ಯಾದಗಿರಿ | ಗಾಂಜಾ ಲೇಪಿತ ಚಾಕೊಲೇಟ್ ಮಾರಾಟ; ಇಬ್ಬರ ಬಂಧನ

  • 930 ಗ್ರಾಂ ತೂಕದ 145 ಸ್ಯಾಚೆಟ್‌ಗಳ ಚಾಕೊಲೇಟ್‌ಗಳ ವಶ
  • 'ಆಯುರ್ವೇದ ಔಷಧ' ಎಂದು ಬರೆದ ಗಾಂಜಾ ಮಿಶ್ರಿತ ಚಾಕೊಲೇಟ್

ಯಾದಗಿರಿ ಜಿಲ್ಲೆಯಲ್ಲಿ ಗಾಂಜಾ ಲೇಪಿತ ಚಾಕೊಲೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಯಾದಗಿರಿ ಜಿಲ್ಲೆಯ ಅಬಕಾರಿ ಪೊಲೀಸರು ಶನಿವಾರ (ಆಗಸ್ಟ್ 13) ಬಂಧಿಸಿದ್ದಾರೆ.

ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಗಾಂಜಾ ಲೇಪಿತ ಚಾಕೊಲೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಪ್ರತಾಪ್ ಸಿಂಗ್ ಮತ್ತು ಮೋಹಿತ್ ಕುಮಾರ್ ಎಂಬ ವ್ಯಕ್ತಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿಎಸ್‌ಪಿ ಮಲ್ಲಿಕಾರ್ಜುನ ರೆಡ್ಡಿ ನೇತೃತ್ವದ ಅಬಕಾರಿ ಅಧಿಕಾರಿಗಳ ತಂಡ ಪಟ್ಟಣದ ಎರಡು ಸ್ಥಳಗಳಲ್ಲಿ 930 ಗ್ರಾಂ ತೂಕದ 145 ಲೇಬಲ್‌ಗಳ ಚಾಕೊಲೇಟ್‌ಗಳನ್ನು ವಶಪಡಿಸಿಕೊಂಡಿರುವುದು ತಿಳಿದು  ಬಂದಿದೆ.

ಅಬಕಾರಿ ಪೊಲೀಸ್ ಅಧಿಕಾರಿ ಕೇದಾರನಾಥ್ ಆರೋಪಿಗಳ ವಿರುದ್ದ 1985ರ ಮಾದಕ ವಸ್ತು ನಿಯಂತ್ರಣ (ಎನ್‌ಡಿಪಿಎಸ್) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ತುಮಕೂರು | ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಗೆ ಚಾಲನೆ; ಎಸ್.ಟಿ ಸೋಮಶೇಕರ್

ಉತ್ತರ ಪ್ರದೇಶ ಮೂಲದ ಆರೋಪಿಗಳು ಕಳೆದ ಕೆಲವು ವರ್ಷಗಳಿಂದ ಶಹಾಪುರದಲ್ಲಿ ವಾಸಿಸುತ್ತಿದ್ದರು. 'ಆಯುರ್ವೇದ ಔಷಧ' ಎಂದು ಬರೆದಿರುವ ಲೇಬಲ್‌ ಸುತ್ತಿದ ಗಾಂಜಾ ಮಿಶ್ರಿತ ಚಾಕೊಲೇಟ್‌ಗಳನ್ನು ವ್ಯಸನಿಗಳಿಗೆ ಮಾತ್ರ ಮಾರಾಟ ಮಾಡುತ್ತಿದ್ದರು ಎಂದು ವರದಿಯಾಗಿದೆ

ನಿಮಗೆ ಏನು ಅನ್ನಿಸ್ತು?
0 ವೋಟ್