ವಿದ್ಯುತ್ ಶಾಕ್‌| ಚಿಕಿತ್ಸೆ ಫಲಿಸದೆ ರಾಷ್ಟ್ರೀಯ ಪುಟ್ಬಾಲ್‌ ಆಟಗಾರ ವಿಶ್ವಾಸ್ ಸಾವು

National Foot ball Player
  • ಮೋಟಾರ್ ಆರಂಭ ಮಾಡುವ ವೇಳೆ ವಿದ್ಯುತ್ ಆಘಾತ
  • ಶನಿವಾರ ಸಂಜೆ ಗುತ್ತಲು ಸ್ಮಶಾನದಲ್ಲಿ ಅಂತ್ಯಕ್ರಿಯೆ

ವಿದ್ಯುತ್ ಶಾಕ್‌ ಹೊಡೆದು ಆಸ್ಪತ್ರೆಗೆ ದಾಖಾಗಿದ್ದ ರಾಷ್ಟ್ರೀಯ ಮಟ್ಟದ ಪುಟ್ಬಾಲ್ ಆಟಗಾರ ಎಂ.ಎನ್‌. ವಿಶ್ವಾಸ್ (21) ಶನಿವಾರ ಮೃತಪಟ್ಟಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದಿದ್ದ ವಿಶ್ವಾಸ ಕಲಿಕೆ ಮತ್ತು ಆಟದಲ್ಲಿ ಮುಂಚೂಣಿಯಲ್ಲಿದ್ದರು.

ಜುಲೈ 1 ರಂದು ತಮ್ಮ ನಿರ್ಮಾಣ ಹಂತದಲ್ಲಿದ್ದ ಮನೆಗೆ ನೀರು ಹಾಕಲು ಮೋಟಾರ್ ಗುಂಡಿ ಒತ್ತುವಾಗ  ವಿಶ್ವಾಸ್‌ಗೆ ವಿದ್ಯುತ್‌ ಆಘಾತವಾಗಿದೆ. ತಕ್ಷಣ ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರ ಸ್ಥಿತಿ ಚಿಂತಾಜನಕವಾಗಿತ್ತು. ವಿಶ್ವಾಸ್ ದೇಹದ ಶೇ. 80ರಷ್ಟು ಭಾಗ ಹಾನಿಗೊಳಗಾಗಿ ಕೋಮಾ ಸ್ಥಿತಿಯಲ್ಲಿದ್ದರು.

ಈ ಸುದ್ದಿ ಓದಿದ್ದೀರಾ?: ಮಂಡ್ಯ | ವಿದ್ಯುತ್ ಶಾಕ್ ತಗುಲಿ ಚಿಂತಾಜನಕ ಸ್ಥಿತಿಯಲ್ಲಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ

ಜುಲೈ 1ರಂದು ಸ್ವರ್ಣ ಫುಟ್‌ಬಾಲ್ ಸಂಸ್ಥೆ ಆಯೋಜಿಸಿದ್ದ ಹೊನಲು ಬೆಳಕಿನ ಏಳು ಮಂದಿ ಆಟಗಾರರ ಫುಟ್ಬಾಲ್ ಪಂದ್ಯಾವಾಳಿಯಲ್ಲಿ ಭಾಗವಹಿಸಬೇಕಿದ್ದ ಪ್ರತಿಭಾವಂತ ಆಟಗಾರ ವಿಶ್ವಾಸ್ ಅದೇ ದಿನ ಆಕಸ್ಮಿಕವಾಗಿ ವಿದ್ಯುತ್ ಶಾಕ್‌ಗೆ ಒಳಗಾಗಿದ್ದರು.

ನಗರದ ಪಿಇಎಸ್ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ವಿಶ್ವಾಸ್, ಫುಟ್ಬಾಲ್ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲೂ ಮಿಂಚಿದ್ದರು.

ವಿಶ್ವಾಸ್‌ರನ್ನು ಉಳಿಸಲು ಹಲವಾರು ಪ್ರಯತ್ನ ನಡೆದಿದೆ. ಆದರೆ, ಯಾವುದು ಪ್ರಯೋಜನವಾಗಲಿಲ್ಲ. ಶನಿವಾರ ಸಂಜೆ ಗುತ್ತಲು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್