
- ‘ಆದೇಶ ಪತ್ರ ಕೈ ತಲುಪುವವರೆಗೂ ಹೋರಾಟ’
- ‘ಟೋಲ್ ಸುಲಿಗೆ ಮಾಡುವುದು ನಿಂತಿಲ್ಲ’
ಒಂದು ಟ್ವೀಟ್ ನಂಬಿ ಧರಣಿ ಕೈಬಿಟ್ಟರೆ ನಮ್ಮಷ್ಟು ಶತ ಮೂರ್ಖರು ಬೇರೆ ಯಾರೂ ಇಲ್ಲ. ಈಗಾಗಲೇ ನಾವು ಹಲವು ಪಾಠಗಳನ್ನು ಕಲಿತಿದ್ದೇವೆ. ಯಾವ ಶಾಸಕರ ಮಾತನ್ನು ನಂಬಬೇಕೆಂಬುದು ಚೆನ್ನಾಗಿ ಅರ್ಥವಾಗಿದೆ. ಟೋಲ್ ಸುಲಿಗೆ ನಿಲ್ಲುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.
‘ಟೋಲ್ಗೇಟ್ ರದ್ದು ಪಡಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ಸಂಸದ ನಳಿನ್ಕುಮಾರ್ ಟ್ವೀಟ್ ಮಾಡಿದ್ದಾರೆ. ಬಳಿಕವೂ ಮಂಗಳವಾರ (ನವೆಂಬರ್ 15) ಟೋಲ್ಗೇಟ್ ವಿರುದ್ಧದ ಹೋರಾಟ ಮುಂದುವರೆದಿದೆ. 19ನೇ ದಿನಕ್ಕೆ ಕಾಲಿಟ್ಟಿದೆ.
“ವಿಜಯದ ಸನಿಹಕ್ಕೆ ಬಂದ್ದಿದ್ದೇವೆ ವಿನಃ ವಿಜಯ ಧಕ್ಕಿಲ್ಲ. ವಿಜಯಕ್ಕೆ ಇನ್ನೊಂದು ಗೆರೆಯಿದೆ ಎನ್ನವುದನ್ನು ನಾವು ಮರೆಯಬಾರದು. ಜಿಲ್ಲೆಯ ಜನ ನಮ್ಮ ಮೇಲೆ ನಂಬಿಕೆಯಿಟ್ಟಿದ್ದಾರೆ. ಅವರ ನಂಬಿಕೆ ಉಳಿಸುವ ಜವಬ್ದಾರಿ ನಮ್ಮ ಮೇಲಿದೆ. ಭರವಸೆಗಳನ್ನು ನಂಬಲು ಸಾಧ್ಯವಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ?: ಮೈಸೂರು | ಮಸೀದಿ ಮಾದರಿಯಲ್ಲಿ ‘ಬಸ್ ನಿಲ್ದಾಣ' ವಿವಾದ; ಸಂಸದ ಪ್ರತಾಪ್ ಸಿಂಹಗೆ ನೆಟ್ಟಿಗರ ತರಾಟೆ
“ಸರ್ಕಾರದ ಗಜೆಟ್ ನೋಟಿಫೀಕೆಷನ್ ಹೊರಡಿಸಿದ ನಂತರವೂ ಟೋಲ್ ಸುಲಿಗೆ ಮಾಡುವುದು ನಿಂತಿಲ್ಲ. ಟೋಲ್ ಕೇಂದ್ರ ಬಂದ್ ಆದ ಮೇಲೆ ನಮ್ಮ ಧರಣಿ ಕೇಂದ್ರ ಬಂದ್ ಮಾಡುತ್ತೇವೆ. ಸೋಮವಾರ ರಾತ್ರಿಯೇ ಆದೇಶ ಪತ್ರ ತಲುಪುತ್ತದೆಂದು ಕೆಲವರು ಹೇಳಿದ್ದರು. ಆದೇಶ ತಲುಪಲು ಇನ್ನೂ ಮೂರು-ನಾಲ್ಕು ದಿವಸ ತೆಗೆದುಕೊಳ್ಳಬಹುದು” ಎಂದರು.
“ಸಂಸದರು ತಮ್ಮ ಟ್ವೀಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಧನ್ಯವಾದ ಹೇಳಿದ್ದಾರೆ. ಜಿಲ್ಲೆಯ ಜನತೆಗೆ ಹಾಗೂ ಟೋಲ್ಗೇಟ್ ಹೋರಾಟಗಾರರಿಗೆ ಧನ್ಯವಾದ ಹೇಳಲು ಅವರಿಗೆ ಮನಸ್ಸಿಲ್ಲ. ನಿಜವಾಗಿ ಧನ್ಯವಾದ ಸಲ್ಲಬೇಕಾದುದು ಈ ಜಿಲ್ಲೆಯ ಜನರಿಗೆ” ಎಂದರು.