ದಕ್ಷಿಣ ಕನ್ನಡ | ವೇಗದ ಚಾಲನೆ ಆರೋಪ: ಬಸ್‌ ಚಾಲಕನನ್ನು ಬಂಧಿಸಿದ ಪೊಲೀಸರು: ಬಸ್‌ ಸಿಬ್ಬಂದಿಗಳ ಮುಷ್ಕರ

Dakshina kannada
  • ತಲಪಾಡಿ ಮಾರ್ಗವಾಗಿ ಚಲಿಸುತ್ತಿರುವ ಬಸ್‌ನ್ನು ತಡೆದ ಪೊಲೀಸರು 
  • ದಂಡ ಕಟ್ಟಲು ಹಣವಿಲ್ಲ ಎಂದ ಬಸ್‌ ನಿರ್ವಾಹಕ

ವೇಗವಾಗಿ ಬಸ್‌ ಚಲಾಯಿಸಿದ ಆರೋಪದಲ್ಲಿ ಬಸ್‌ ಚಾಲಕನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ನಡೆಯನ್ನು ಖಂಡಿಸಿ ತಲಪಾಡಿ ಮಾರ್ಗವಾಗಿ ಚಲಿಸುವ ಎಲ್ಲ ಬಸ್‌ಗಳ ಸಂಚಾರ ರದ್ದುಪಡಿಸಿ ಬಸ್‌ ಸಿಬ್ಬಂದಿಗಳು ಮುಷ್ಕರ ನಡೆಸಿದ್ದಾರೆ. 

"ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನ್ನು ಮಂಗಳೂರು ದಕ್ಷಿಣ ಸಂಚಾರ ಠಾಣಾ ಅಧಿಕಾರಿ ತಡೆದಿದ್ದಾರೆ. ಬಸ್‌ ಚಾಲಕ ಅತೀ ವೇಗವಾಗಿ ಬಸ್‌ ಓಡಿಸಿದ್ದಾರೆಂದು ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದರು. ನಾವು ವೇಗವಾಗಿ ಬಸ್‌ ಚಲಾಯಿಸಿವುದಿಲ್ಲ. ದಂಡ ಕಟ್ಟಲು ನಮ್ಮ ಬಳಿ ಹಣವಿಲ್ಲ” ಎಂದು ಬಸ್‌ ನಿರ್ವಾಹಕ ಹೇಳಿದ್ದಾರೆ. 

ದಂಡ ಕಟ್ಟಲು ನಿರಾಕರಿಸಿದ ಹಿನ್ನಲೆಯಲ್ಲಿ ಬಸ್‌ ಚಾಲಕನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ನಡೆಯನ್ನು ಖಂಡಿಸಿ ಬಸ್‌ ಸಂಚಾರ ಸ್ಥಗಿತಗೊಳಿಸಿ ಸಿಬ್ಬಂದಿಗಳು ಮುಷ್ಕರ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಸ್ವಾತಂತ್ರ್ಯ ದಿನಾಚರಣೆಯಂದು ಪೌರ ಕಾರ್ಮಿಕರಿಗೆ ರಜೆ ನೀಡಲು ಎಐಸಿಸಿಟಿಯು ಆಗ್ರಹ

"ತಲಪಾಡಿಯಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ ಇದೆ. ಹಾಗಿದ್ದ ಮೇಲೆ ವೇಗವಾಗಿ ಬಸ್‌ ಚಲಾಯಿಸಲು ಸಾಧ್ಯವೇ? ಸಿಸಿಟಿವಿಯ ದೃಶ್ಯಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಿ. ವಿನಾಕರಣ ದಿನನಿತ್ಯ ಬಸ್‌ ಸಿಬ್ಬಂದಿಯ ಮೇಲೆ ಟ್ರಾಫಿಕ್‌ ಪೊಲೀಸರು ಪ್ರಕರಣ ದಾಖಲಿಸಿ ಅನ್ಯಾಯವೆಸಗುತ್ತಿದ್ದಾರೆ. ಈ ಕೂಡಲೆ ಬಸ್‌ ಚಾಲಕ ಬಸವರಾಜ್‌ನನ್ನು ಬಿಡುಗಡೆ ಮಾಡಬೇಕೆಂದು” ಮುಷ್ಕರ ನಿರತ ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.

ಸಿಟಿ ಬಸ್‌ ಮುಷ್ಕರದಿಂದ ಬಸ್‌ ಇಲ್ಲದೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಪ್ರಯಾಣಿಕರು ಸರ್ಕಾರಿ ಬಸ್‌ಗಳನ್ನು ಆಶ್ರಯಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್