿದ್ದಾರೆ. ಅದಕ್ಕೆ ತಕ್ಕಹಾಗೆ ನಮ್ಮ ದೃಷ್ಟಿಯಲ್ಲಿ ಸಿಂಹ ಸಶಕ್ತ ರೂಪವಾಗಿದೆ” ಎಂದು ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದರು.

“ಹೊಸ ಸಂಸತ್ ಭವನದ ಮೇಲೆ ರಾಷ್ಟ್ರೀಯ ಲಾಂಛನಕ್ಕೆ ಸಂಬಂಧಿಸಿದಂತೆ ವಿರೋಧಪಕ್ಷದವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುತ್ತಾರೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಕಾಡಿನ ಮಕ್ಕಳು ವಿದ್ಯೆ ಕಲಿಯಲು ಹೊರಟಿವೆ, ಪೆನ್ನು ಪುಸ್ತಕ ಕೊಡಿಸುವಿರಾ..?

ಹೊಸ ಸಂಸತ್ ಭವನದ ಮೇಲೆ ಅನಾವರಣಗೊಳಿಸಿದ ರಾಷ್ಟ್ರೀಯ ಲಾಂಛನದ ಮುಖಚರ್ಯೆ ಬದಲಿಸಿರುವ ಬಗ್ಗೆ ಆಗುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿ, “ಸಾಮ್ರಾಟ ಅಶೋಕರ ಕಾಲದಲ್ಲಿದ್ದ ಸಿಂಹದ ಲಾಂಛನ ಮತ್ತು ಅಶೋಕ ಚಕ್ರದ ಲಾಂಛನವನ್ನೇ ಅಳವಡಿಸಿಕೊಳ್ಳಲಾಗಿದೆ” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್