
- ಭಾರತದ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಇದೇ ಮೊದಲ ಒಪ್ಪಂದ
- ಶಿಕ್ಷಣ, ತರಬೇತಿ ಜ್ಞಾನ ಪ್ರಸರಣ ಕ್ಷೇತ್ರಗಳ ಅಭಿವೃದ್ದಿಗೆ ಒಪ್ಪಂದ ಸಹಕಾರ
ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ನಾರ್ವೆಯ ಅಗ್ದರ್ ವಿಶ್ವವಿದ್ಯಾನಿಲಯಗಳು (ಗ್ರಿಮ್ಸ್ಟ್ಯಾಂಡ್) ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕಾಗಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿವೆ.
ತಿಳವಳಿಕೆ ಒಪ್ಪಂದವು ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ವಿಜ್ಞಾನ, ವ್ಯಾಪಾರ ಆಡಳಿತ ಹಾಗೂ ದೈಹಿಕ ಶಿಕ್ಷಣ ಸೇರಿದಂತೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನಾ ಯೋಜನೆಗಳನ್ನು ನಡೆಸುವ ಉದ್ದೇಶವನ್ನು ಹೊಂದಿದೆ.
ಒಪ್ಪಂದದಿಂದ ಶೈಕ್ಷಣಿಕ ಪ್ರಕಟಣೆಗಳು ಮತ್ತು ವರದಿಗಳ ವಿನಿಮಯ, ಜಂಟಿ ಸೆಮಿನಾರ್ಗಳು, ಕಾರ್ಯಾಗಾರಗಳು, ಉಪನ್ಯಾಸಗಳು, ಸಮ್ಮೇಳನಗಳನ್ನು ಆಯೋಜಿಸಲು ಅನುಕೂಲವಾಗುತ್ತದೆ.
ಈ ಸುದ್ದಿ ಓದಿದ್ದೀರಾ? 9 ಮತ್ತು 10ನೇ ತರಗತಿಗಳು ಪ್ರಾಥಮಿಕ ಶಿಕ್ಷಣದ ಭಾಗ: ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ
ಒಪ್ಪಂದದ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಮಾತನಾಡಿ, “ಸಂಶೋಧನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಶಿಕ್ಷಣ, ತರಬೇತಿ, ತಂತ್ರಜ್ಞಾನ ವರ್ಗಾವಣೆ, ಜ್ಞಾನ ಪ್ರಸರಣ ಕ್ಷೇತ್ರಗಳಲ್ಲಿ ಪರಸ್ಪರ ಆಸಕ್ತಿ ಕಾಪಾಡಿಕೊಳ್ಳಲು ಈ ಒಪ್ಪಂದ ಪೂರಕವಾಗಿದೆ" ಎಂದಿದ್ದಾರೆ.
“ಭಾರತದ ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಇದೇ ಮೊದಲ ಒಪ್ಪಂದವಾಗಿದೆ” ಎಂದು ಮಂಗಳೂರು ವಿವಿಯ ಸಹಾಯಕ ನಿರ್ದೇಶಕ ಹೈಡಿ ಕ್ರಿಸ್ಟೆನ್ಸೆನ್ ತಿಳಿಸಿದ್ದಾರೆ.
ಅಗ್ದರ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ ಎಮ್ಮಾ ಎಲಿಸಬೆತ್ ಹಾರ್ನೆಮನ್ ಒಪ್ಪಂದದ ಸಮಯದಲ್ಲಿ ಉಪಸ್ಥಿತರಿದ್ದರು.