ಯಾದಗಿರಿ | ಮರು ಪರಿಷ್ಕೃತ ಪಠ್ಯಗಳನ್ನು ಕೈಬಿಡುವಂತೆ ಒತ್ತಾಯಿಸಿ ದಸಂಸ ಪ್ರತಿಭಟನೆ

  • ಅತ್ಯುತ್ತಮ ಬರಹಗಳನ್ನು ಕೈಬಿಡಲಾಗಿದೆ
  • ಕೋಮುವಾದಿ ಸಿದ್ಧಾಂತಗಳನ್ನು ಸೇರಸಲಾಗಿದೆ

ಮಕ್ಕಳು ಓದುವ ಪಠ್ಯವನ್ನು ತಿರುಚಿ, ಮಕ್ಕಳಲ್ಲಿ ವಿಷಯವನ್ನು ಬಿತ್ತಲು ಮುಂದಾಗಿರುವ ಬಿಜೆಪಿ ಸರ್ಕಾರ, ಕರ್ನಾಟಕದ ಶಾಂತಿಪ್ರಿಯರನ್ನು ಮುಳ್ಳಿನ ಮೇಲೆ ನಿಲ್ಲಿಸುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮರು ಪರಿಷ್ಕೃತ ಪಠ್ಯಪುಸ್ತಕಗಳನ್ನು ಹಿಂಡೆಯಬೇಕೆಂದು ಒತ್ತಾಯಿಸಿ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಿದ ದಸಂಸ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. "ನಾಡಿನ ಖ್ಯಾತ ಬರಹಗಾರರು ಬರೆದಂತಹ ಅತ್ಯುತ್ತಮ ಬರಹಗಳನ್ನು, ಸಮಾಜ ಸುಧಾಕರು ಮತ್ತು ಹೋರಾಟಗಾರರ ಜೀವನ ಕಥೆಗಳನ್ನು ಪಠ್ಯದಿಂದ ಕೈಬಿಡಲಾಗಿದೆ. ಕೋಮುವಾದಿ ಸಿದ್ಧಾಂತಗಳನ್ನು ಸೇರಸಲಾಗಿದೆ" ಎಂದು ಆರೋಪಿಸಿದ್ದಾರೆ. 

"ದೇಶ ಕಟ್ಟುವಲ್ಲಿ ಯಾವುದೇ ರೀತಿಯ ಕೊಡುಗೆ ನೀಡದ ಹೆಗ್ಡೆವಾರ್, ಚಕ್ರವರ್ತಿ ಸೂಲಿಬೆಲೆಯಂತಹ ಕೋಮುವಾದಿಗಳ ಬರಹಗಳನ್ನು ಸೇರಿಸುವ ಮೂಲಕ ಮಕ್ಕಳ ಮನಸ್ಸನ್ನು ಒಡೆಯುವ ಪ್ರಯತ್ನ ನಡೆದಿದೆ" ಎಂದು ದಸಂಸ ಕಿಡಿಕಾರಿದೆ. 

"ರಾಜ್ಯದ ಬಿಜೆಪಿ ಸರ್ಕಾರವು ವಿಕೃತ ಮನಸ್ಸಿನ ರೋಹಿತ್ ಚಕ್ರತೀರ್ಥ ಎಂಬಾತನ ನೇತೃತ್ವದಲ್ಲಿ ಶಾಲಾ ಪಠ್ಯ ಪುಸ್ತಕಗಳನ್ನು ಮರುಪರಿಷ್ಕರಣೆ ಮಾಡಿದೆ. ಆ ಸಮಿತಿಯು ಪ್ರಬುದ್ಧ ಭಾರತ ಕಟ್ಟಲು ಶ್ರಮಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಬಸವಣ್ಣ, ರಾಷ್ಟ್ರಕವಿ ಕುವೆಂಪು, ಬುದ್ಧ ಹಾಗೂ ಸಮಾಜ ಸುಧಾರಕರು, ಸಾಹಿತಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನೊಳಗೊಂಡು ಎಲ್ಲರಿಗೆ ಅವಮಾನ ಮಾಡಿದೆ" ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಪಠ್ಯಗಳನ್ನು ತಿರುಚಿದ ರೋಹಿತ ಚಕ್ರತೀರ್ಥ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೂರ್ವಗ್ರಹಪೀಡಿತರಾಗಿ ಮರುಪರಿಷ್ಕರಿಸಲಾಗಿರುವ ಪಠ್ಯಗಳನ್ನು ಹಿಂಪಡೆದು, ಬರಗೂರ ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯ ಪುಸ್ತಕಗಳನ್ನು ಮುಂದುವರೆಸಬೇಕು" ಎಂದು ದಸಂಸ ಒತ್ತಾಯಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಕೊಟ್ಟ ಮಾತಿಗೆ ತಪ್ಪಿದ ಕೇಂದ್ರ ಸರ್ಕಾರ; ಸಂಯುಕ್ತ ಕಿಸಾನ್ ಮೋರ್ಚಾದಿಂದ “ವಿಶ್ವಾಸ ದ್ರೋಹ ದಿನ” ಆಚರಣೆ

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಚಂದಪ್ಪ ಮುನಿಯಪ್ಪ, ಶಿವಕುಮಾರ ತಳವಾರ, ಶಿವಪುತ್ರ ಜವಳಿ, ಶಿವಲಿಂಗ ಹಸನಾಪೂರ, ಭೀಮಣ್ಣ ಹುಣಸಗಿ, ಮರೆಪ್ಪ ಕ್ರಾಂತಿ, ಹಣಮಂತ ರೋಜಾ, ಮಲ್ಲಿಕಾರ್ಜುನ ಹುರಸಗುಂಡಗಿ, ಸಂದೀಪ ಹೀರಾಗೋಳ, ಸುಭಾಷ ಹುರಸಗುಂಡಗಿ, ಲಕ್ಷ್ಮಣ ರಸ್ತಾಪೂರ, ವೀರಭದ್ರಪ್ಪ ತಳವಾರ, ಶೇಖರ ಮಂಗಳೂರು, ಮರಲಿಂಗ ಹುಣಸಿಹೊಳಿ, ಮಾನಪ್ಪ ಶೆಳ್ಳಗಿ, ತಿಪ್ಪಣ್ಣ ಶೆಳ್ಳಗಿ, ಖಾಜಾ ಅಜಮೀರ, ಎಂ ಪಟೇಲ, ಬಾಲರಾಜ ಖಾನಾಪುರ, ಸಂತೋಷ ಗುಂಡಳ್ಳಿ, ವಾಸು ಗೋಗಿಲಕರ, ಶರಬಣ್ಣ ದೋರನಹಳ್ಳಿ, ಶ್ರೀಮಂತ ಸಿಂಗನಹಳ್ಳಿ, ಭೀಮಾಶಂಕರ ಗುಂಡಳ್ಳಿ, ಮಲ್ಲಪ್ಪ ಪೂಜಾರಿ, ಬಸಪ್ಪ ಕುರಕುಂದಿ, ದೊಡ್ಡಪ್ಪ ಕಾಡಂಗೇರಾ, ಚನ್ನಬಸ್ಸು ಗುರಸುಣಗಿ, ಹಣಮಂತ ಗುರಸಗುಣಗಿ, ಶರಣಪ್ಪ ಮಾಳಳ್ಳಿ, ತಾಯಪ್ಪ ಬಂಢಾರಿ, ಪುರಷೋತ್ತಮ, ಹಣಮಂತ ಕೂಲೂರು, ಶಿವಪ್ಪ ಗಿರಿಯಪ್ಪ, ಆಂಜನೇಯ ಮುನಿಯಪ್ಪ, ರೀಮರಾಯ ಬೆಳಿಗೇರಿ, ಚಂದ್ರಶೇಖರ ಬಲಶೆಟ್ಟಿಹಾಳ, ಚೌಡಪ್ಪ ಎಂ ಕಟ್ಟಿಮನಿ, ಯಲ್ಲಪ್ಪ ಗುಂಡಲಗೇರಾ, ಶರಣಪ್ಪ ಮಾಳೂರು, ಭೀಮರಾಯ ಇಸ್ಲಾಂಪೂರ, ನಾಗರಾಜ ಕೊಡಮನಹಳ್ಳಿ, ಸಿದ್ದಪ್ಪ ಕೊಡಮನಹಳ್ಳಿ, ಬಸಲಿಂಗ ದೋರನಹಳ್ಳಿ, ವೆಂಕಟೇಶ ದೇವಾಪೂರ, ಚನ್ನಪ್ಪ ದೇವಾಪೂರ, ಭೀಮರಾಯ ಮಂಗಳೂರು, ಚಂದ್ರು ಬುದ್ಧನಗರ, ಪರಶುರಾಮ ರಬ್ಬನಹಳ್ಳಿ, ಚಂದ್ರು ಮಕ್ತಾಪೂರ ಭಾಗವಹಿಸಿದ್ದರು.

ಮಾಸ್‌ ಮೀಡಿಯಾ ಯಾದಗಿರಿ ಜಿಲ್ಲಾ ಮಾಧ್ಯಮ ಸಂಯೋಜಕರಾದ ಗೀತಾ ಹೊಸಮನಿ ಅವರ ಮಾಹಿತಿ ಆಧಾರಿತ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್