ಮಂಡ್ಯ | ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು; ನೇಮಕದಲ್ಲಿ ಗೊಂದಲ

Mandya
  • ಅವಧಿಗೆ ಮುನ್ನವೇ ಉಮೇಶ್‌ ಅವರ ವರ್ಗಾವಣೆ
  • ತೆರವಾದ ಹುದ್ದೆಗೆ ಮಂಜುನಾಥ್‌ ಅವರ ನೇಮಕ

ಸರ್ಕಾರದ ನಿರ್ಧಾರದಲ್ಲಿನ ಗೊಂದಲದಿಂದ ಮಂಡ್ಯ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ (ಪಿಯು ಬೋರ್ಡ್‌) ಉಪನಿರ್ದೇಶಕ ಹುದ್ದೆಗೆ (ಡಿಡಿಪಿ) ಇಬ್ಬರು ಅಧಿಕಾರಿಗಳು ನೇಮಕವಾಗಿದ್ದಾರೆ.

ಇಲಾಖೆಯಲ್ಲಿರುವ ಒಂದೇ ಒಂದು ಉಪನಿರ್ದೇಶಕ ಹುದ್ದೆಯಲ್ಲಿ ಉಮೇಶ್‌ ಹಾಗೂ ಮಂಜುನಾಥ್‌ ಪ್ರಸನ್ನ ಎಂಬ ಇಬ್ಬರು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ನಿರ್ಧಾರದಿಂದ ಈ ಗೊಂದಾಲ ಉಂಟಾಗಿದ್ದು,  ಸರ್ಕಾರವೇ ಇದಕ್ಕೆ ಪರಿಹಾರ ನೀಡಬೇಕೆಂಬುವುದು ಇಬ್ಬರು ಅಧಿಕಾರಿಗಳು ಪಟ್ಟುಹಿಡಿದಿದ್ದಾರೆ. 

ಈ ಹಿಂದೆ ಮಂಡ್ಯ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಮೇಶ್‌ ಅವರು ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಕೊಪ್ಪಳಕ್ಕೆ ವರ್ಗಾವಣೆ ಮಾಡಿ ಸೆಪ್ಟೆಂಬರ್ 5ರಂದು ಆದೇಶ ಹೊರಡಿಸಲಾಗಿತ್ತು. ವರ್ಗಾವಣೆ ಕಾನೂನಾತ್ಮಕವಾಗಿಲ್ಲ ಎಂದಿರುವ ಉಮೇಶ್‌, ವರ್ಗಾವಣೆ ಪ್ರಶ್ನಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮೆಟ್ಟಿಲೇರಿದ್ದಾರೆ.

ಈ ವೇಳೆಗೆ, ಬೆಂಗಳೂರು ಪಿಯು ಬೋರ್ಡ್‌ನ ಉಪನಿರ್ದೇಶಕ ಮಂಜುನಾಥ್‌ ಪ್ರಸನ್ನ ಅವರನ್ನು ಮಂಡ್ಯಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದ ಪ್ರಕಾರ ಮಂಜುನಾಥ್‌ ಪ್ರಸನ್ನ ಮಂಡ್ಯಕ್ಕೆ ಬಂದು ಅಧಿಕಾರ ಸ್ವೀಕರಿಸಿದ್ದರು. ಇದೀಗ ನ್ಯಾಯಮಂಡಳಿಯ ಮುಂದಿರುವ ಹುದ್ದೆಗಾಗಿ ಇಬ್ಬರೂ ಅಧಕಾರಿಗಳು ಹಠಕ್ಕೆ ಬಿದ್ದಿದ್ದಾರೆ.

ಈ ಸುದ್ದಿ ಓದಿದ್ದೀರಾ?: ದುಬಾರಿ ದುನಿಯಾ | ದಸರಾಗೆ 'ಬೆಲೆ ಏರಿಕೆ' ಪ್ಯಾಕೇಜ್‌: ಕೊತ್ತಂಬರಿಗೆ 220 ರೂ.

"ವರ್ಗಾವಣೆ ಕಾನೂನಾತ್ಮಕವಾಗಿ ನಡೆದಿಲ್ಲ. ಅವಧಿ ಮುಗಿಯುವ ಮುನ್ನವೇ ನನ್ನನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಲು ಇನ್ನೂ ಎರಡು ವರ್ಷದ ಬಾಕಿಯಿದೆ. ತಕ್ಷಣ ಈ ಆದೇಶವನ್ನು ರದ್ದು ಮಾಡಬೇಕು" ಎಂದು ನ್ಯಾಯಮಂಡಳಿಯಲ್ಲಿ ಉಮೇಶ್‌ ಮನವಿ ಮಾಡಿದ್ದಾರೆ.

ಉಮೇಶ್‌ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಮಂಡಳಿ ಮಂಡ್ಯದ ಉಪನಿರ್ದೇಶಕರಾಗಿ ಮುಂದುವರಿಯುವಂತೆ ಸೆಪ್ಟೆಂಬರ್ 19ರಂದು ಆದೇಶ ಹೊರಡಿಸಿದೆ. 

ನ್ಯಾಯಮಂಡಳಿ ಆದೇಶದ ಪ್ರಕಾರವೇ ಉಮೇಶ್‌ ಅವರು ತಮ್ಮ ಹುದ್ದೆಗೆ ಮರಳಿದ್ದಾರೆ. ಆದರೆ, ಅದಾಗಲೇ ಆ ಹುದ್ದೆಗೆ ಮಂಜುನಾಥ ಪ್ರಸನ್ನ ಅಧಿಕಾರ ಸ್ವೀಕರಿಸಿದ್ದಾರೆ. ಸರ್ಕಾರ ಹಾಗೂ ನ್ಯಾಯಮಂಡಳಿಯ ಆದೇಶದ ಪ್ರಕಾರವೇ ಇಬ್ಬರು ಬಂದಿದ್ದರಿಂದ ಹುದ್ದೆಗೆ ಯಾರಿಗೆ ಸೇರಬೇಕೆಂಬುವುದು ಗೊಂದಲ ಉಂಟುಮಾಡಿದೆ. ಸದ್ಯ ಇಬ್ಬರು ಪ್ರತ್ಯೇಕ ಖುರ್ಚಿಗಳನ್ನು ಹಾಕಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.

"ಸರ್ಕಾರದ ಮುಂದಿನ ಆದೇಶವರೆಗೂ ಈ ಪರಿಸ್ಥಿತಿ ಮುಂದುವರಿಯಲಿದೆ" ಎನ್ನುತ್ತಾರೆ ಇಬ್ಬರೂ ಅಧಿಕಾರಿಗಳು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180