ಕಾರುಣ್ಯ ಯೋಜನೆಗೆ ಪ್ರತಿವರ್ಷ ಆಗಸ್ಟ್‌ ತಿಂಗಳ ಪ್ರಾಯೋಜಕತ್ವ: ರೋಹನ್ ಕಾರ್ಪೊರೇಶನ್

Mangalore
  • ವೆನ್ಲಾಕ್‌ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ ಭೋಜನ ವ್ಯವಸ್ಥೆ 
  • ಆಗಸ್ಟ್‌ ತಿಂಗಳ ಪ್ರಾಯೋಜಕತ್ವ 2.25 ಲಕ್ಷ ರೂ ಚೆಕ್ ವಿತರಣೆ

ಮಂಗಳೂರಿನಲ್ಲಿ ರೋಗಿಗಳು ಮತ್ತು ಅವರ ಸಹಾಯಕರಿಗೆ ರಾತ್ರಿ ಭೋಜನವನ್ನು 'ಕಾರುಣ್ಯ ಯೋಜನೆ'ಯಡಿ ಎಂ ಫ್ರೆಂಡ್ಸ್‌ ಚಾರಿಟೇಬಲ್‌ ಟ್ರಸ್ಟ್‌ ವಿತರಿಸುತ್ತಿದೆ. ಈ ಯೋಜನೆಗೆ ಪ್ರತಿವರ್ಷ ಆಗಸ್ಟ್‌ ತಿಂಗಳ ಪ್ರಾಯೋಜಕತ್ವವನ್ನು ರೋಹಾನ್ ಕಾರ್ಪೊರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಹಿಸಿಕೊಳ್ಳಲಿದೆ ಎಂದು ಅದರ ಲಿಮಿಟೆಡ್‌ನ ನಿರ್ದೇಶಕ ರೋಹನ್ ಮೊಂತೇರೋ ತಿಳಿಸಿದ್ದಾರೆ. 

ನಗರದ ವೆನ್ಲಾಕ್‌ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಎಂ. ಫ್ರೆಂಡ್ಸ್‌ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

"ಬಡಜನರಿಗೆ ಟ್ರಸ್ಟ್‌ ನೆರವು ನೀಡುತ್ತಿದೆ. ಟ್ರಸ್ಟ್‌ ನಡೆಸುತ್ತಿರುವ ಕಾರುಣ್ಯ ಯೋಜನೆ ಪ್ರಶಂಸಾರ್ಹ. ನಾವು ಗಳಿಸಿದ ಆದಾಯದಲ್ಲಿ ಸಮಾಜಕ್ಕೆ ಸ್ವಲ್ಪ ಪಾಲು ನೀಡಿದಾಗ ಮನಸ್ಸು ತೃಪ್ತಿಯಾಗುತ್ತದೆ. ಆದ್ದರಿಂದ ಆಗಸ್ಟ್‌ ತಿಂಗಳ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುತ್ತಿವೆ. ಅಗತ್ಯವಿದ್ದಲ್ಲಿ ಇತರೆ ಸಂದರ್ಭದಲ್ಲಿ ಸಹಾಯ ಮಾಡುತ್ತೇವೆ" ಎಂದು ರೋಹನ್ ಮೊಂತೇರೋ ಹೇಳಿದ್ದಾರೆ. ಅಲ್ಲದೆ, ಈ ತಿಂಗಳ (ಆಗಸ್ಟ್‌) ಪ್ರಾಯೋಜಕತ್ವದ ಮೊತ್ತ 2.25 ಲಕ್ಷ ರೂ. ಅನ್ನು ಟ್ರಸ್ಟ್‌ಗೆ ನೀಡಿದ್ದಾರೆ. 

ಈ ಸುದ್ದಿ ಓದಿದ್ದೀರಾ?; ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವವರಲ್ಲಿ ನಾನೂ ಒಬ್ಬ: ಸಚಿವ ಶ್ರೀರಾಮುಲು

ಕಾರ್ಯಕ್ರಮದಲ್ಲಿ ಎಂ. ಫ್ರೆಂಡ್ಸ್‌ ಅಧ್ಯಕ್ಷ ಮುಹಮ್ಮದ್‌ ಹನೀಫ್ ಹಾಜಿ ಗೋಳ್ತಮಜಲು, ವೆನ್ಲಾಕ್ ಆಸ್ಪತ್ರೆಯ ಆರ್‍ಎಂಒ ಡಾ. ಸುಧಾಕರ್ ಇದ್ದರು.  

ನಿಮಗೆ ಏನು ಅನ್ನಿಸ್ತು?
1 ವೋಟ್