ಯಾದಗಿರಿ | ಕಳಪೆ ಕಾಮಗಾರಿ; ಅಧಿಕಾರಗಳ ನಿರ್ಲಕ್ಷ್ಯ ಖಂಡಿಸಿ ಅನಿರ್ದಿಷ್ಟಾವಧಿ ಧರಣಿ

yadagiri
 • ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಧರಣಿ
 • ಜಿಲ್ಲಾಧಿಕಾರಿಗೆ ಹಕ್ಕೋತ್ತಾಯ ಪತ್ರ ಸಲ್ಲಿಕೆ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ಉಳ್ಳೆಸೂಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಾಗಾರಿಗಳು ಕಳಪೆ ಗುಣಮಟ್ಟದಲ್ಲಿ ನಡೆದಿವೆ. ಆದರೂ, ಯಾವುದೇ ಕ್ರಮ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದೆ.

ಪಂಚಾಯತಿ ವ್ಯಾಪ್ತಿಯಲ್ಲಿರುವ ಹೊರಟೂರು ಗ್ರಾಮದ ಮಲ್ಲಯ್ಯ ಕೆರೆ ಹಾಗೂ ಉಳ್ಳೆಸೂಗೂರು ಗ್ರಾಮದ ಮಡ್ಡಿ ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ ಮಾಡಲಾಗಿದೆ. ಆದರೆ, ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಲ್ಲಿ ನಡೆದಿದೆ. ಈ ಬಗ್ಗೆ ತನಿಖೆ ನಡೆಸಿ, ಬಿಲ್ ತಡೆಹಿಡಿಯುವಂತೆ ದೂರು ನೀಡಿದ್ದೇವೆ. ಕಳಪೆ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು" ಎಂದು ಧರಣಿನಿರತರು ಒತ್ತಾಯಿಸಿದ್ದಾರೆ.

Eedina App

"ಹೊರಟೂರ ಗ್ರಾಮವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಸೌಲಭ್ಯಗಳನ್ನು ಒದಗಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೂ, ಕ್ರಮ ಕೈಗೊಳ್ಳದ ಪಂಚಾಯತಿ ಪಡಿಒ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು" ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಯಳವಾರ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ನೇಮಿಸುವಂತೆ ಮನವಿ

AV Eye Hospital ad

"ತಾಯಡ್ಡಳ್ಳಿ ಗ್ರಾಮಕ್ಕೆ ಶ್ರೀ ವಹರ್ಷಿ ವಾಲ್ಮೀಕಿ ಭವನ ಮಂಜೂರಾಗಿದ್ದು, ಇಲ್ಲಿಯವರೆಗೆ ಅನುದಾನ ಬಿಡುಗಡೆಯಾಗಿಲ್ಲ. ತಕ್ಷಣ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸಬೇಕು" ಎಂದು ಮನವಿ ಮಾಡಿದರು. 

ಪ್ರತಿಭಟನೆಯಲ್ಲಿ ಕಾಶೀನಾಥ್ ನಟೆಕಾರ್,ವಿರುಪಾಕ್ಷ ಕಚಕನೂರು , ದೇವು ಗುಡಿಮನಿ , ಜುಮ್ಮಣ್ಣ ಬಿ.ಗುಡಿಮನಿ , ಬಲಶೆಟ್ಟಿಹಾಳ , ಸಾಬಣ್ಣ ಕುರಕುಂದಿ , ಚನ್ನಾಬಸಪ್ಪ ತೆಗ್ಗಳ್ಳಿ ಮತ್ತು ಮಲ್ಲಿಕಾರ್ಜುನ ಕೆ ಸೇರಿದಂತೆ ಅಂಬೇಡ್ಕರ್ ಸ್ವಾಭಿಮಾನ ಸೇನೆ ಸದಸ್ಯರು ಭಾಗವಹಿಸಿದ್ದರು.

ಧರಣಿನಿರತರ ಪ್ರಮುಖ ಹಕ್ಕೋತ್ತಾಯಗಳು:

 • ವಡಗೇರಾ ತಾಲೂಕಿನ ಉಳ್ಳೆಸೂಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊರಟೂರ ಗ್ರಾಮದಲ್ಲಿ 2022-23ನೇ ಸಾಲಿನ ಮ.ರಾ.ಗ್ರಾ.ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೆಗೆದುಕೊಂಡ ಕಾಮಗಾರಿಗಳು ಕಳಪೆಯಾಗಿದೆ. ತಕ್ಷಣ ಈ ಯೋಜನೆಯನ್ನು ರದ್ದುಪಡಿಸಿಬೇಕು. ಕಾಮಗಾರಿಯ ಸಂಪೂರ್ಣ ಮಾಹಿತಿ ಕಲೆ ಹಾಕಲು ತನಿಖಾ ತಂಡವನ್ನು ರಚಿಸಬೇಕು.
 • ವಡಗೇರಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕ್ಯಾತನಾಳ ಗ್ರಾಮದ ಸರ್ಕಾರಿ ಸರ್ವೇ ನಂಬರ್ 10ರಲ್ಲಿ ಬುದ್ಧ ವಿಹಾರಕ್ಕಾಗಿ ಎರಡು ಎಕರೆ, ಅಂಬೇಡ್ಕರ್ ಭವನಕ್ಕಾಗಿ ಎರಡು ಎಕರೆ ಹಾಗೂ ಸ್ಮಶಾನಕ್ಕಾಗಿ ಎರಡು ಎಕರೆ ಭೂಮಿ ಮಂಜೂರು ಮಾಡುವ ಬಗ್ಗೆ ದೂರು ನೀಡಿದ್ದು , ಸ್ಥಳದಲ್ಲಿಯೇ ಭೂ ಮಂಜೂರಾತಿ ಆದೇಶ ಮಾಡಬೇಕು . ವಿಳಂಬ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು .
 • ವಡಗೇರಾ ತಾಲೂಕಿನ ಗುಲಸರಂ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀರನಾಳ ಗ್ರಾಮದ ಪರಿಶಿಷ್ಟ ಜಾತಿಯವರಿಗೆ ವಾಸಿಸಲು ಜಾಗ ಇಲ್ಲದೇ ಇರುವುದರಿಂದ ಸರ್ಕಾರಿ ಜಾಗ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ. ಆದರೂ ಜಾಗ ಮಂಜೂರು ಮಾಡಲಿಲ್ಲಿ. ಭೂಮಿ ಮಂಜೂರು ಮಾಡುವ ಬಗ್ಗೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು.
 • ವಡಗೇರಾ ತಾಲೂಕಿನ ಬೀರನಾಳ ಗ್ರಾಮದ ಸ್ಮಶಾನ ಅಭಿವೃದ್ಧಿಗೆ  5 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ಕಾಮಗಾರಿಯ ಹೊಣೆಯನ್ನು ನಿರ್ಮಿತಿ ಕೇಂದ್ರದಿಂದ ಪಡೆದಿದೆ. ಈ ಕಾಮಗಾರಿ ಕಳಪೆ ಆಗಿರುವ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಶಿಷ್ಟ ಜಾತಿ ಭವನಗಳ ಕಾಮಗಾರಿ ಕಳಪೆ ಮಾಡಿರುವ ಯಾದಗಿರಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು.
 • ಯಾದಗಿರಿ ತಾಲೂಕು ಯಡ್ಡಳ್ಳಿ ಗ್ರಾಮದ ಹಜ್ರತ್ ಖಾಜಾಬಾಯಿ ದರ್ಗಾದ ಹಿಂದಿನ ಕಪ್ಪರ ಗದ್ದೆಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುವಲ್ಲಿ ವಿಳಂಭ ಮಾಡಿರುವ ಜೆಸ್ಕಾಂ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು .
 • ಯಾದಗಿರಿ ತಾಯಡ್ಡಳ್ಳಿ ಗ್ರಾಮದಲ್ಲಿ ಶ್ರೀ ವಹರ್ಷಿ ವಾಲ್ಮೀಕಿ ಭವನ ಮಂಜೂರಾಗಿದ್ದು , ಇಲ್ಲಿಯವರೆಗೆ ಅನುದಾನ ಬಿಡುಗಡೆ ಆಗಿರುವುದಿಲ್ಲ , ಕೂಡಲೇ ಅನುದಾನ ಬಿಡುಗಡೆ ಮಾಡಿ , ಕಾಮಗಾರಿ ಪ್ರಾರಂಭಿಸಬೇಕು. 
 • ವಡಗೇರಾ ತಾಲೂಕಿನ ಬೀರನಾಳ ಗ್ರಾಮದಲ್ಲಿ ಜೆ.ಜೆ.ಎಂ. ಯೋಜನೆಯಡಿ ಸಂಪೂರ್ಣ ಕಳಪೆ ಕಾಮಾಗಾರಿ ಮಾಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸಿ ತಕ್ಷಣ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು. 
 • ಶಹಾಪೂರ ತಾಲೂಕು ಬೀರನೂರ ಗ್ರಾಮ ಪಂಚಾಯತ್ ಅಧ್ಯಕ್ಷೆ  ಲಕ್ಷ್ಮೀ ನಿಂಗಯ್ಯ ಇವರು ತಮ್ಮ ಅಧ್ಯಕ್ಷ ಸ್ಥಾನ ನಿರ್ವಹಿಸಲು ಆಗದಿರುವ ಕಾರಣ ತನ್ನ ಸ್ಥಾನಕ್ಕೆ ತನ್ನ ಪತಿಯನ್ನು ಬಳಸಿಕೊಂಡು ಅಧಿಕಾರ ದುರ್ಬಳಕೆ ಮಾಡುತ್ತಿದ್ದು, ತಕ್ಷಣ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಕ್ರಮ ಕೈಗೊಳ್ಳುಬೇಕು.
 • ಹುಣಸಗಿ ತಾಲೂಕಿನ ಚನ್ನೂರು ಗ್ರಾಮದ ಪಿಕಪ್ ಕಾಲುವೆ ಮನಶ್ವೇತನ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು , ಅವ್ಯವಹಾರದಲ್ಲಿ ಶಾಮೀಲಾಗಿರುವ ಕಿರಿಯ ಸಹಾಯಕ ಇಂಜಿನಿಯರ್ ರವಿಕುಮಾರ ಮತ್ತು ಗುತ್ತಿಗೆದಾರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು.
 • ವಡಗೇರಾ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಂಚಿನಾಳ ಗ್ರಾಮದ ಸರ್ಕಾರಿ ಸರ್ವೇ ನಂಬರ್ 59ರಲ್ಲಿ ಬುದ್ಧ ವಿಹಾರಕ್ಕೆ 2 ಎಕರೆ, ಅಂಬೇಡ್ಕರ್ ಭವನಕ್ಕಾಗಿ 2 ಎಕರೆ, ಹೊಲೆಯ ಮತ್ತು ಮಾದಿಗ ಜಾತಿಯವರ ನಿವೇಶನಕ್ಕಾಗಿ 4 ಎಕರೆ ಜಾಗವನ್ನು ಸ್ಥಳದಲ್ಲಿಯೇ ಭೂ ಮಂಜೂರಾತಿ ಆದೇಶ ಮಾಡುವಂತೆ ಕ್ರಮ ಕೈಗೊಳ್ಳಬೇಕು.
ಮಾಸ್‌ ಮೀಡಿಯಾ ಕಲಬುರಗಿ ಜಿಲ್ಲಾ ಸಂಯೋಜಕಿ ಗೀತಾ ಹೊಸಮನಿ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್
eedina app