ದಕ್ಷಿಣ ಕನ್ನಡ | ಅನುಮಾನಾಸ್ಪದ ಸಂದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಗೊಂದಲ: ಪ್ರಕರಣ ದಾಖಲು

Dakshina kannada
  • ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
  • ಇಬ್ಬರ ಮೇಲೆ ಎಫ್‌ಐಆರ್‍‌ ದಾಖಲು

ಅನುಮಾನಾಸ್ಪದ ವಾಟ್ಯಾಪ್ಸ್ ಸಂದೇಶದಿಂದಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಗೊಂದಲ ಸೃಷ್ಟಿಯಾಗಿದ್ದು, ಇಬ್ಬರ ಮೇಲೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಮ್ರಾನ್‌ ಶೆಟ್ಟಿ ಎನ್ನುವ ಮಹಿಳೆ ಉತ್ತರ ಪ್ರದೇಶ ಮೂಲದ ದಿಪಿಯಾನ್ ಮಾಂಜಿ ಎನ್ನುವ ಯುವಕನ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಕದ್ದು ನೋಡಿದ್ದಾರೆ. ಅದರಲ್ಲಿ “ಯು ಆರ್‍‌ ಎ ಬಾಂಬರ್” ಎನ್ನುವ ಸಂದೇಶವನ್ನು ನೋಡಿ ಗಾಬರಿಗೊಂಡ ಆಕೆ, ತಕ್ಷಣ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ.

ಟೇಕಾಫ್‌ಗೆ ತಯಾರಾಗಿದ್ದ ವಿಮಾನವನ್ನು ನಿಲ್ಲಿಸಿದ ಭದ್ರತಾ ಸಿಬ್ಬಂದಿ ಎಲ್ಲ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಭಾನುವಾರ ಬೆಳ್ಳಿಗೆ 11 ಗಂಟೆಗೆ ಹೊರಬೇಕಿದ್ದ ವಿಮಾನವು ಸಂಜೆ 5 ಗಂಟೆಗೆ ಹೊರಟಿದೆ. ವಿಮಾನದಲ್ಲಿ 186 ಪ್ರಯಾಣಿಕರಿದ್ದರು.

ಈ ಸುದ್ದಿ ಓದಿದ್ದೀರಾ?: ಕೊಡಗು | ಸಂವಿಧಾನ ಬದ್ಧ ಹಕ್ಕುಗಳ ಈಡೇರಿಕೆಗಾಗಿ 'ಅರೆಬೆತ್ತಲೆ' ಮೆರವಣಿಗೆ; ಧರಣಿ ಸತ್ಯಾಗ್ರಹ

ಯುವಕ ದಿಪಿಯಾನ್‌ ಮಾಂಜಿ ಹಾಗೂ ಯುವತಿಯೊಬ್ಬರು ತಮಾಷೆಗಾಗಿ ಸಂದೇಶ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದಿದೆ. ಹೆಚ್ಚಿನ ವಿಚಾರಣೆಗೆ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ವಿಮಾನಯಾನ ಸಂಸ್ಥೆಯ ವ್ಯವಸ್ಥಾಪಕ ಕೆ.ಪಿ.ಬೋಪಣ್ಣ ಅವರು ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 505 (1-ಬಿ) ಮತ್ತು 505 (1-ಸಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್