ಮಂಗಳೂರು ದಸರಾಕ್ಕೆ ಸಂಭ್ರಮದ ಚಾಲನೆ: ಪದ್ಮಶ್ರೀ ಹರೇಕಳ ಹಾಜಬ್ಬ ಭಾಗಿ

Dakshina kannada
  • ಹುಲಿ ವೇಷ ಧರಿಸಿ ಕುಣಿದ ಮಕ್ಕಳು, ಯುವಕರು
  • ಮಂಗಳೂರಿನ ವಿವಿಧೆಡೆ ದಸರಾ ಆಚರಣೆ

ಮಂಗಳೂರು ದಸರಾ ಮಹೋತ್ಸವಕ್ಕೆ ನಗರದ ಕುದ್ರೋಳಿ ದೇವಸ್ಥಾನದಲ್ಲಿ ಅದ್ದೂರಿ ಚಾಲನೆ ದೊರೆತಿದೆ. ದೇವಸ್ಥಾನದ ದಸರಾ ದರ್ಬಾರ್ ಕಲಾ ಮಂಟಪದಲ್ಲಿ ನವದುರ್ಗೆಯರು ಹಾಗೂ ಗಣಪತಿ ಹಾಗೂ ಶಾರದದೇವಿ ವಿಗ್ರಹ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಕುದ್ರೋಳಿ ಕ್ಷೇತ್ರದ ಅಂಗಣದಲ್ಲಿ ಪ್ರದಕ್ಷಿಣೆ ನಡೆಸಿ ಚೆಂಡೆ, ವಾದ್ಯಗಳೊಂದಿಗೆ ಪಲ್ಲಕಿಯಲ್ಲಿ ಶಾರದಾ ಮೂರ್ತಿ ಹೊತ್ತು ತರಲಾಯಿತು. ದರ್ಬಾರು ಮಂಟಪ ವೇದಿಕೆಯಲ್ಲಿ ಶಾರದಾ ಮೂರ್ತಿಯನ್ನು ಪ್ರತಿಷ್ಠಾಪಿದಸಿ ಭಕ್ತರ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಯಿತು.

ಕುದ್ರೋಳಿ ದೇವಸ್ಥಾನದಲ್ಲಿ ನಡೆದ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ, ”ಮುಂದಿನ ವರ್ಷ ನಾನಿರುವೆನೋ ಇಲ್ಲವೋ ಗೊತ್ತಿಲ್ಲ. ಆದರೆ, ಮಂಗಳೂರು ದಸರಾ ಎಂದೆಂದಿಗೂ ವಿಜೃಂಭಣೆಯಿಂದ ನಡೆಯಲಿ. ಮಂಗಳೂರು ದಸರಾವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ” ಎಂದರು.

Image
Dakshina kannada

ಈ ಸುದ್ದಿ ಓದಿದ್ದೀರಾ?: ಮಹಾನ್‌ ಮಹಿಳಾ ಹೋರಾಟಗಾರರ ನಾಡು ಕರ್ನಾಟಕ: ರಾಷ್ಟ್ರಪತಿ ದ್ರೌಪದಿ ಮುರ್ಮು

ಮಂಗಳೂರು ದಸರಾದ ವಿಶೇಷತೆಗಳಲ್ಲಿ ಒಂದಾದ ಹುಲಿ ವೇಷ ಕುಣಿತದಲ್ಲಿ ಮಕ್ಕಳು, ಯುವಕರು ಪಾಲ್ಗೊಂಡಿದ್ದರು. ಹುಲಿ ವೇಷ ಧರಿಸಿ ಶಾರದೆಯ ಪೀಠದ ಎದುರು ಕುಣಿದರು. ದಸರಾ ಮೊದಲನೇ ದಿನವೇ ಕ್ಷೇತ್ರದಲ್ಲಿ ಸಾವಿರಾರು ಜನರು ಸೇರಿದ್ದರು.

Image
Dakshina kannada

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ದಸರಕ್ಕೆ ಸಡಗರದ ಚಾಲನೆ ಸಿಕ್ಕಿದೆ.

ಕುದ್ರೋಳಿ ಗೋಕಾರ್ಣಾಥ ಸೇರಿದಂತೆ ಮಂಗಳಾದೇವಿ ದೇವಸ್ಥಾನ, ವೆಂಕಟರಮಣ, ಕಟೀಲು ದೇವಸ್ಥಾನಗಳಲ್ಲಿಯೂ ಒಂಭತ್ತು ದಿನಗಳ ಸಂಭ್ರಮದ ದಸರಾ ಆಚರಣೆ ಮಾಡಲಾಗುತ್ತದೆ.

Image
Dakshina kannada
ನಿಮಗೆ ಏನು ಅನ್ನಿಸ್ತು?
0 ವೋಟ್