ಮಡಿಕೇರಿ| ‘ನಕ್ಷತ್ರ ಆಮೆ’ ಮಾರಾಟಕ್ಕೆ ಯತ್ನ; ಆರೋಪಿಯ ಬಂಧನ

kodagu
  • ಅಕ್ರಮ ಮಾರಾಟದ ಬಗ್ಗೆ ಮಾಹಿತಿ ಪಡೆದ ಪೊಲೀಸರು
  • ಆಮೆಯನ್ನು ರಕ್ಷಿಸಿ ಸುರಕ್ಷಿತ ಜಾಗಕ್ಕೆ ರವಾನೆ

ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಅಕ್ರಮವಾಗಿ ನಕ್ಷತ್ರ ಆಮೆ ಮಾರಾಟಕ್ಕೆ ಯತ್ನಿಸಿದ್ದ ಆರೋಪಿ ಯಾಸಿನ್ ಪಾಷಾರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಳಿಯಿದ್ದ ಜೀವಂತ ಆಮೆಯನ್ನು ವಶಕ್ಕೆ ಪಡೆದು ರಕ್ಷಿಸಿದ್ದಾರೆ.

ಬುಧವಾರ ಮಡಿಕೇರಿಯ ಸುದರ್ಶನ ವೃತ್ತ ಬಳಿಯ ಗೆಸ್ಟ್ ಹೌಸ್ ಕಡೆಗೆ ತೆರಳುವ ಮಾರ್ಗದಲ್ಲಿರುವ ಬಸ್ ನಿಲ್ದಾಣದ ಹತ್ತಿರ ಆರೋಪಿ ಯಾಸಿನ್ ಪಾಷಾ ನಕ್ಷತ್ರ ಆಮೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದೆ.

ಈ ಸುದ್ದಿ ಓದಿದ್ದೀರಾ?: ಪಿಎಫ್‌ಐಗೆ ನಿಷೇಧ | ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 12 ಕಚೇರಿಗಳಿಗೆ ಸೀಲ್

ಮಾಹಿತಿಯ ಮೇರೆಗೆ ಸಿಐಡಿ ಪೊಲೀಸ್ ದಾಳಿ ನಡೆಸಿದ್ದಾರೆ. ಆರೋಪಿ ಯಾಸಿನ್‌ ಪಾಷಾರನ್ನು ವಶಕ್ಕೆ ಪಡೆದು ನಕ್ಷತ್ರ ಆಮೆ ರಕ್ಷಣೆ ಮಾಡಿದ್ದಾರೆ.

Image
kodagu
ಪೊಲೀಸರು ವಶಪಡಿಸಿಕೊಂಡ ನಕ್ಷತ್ರ ಆಮೆ

ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ ಶರತ್‌ ಚಂದ್ರರವರ ನಿರ್ದೇಶನದಲ್ಲಿ ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷರಾದ ಕೆ.ಬಿ ವಿಶ್ವನಾಥ್ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ಸಿ ಯು ಸವಿ , ಸಿಬ್ಬಂದಿಯವರಾದ ಶೇಖರ್, ರಾಜೇಶ್, ರಾಘವೇಂದ್ರ ಯೋಗೇಶ್‌, ಮಂಜುನಾಥ ಇನ್ನಿತರ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

ಮಾಸ್‌ ಮೀಡಿಯಾ ಮೈಸೂರು ವಲಯ ಸಂಯೋಜಕ ಮೋಹನ್‌ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್