ಮಂಡ್ಯ | ಪಥಸಂಚಲನಕ್ಕೆ ಸಜ್ಜಾಗಿ ಬಂದ ವಿದ್ಯಾರ್ಥಿಗಳಿಗೆ ಅವಕಾಶ ನಿರಾಕರಿಸಿದ ಜಿಲ್ಲಾಡಳಿತ; ಆಕ್ರೋಶ

Mandya Students
  • ಧ್ವಜಾರೋಹಣ ಮುಗಿಸಿ ತರಾತುರಿಯಲ್ಲಿ ಬೆಂಗಳೂರಿಗೆ ತೆರಳಿದ ಸಚಿವ ಆರ್ ಅಶೋಕ
  • ಒಂದು ವಾರದಿಂದ ಪಥ ಸಂಚಲನದ ತಯಾರಿ ನಡೆಸಿದ್ದ ವಿದ್ಯಾರ್ಥಿಗಳು; ಪೊಲೀಸರೊಂದಿಗೆ ವಾಗ್ವಾದ

ಮಂಡ್ಯ ಜಿಲ್ಲಾಡಳಿತದ ಎಡವಟ್ಟಿನಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ  ಶಾಲಾ ಮಕ್ಕಳ 20 ತಂಡಗಳ ಪಥಸಂಚಲನ ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಕ್ರೋಶಗೊಂಡ ಘಟನೆ ಸೋಮವಾರ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದಿದೆ.

ಸ್ವಾತಂತ್ರ್ಯೋತ್ಸವಕ್ಕೆ ಕಂದಾಯ ಸಚಿವ ಆರ್ ಅಶೋಕ್‌ ಅವರನ್ನು ಕರೆಸಲಾಗಿತ್ತು. ಸಚಿವರು ಬರುವುದರಿಂದ ಧ್ವಜಾರೋಹಣ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಪಥಸಂಚಲನ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಸಚಿವರಿಗೆ ತುರ್ತಾಗಿ ಬೆಂಗಳೂರಿಗೆ ತೆರಳ ಬೇಕಾಗಿದ್ದರಿಂದ 40 ನಿಮಿಷಕ್ಕೆ ಕಾರ್ಯಕ್ರಮವನ್ನು ಸೀಮಿತಗೊಳಿಸಲಾಗಿದೆ.  ಸಚಿವರು ಧ್ವಜಾರೋಹಣ ಮುಗಿಸಿ ತೆರಳುತ್ತಿದ್ದಂತೆ 20 ತಂಡಗಳ ಪಥಸಂಚಲನವನ್ನು ಜಿಲ್ಲಾಡಳಿತ ದಿಢೀರ್ ರದ್ದುಗೊಳಿಸಿತು.

ಈ ಸುದ್ದಿ ಓದಿದ್ದೀರಾ?: ಸ್ವಾತಂತ್ರ್ಯದ ಅಮೃತ ಮಹೋತ್ಸವ | ಕಾಂಗ್ರೆಸ್ ನಾಯಕರಿಂದ ಧ್ವಜಾರೋಹಣ

ಪಥಸಂಚಲನಕ್ಕಾಗಿ ಕಳೆದ ಒಂದು ವಾರದಿಂದ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಂಡಿದ್ದರು. ದಿಢೀರ್ ಆಗಿ ರದ್ದುಗೊಳಿಸಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು, ಪೊಲೀಸರ ಜೊತೆ ವಾಗ್ವಾದಕ್ಕಿಳಿದರು. 

"ಎರಡು ತಿಂಗಳಿಂದ ತರಗತಿಗಳನ್ನು ಬಿಟ್ಟು ಪಥಸಂಚಲನದ ತರಬೇತಿಗೆ ಬಂದಿದ್ದೇವೆ. ಈಗ ದಿಢೀರ್ ಪಥಸಂಚಲನ ರದ್ದು ಮಾಡಿದರೆ ಹೇಗೆ" ಎಂದು ವಿದ್ಯಾರ್ಥಿಯೊಬ್ಬ ಪೊಲೀಸರೊಂದಿಗೆ ಪ್ರಶ್ನಿಸಿದ್ದಾನೆ.

'ಕ್ಲಾಸ್​ ಬಿಟ್ಟು ಎರಡು ದಿನ ನಾವು ಪಥಸಂಚಲನಕ್ಕೆ ತಯಾರಿ ನಡೆಸಿದ್ದೇವೆ. ನಮಗೆ ಅವಕಾಶ ನೀಡಿ ಎಂದು ಹಠ ಮಾಡಿದರು. ಈ ವೇಳೆ ಅಲ್ಲೇ ಇದ್ದ ಮಂಡ್ಯ ಎಸ್​ಪಿ ಮಕ್ಕಳನ್ನು ಗದರಿದರು. ಮಕ್ಕಳು ಮನೆಗೆ ತೆರಳುವಂತೆ ಪೊಲೀಸ್‌ ಅಧಿಕಾರಿಗಳು ಗದರಿದ ದೃಶ್ಯ ಸೆರೆಯಾಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೋಟೋ ಕೃಪೆ : Tv9 ಕನ್ನಡ
ನಿಮಗೆ ಏನು ಅನ್ನಿಸ್ತು?
1 ವೋಟ್