ಮಂಡ್ಯ | ನಾಗರಹಾವಿನ ಕಡಿತದಿಂದ ಕ್ಷಣಾರ್ಧದಲ್ಲಿ ಮಗನನ್ನು ರಕ್ಷಿಸಿದ ತಾಯಿ

  • ಮನೆಯಿಂದ ಹೊರಬರುವಾಗ ಗಮನಿಸಿದೆ ಹಾವಿನ ತಲೆ ತುಳಿದ ಮಗು
  • ಹಾವು ಕಚ್ಚಲು ಮುಂದಾದಾಗ ಮಗುವನ್ನು ಎಳೆದುಕೊಂಡ ತಾಯಿ

ತಾಯಿಯ ಜೊತೆಗೆ ಮನೆಯಿಂದ ಹೊರಬಂದ ಮಗು ಹಾವಿನ ತಲೆಯನ್ನು ತುಳಿದ ಪರಿಣಾಮ ಮಗುವನ್ನು ಕಚ್ಚಲು ಬಂದ ಹಾವಿನಿಂದ ಕ್ಷಣಾರ್ಧದಲ್ಲಿ ಮಗುವನ್ನು ಅಪಾಯದಿಂದ ರಕ್ಷಿಸಿರುವ  ರೋಚಕ ಘಟನೆಯ ವಿಡಿಯೊವೊಂದು ಶನಿವಾರದಿಂದ (ಆಗಸ್ಟ್‌ 13) ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ. 

ಘಟನೆಯು ಮದ್ದೂರು ನಗರದ ಚಾಮುಂಡೇಶ್ವರಿ ನಗರದಲ್ಲಿ ಇತ್ತೀಚಿಗೆ ನಡೆದಿದೆ ಎಂದು ತಿಳಿದು ಬಂದಿದೆ.

ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಕೆಮ್ಮಣ್ಣನಾಲೆ ವೃತ್ತದ ಬಳಿ ವಿಷ್ಣು ಮತ್ತು ಪ್ರಿಯ ದಂಪತಿ  ವಾಸವಾಗಿದ್ದಾರೆ.  ವೃತ್ತಿಯಲ್ಲಿ ವೈದ್ಯರಾಗಿರುವ ವಿಷ್ಣು ಅವರು ಕೆಲಸಕ್ಕೆ ಹೊರಗೆ ಹೋಗಿದ್ದಾಗ, ಪತ್ನಿ ಪ್ರಿಯಾ ಹಾಗೂ ಪುತ್ರ ಪ್ರಸಾದ್‌ ಮಾತ್ರ ಮನೆಯಲ್ಲಿದ್ದರು.

ಈ ಸುದ್ದಿ ಓದಿದ್ದೀರಾ? : ರಾಮನಗರ | ಮಲ್ಲೂರು ಗ್ರಾಮದಲ್ಲಿ ಪ್ರಾಣಿಗಳಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆ

ಮನೆಯಿಂದ ಮಗುವಿನ ಜೊತೆಗೆ ಹೊರಬಂದ ಪ್ರಿಯಾ ಬಾಗಿಲಿನಲ್ಲಿಯೇ ನಿಂತಿದ್ದರು. ಮೆಟ್ಟಿಲಿನ ಬದಿಯಲ್ಲಿ ನಾಗರಹಾವೊಂದು ಹೊಗುತ್ತಿತ್ತು. ಇದನ್ನು ಗಮನಿಸದ ಬಾಲಕ ಏಕಾಏಕಿ ಮೆಟ್ಟಿಲಿನಿಂದ ಕೆಳಗಿಳಿದ್ದಿದ್ದಾನೆ.

ಮಗುವಿನ ಕಾಲು ಹಾವಿನ ತಲೆಗೆ ಸ್ಪರ್ಶವಾಗಿ ಹಾವು ಹೆಡೆ ಎತ್ತಿ ಬುಸುಗುಡುತ್ತಾ ಬಾಲಕನನ್ನು ಕಚ್ಚಲು ಮುಂದಾಗಿದೆ. ಇದನ್ನು ಗಮನಿಸುತ್ತಿದ್ದ ತಾಯಿ ಪ್ರಿಯಾ ಗಾಬರಿಯಿಂದ ತನ್ನ ಮಗನನ್ನು ಎತ್ತಿಕೊಂಡು ದೂರ ಹೋಗಿದ್ದಾರೆ. ಹಾವು ತನ್ನ ಪಾಡಿಗೆ ಮುಂದೆ ಹೋಗುವ ದೃಶ್ಯವಿರುವ ವಿಡಿಯೊ ಎಲ್ಲೆಡೆ ಹರಿದಾಡಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್