ದಕ್ಷಿಣ ಕನ್ನಡ | ಟೋಲ್‌ಗೇಟ್‌ನಲ್ಲಿ ವಸೂಲಾದ ಹಣವನ್ನೇ ಜಾತಿ-ಧರ್ಮದ ವಿಭಜನೆಗೆ ಬಳಸುತ್ತಾರೆ: ಮಧು ಬಂಗಾರಪ್ಪ ಕಿಡಿ

Dakshina kannada
  • ‘ಸುರತ್ಕಲ್‌ ಜನರದ್ದು ಅರ್ಥಪೂರ್ಣ ಹೋರಾಟ’
  •  

ಯಾರಾದರೂ ಸತ್ತರೆ ಅದರಲ್ಲಿ ಹೇಗೆ ಹಣ ಮಾಡಬಹುದೆಂಬ ಗುಣ ಬಿಜೆಪಿಯವರದು. ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಬರುವ ಪುಕ್ಸಟೆ ಹಣವನ್ನು ಅವರು ಬಿಡುತ್ತಾರಾ? ಇಲ್ಲಿ ವಸೂಲಾದ ಹಣವನ್ನೇ ಜಾತಿ-ಧರ್ಮದ ವಿಭಜನೆಗೆ ಬಳಸುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾಪ್ಪ ಕಿಡಿಕಾರಿದ್ದಾರೆ.

ಸುರತ್ಕಲ್ ಅಕ್ರಮ ಟೋಲ್‌ಗೇಟ್‌ ತೆರವು ಹೋರಾಟವು ಶನಿವಾರ 16ನೇ ದಿನಕ್ಕೆ ಕಾಲಿಟ್ಟಿದೆ. ಟೋಲ್‌ಗೇಟ್‌ ಹೋರಾಟದಲ್ಲಿ ಮಧು ಬಂಗಾಪ್ಪ ಭಾಗಿಯಾಗಿ, ಮಾತನಾಡಿದ್ದಾರೆ. “ರೈತರಿಗೆ, ಸಾರ್ವಜನಿಕರಿಗೆ ನೆರವಾಗುವಂತಹ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು. ಹೀಗೆ ಜನರಿಂದ ಪುಕ್ಸಟ್ಟೆಯಾಗಿ ಹಣ ಮಾಡುವುದಲ್ಲ. ಈ ಹೋರಾಟಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡಬೇಕು. ಜಿಲ್ಲೆಯ ಎಲ್ಲ ಜನರ ಹಿತಕ್ಕಾಗಿ ಹಲವು ದಿನಗಳಿಂದ ಇಲ್ಲಿ ಕೂತು ಹೋರಾಟ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂದರು.

Eedina App

ಈ ಸುದ್ದಿ ಓದಿದ್ದೀರಾ?: ಮಂಡ್ಯ | ಪ್ರತಿಮೆ ನಿರ್ಮಾಣ ಅಭಿವೃದ್ಧಿ ಸಂಕೇತವಲ್ಲ: ಮಧು ಬಂಗಾರಪ್ಪ

“ರಾಜ್ಯದಲ್ಲಿ ಇನ್ನೂ 36 ಇಂತಹ ಅಕ್ರಮ ಟೋಲ್‌ಗೇಟ್‌ಗಳಿವೆ. ಈ ಹೋರಾಟವನ್ನು ಯಶಸ್ವಿಗೊಳಿಸಲೇ ಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಇಲ್ಲಿನ ಯಶಸ್ಸು ಇನ್ನೂ 36 ಕಡೆ ಎತ್ತಿ ನಿಂತಿರುವ ಅಕ್ರಮಕ್ಕೆ ಹೊಡೆಯಬೇಕು. ಆ ಮೂಲಕ ಈ ಅಕ್ರಮಗಳನ್ನು ಕಿತ್ತೆಸೆಯಬೇಕು. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ” ಎಂದರು.

AV Eye Hospital ad
Dakshina kannada

ಹಿರಿಯ ಕಾಂಗ್ರೆಸ್ ಮುಖಂಡ ಐವನ್ ಡಿಸೋಜ, ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಳಿಪಳ್ಳ ಸೇರಿದಂತೆ ಹಲವು ಸಂಘಟನೆಯ ನಾಯಕರು ಹೋರಾಟದಲ್ಲಿ ಭಾಗಿಯಾಗಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app