ಮಂಡ್ಯ | ಆಸ್ತಿ ವಿವಾದ; ತಾಲೂಕು ಕಚೇರಿಯಲ್ಲೇ ಸಂಬಂಧಿ ಮೇಲೆ ಮಾರಣಾಂತಿಕ ಹಲ್ಲೆ

  • ಆಸ್ತಿ ಹಂಚಿಕೆ ಸಂಬಂಧ ನಿರಂತರ ಜಗಳ
  • ಕೋರ್ಟ್‌ ಮೇಟ್ಟಿಲೇರಿದ್ದ ಎರಡು ಕುಟುಂಬಗಳು

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದುರುಳನೊಬ್ಬ ತನ್ನ ಸಂಬಂಧಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದಿದೆ. 

ಮದ್ದೂರಿನ ನಂದನ್‌ ಎಂಬಾತ್‌ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಆರೋಪಿ. ಚನ್ನರಾಜು ಹಲ್ಲೆಗೆ ಒಳಗಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ನಂದನ್‌ ಮತ್ತು ಗಾಯಾಳು ಚನ್ನರಾಜು ಸಂಬಂಧಿಕರಾಗಿದ್ದು, ಜಮೀನು ಹಂಚಿಕೆ ವಿಚಾರದಲ್ಲಿ ಆಗಾಗ ಜಗಳವಾಡುತ್ತಿದ್ದರು. ಎರಡು ಕುಟುಂಬದವರು ಜಮೀನು ವಿಚಾರವಾಗಿ ಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ಹಿನ್ನೆಲೆಯಲ್ಲಿ ತಾಲೂಕು ಕಚೇರಿಗೆ ಆಗಮಿಸಿದ್ದ ವೇಳೆ ಮೊದಲ ಮಹಡಿಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ.

ಈ ಸುದ್ದಿ ಓದಿದ್ದೀರಾ?: ನಿಖಿಲ್ ಕುಮಾರಸ್ವಾಮಿ ಅಪ್ರಬುದ್ಧ ರಾಜಕಾರಣಿ; ಸಂಸದೆ ಸುಮಲತಾ ವಾಗ್ದಾಳಿ

ತಾಲೂಕು ಕಚೇರಿಗೆ ಕುಡುಗೋಲಿನ ಸಮೇತ ಬಂದಿದ್ದ ಆರೋಪಿ ನಂದನ್‌ ಏಕಾಏಕಿ ಚನ್ನರಾಜುವಿನ ಮೇಲೆ ದಾಳಿ ನಡೆಸಿದ್ದಾನೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ರಕ್ಷಿಸಲು ಸಾರ್ವಜನಕರು ಆರೋಪಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಚನ್ನರಾಜು ಅವರನ್ನು ಸಾರ್ವಜನಿಕರ ಸಹಾಯದಿಂದ ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನರಾಜು ಸ್ಥಿತಿ ಗಂಭೀರವಾಗಿದೆ.

ಮದ್ದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app