ಶಾರ್ಜಾ ಪುಸ್ತಕ ಮೇಳ | ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು 'ಶಾಂತಿ ಪ್ರಕಾಶನ' ಮಾಡುತ್ತಿದೆ : ಸರ್ವೋತ್ತಮ್ ಶೆಟ್ಟಿ

Dakshina kannada
  • ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳ ; ಸಮಾರೋಪ ಸಮಾರಂಭ
  • ಕಳೆದ ಆರು ವರ್ಷಗಳಿಂದ ಮಳಿಗೆ ತೆರೆಯುತ್ತಿರುವ 'ಶಾಂತಿ ಪ್ರಕಾಶನ'

ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕನ್ನಡದ ಮಳಿಗೆಯನ್ನು ತೆರೆದು ಸಾಗರದಾಚೆಯ ಕನ್ನಡಿಗರಿಗೆ ಹಾಗೂ ಸಾಹಿತ್ಯ ಪ್ರೇಮಿಗಳಿಗೆ ಸಾಹಿತ್ಯವನ್ನು ಉಣಬಡಿಸಿದ ಕೀರ್ತಿ ಶಾಂತಿ ಪ್ರಕಾಶನಕ್ಕೆ ಸಲ್ಲುತ್ತದೆ. ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆ ಕೆಲಸವನ್ನು ಶಾಂತಿ ಪ್ರಕಾಶನ ಮಾಡುತ್ತಿದೆ ಎಂದು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ್ ಶೆಟ್ಟಿ ಹೇಳಿದರು.

ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಸತತ ಆರು ವರ್ಷಗಳಿಂದ ಭಾಗವಹಿಸುತ್ತಿರುವ ಕನ್ನಡದ ಏಕೈಕ ಮಳಿಗೆಯಾಗಿ ಶಾಂತಿ ಪ್ರಕಾಶನ ಭಾಗವಹಿಸುತ್ತಿದೆ. ಇದರ ಮಳಿಗೆಯ ಸಮಾರೋಪ ಸಮಾರಂಭವು ಶನಿವಾರ ‘ಶಾರ್ಜಾ ಎಕ್ಸ್ ಪೋ ಸೆಂಟರಿ’ನಲ್ಲಿ ನಡೆಯಿತು.

ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸರ್ವೋತ್ತಮ್ ಶೆಟ್ಟಿ, “ಕರ್ನಾಟಕದಲ್ಲಿ ನೂರಾರು ಪ್ರಕಾಶನ ಸಂಸ್ಥೆಗಳಿವೆ. ಅವರು ಯಾರೂ ಮಾಡದ ಕೆಲಸವನ್ನು ಶಾಂತಿಪ್ರಕಾಶನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಕನ್ನಡ ಸೇವೆ ಹೀಗೆಯೇ ಮುಂದುವರಿಯಲಿ” ಎಂದು ಹಾರೈಸಿದರು.

ಈ ಸುದ್ದಿ ಓದಿದ್ದೀರಾ?: ಮೈಸೂರು | ಹಿಂದೂ ಮಹಿಳೆ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಮುಸ್ಲಿಂ ಬಾಂಧವರು

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕು೦ಞಿ ಮಾತನಾಡಿ, “ಕಳೆದ ನಲವತ್ತು ವರ್ಷದಿಂದ ಸೌಹಾರ್ದತೆಯನ್ನು ನಾಡಿದಾದ್ಯಂತ ಪಸರಿಸುವ ಕೆಲಸವನ್ನು ಶಾಂತಿ ಪ್ರಕಾಶನ ಮಾಡುತ್ತಿದೆ. ಇಂದಿನ ಕಲುಷಿತ ವಾತಾವರಣದಲ್ಲಿ ಹೃದಯವನ್ನು ಒಗ್ಗೂಡಿಸುವ ಕೆಲಸವನ್ನು ನಿರಂತರವಾಗಿ ಸಾಹಿತ್ಯದ ಮೂಲಕ ಮಾಡುತ್ತಿದೆ. ಸಂಸ್ಥೆ ಈಗಾಗಲೇ ಪ್ರಕಟಿಸಿರುವ ಸುಮಾರು 300ಕ್ಕೂ ಹೆಚ್ಚಿನ ಕೃತಿಗಳಲ್ಲಿ ಮನುಷ್ಯರ ನಡುವೆ ಭಾವೈಕ್ಯತೆ ಮೂಡಿಸುವ ಸಂದೇಶಗಳಿವೆ. ಇಸ್ಲಾಮೋಫೋಬಿಯಾ ವ್ಯಾಪಕವಾಗಿ ಹಬ್ಬುತ್ತಿರುವ ಈ ಕಾಲದಲ್ಲಿ ಇಸ್ಲಾಮಿನ ಮೌಲ್ಯಗಳನ್ನು, ಪ್ರವಾದಿಗಳ ಜೀವನ ಸಂದೇಶಗಳನ್ನು ಜನರಿಗೆ ತಿಳಿಸುವ ಅಗತ್ಯವಿದೆ. ಅದನ್ನು ಶಾಂತಿ ಪ್ರಕಾಶನವು ಮಾಡುತ್ತಿದೆ” ಎಂದರು.

ಬ್ಯಾರೀಸ್ ವೆಲ್ಫೇರ್ ಫೋರಮ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮಾತನಾಡಿ, ”ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಪ್ರಕಾಶನ ಸಂಸ್ಥೆಗಳು ಭಾಗವಹಿಸುವ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕನ್ನಡದ ಒಂದು ಪುಸ್ತಕ ಮಳಿಗೆ ಇರುವುದು ಸಂತೋಷದ ವಿಷಯ. ಶಾಂತಿ ಪ್ರಕಾಶನ ಸದಸ್ಯರ ಕನ್ನಡ ಕಟ್ಟುವ ಕೆಲಸ ನಿಜಕ್ಕೂ ಶ್ಲಾಘನೀಯ” ಎಂದರು.

ಸಮಾರೋಪ ಸಮಾರಂಭದಲ್ಲಿ ಅಬುದಾಬಿ ನಿಹಾಲ್ ರೆಸ್ಟೋರೆಂಟ್ ಮಾಲಕ ಸುಂದರ್ ಶೆಟ್ಟಿ, ಲೇಖಕ ಮನೋಹರ್ ತೋನ್ಸೆ, ಬ್ಯಾರೀಸ್ ವೆಲ್ಫೇರ್ ಫೋರಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ, ಹಿದಾಯ ಫೌಂಡೇಶನ್ ಅಧ್ಯಕ್ಷ ಅಹ್ಮದ್ ಬಾವ, ಚಲನಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ, ಅನ್ಸಾರ್ ತೋನ್ಸೆ, ಕವಿ ಮತ್ತು ಲೇಖಕ ಇರ್ಷಾದ್ ಮೂಡಬಿದ್ರೆ ಮತ್ತಿತರರು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app