ಮೈಸೂರು | ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟವೇ ಕುಂದುತ್ತಿದೆ: ಸಂಸದ ಶ್ರೀನಿವಾಸ ಪ್ರಸಾದ್

  • ಬೋಧಕೇತರ ಕೆಲಸಗಳತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ
  • ಹಲವು ಪದವೀಧರರಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿದ್ದರೂ ಕೂಡ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಕುಂದುತ್ತಿದೆ ಎಂದು ಚಾಮರಾಜನಗರ ಸಂಸದ ವಿ ಶ್ರೀನಿವಾಸ ಪ್ರಸಾದ್ ಹೇಳಿದರು.

ಮೈಸೂರಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಮೈಸೂರು ವಿಶ್ವವಿದ್ಯಾನಿಲಯದಲ್ಲಿ 170ಕ್ಕೂ ಹೆಚ್ಚು ಸಂಶೋಧನಾ ಪದವೀಧರರಿದ್ದಾರೆ. ಹಲವು ಪದವೀಧರರಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಕಳಪೆ ಕಲಿಕೆ ಮತ್ತು ಓದುವ ಕೌಶಲ್ಯ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ" ಎಂದರು.

Eedina App

“ಪ್ರಸ್ತುತ ಸ್ಥಿತಿಯಲ್ಲಿ ಸಂಶೋಧನಾ ಪದವೀಧರರು ಶಿಕ್ಷಣ ಕಲಿಸುವ ಕೆಲಸದಲ್ಲಿ ಆಸಕ್ತಿ ಹೊಂದಿಲ್ಲ. ಬದಲಾಗಿ ಬೋಧಕೇತರ ಕೆಲಸಗಳತ್ತ ಒಲವು ತೋರಿಸುತ್ತಿದ್ದಾರೆ. ಇದು ವಿಷಾದನೀಯ ಬೆಳವಣಿಗೆಯಾಗಿದೆ" ಎಂದು ಅವರು ಹೇಳಿದರು.

"ಹಿಂದೂ ಎಂಬ ಪದದ ಮೂಲದ ಬಗ್ಗೆ ಚರ್ಚೆ ಅಪ್ರಸ್ತುತ. ಭಾರತವು ಅನೇಕ ಧರ್ಮಗಳ ತಾಯಿಯಾಗಿದೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.

AV Eye Hospital ad

ಇನ್ನೂ ನಿರ್ಧಾರವಾಗದ ಉಪಕುಲಪತಿ ನೇಮಕ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್ಒಯು) ಉಪಕುಲಪತಿ ಹುದ್ದೆಗೆ ಶೋಧನಾ ಸಮಿತಿ ಮೂರು ಹೆಸರುಗಳನ್ನು ಸಲ್ಲಿಸಿ ಒಂದು ವಾರ ಕಳೆದರೂ ರಾಜ್ಯ ಸರ್ಕಾರ ಈ ಕುರಿತು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಪೈಥಾನ್ ಯಂತ್ರದಲ್ಲಿ ರಸ್ತೆ ಗುಂಡಿ ದುರಸ್ತಿ ಮಾಡಲು ನೀಡಿದ್ದ ಗುತ್ತಿಗೆ ರದ್ದು

ಕಳೆದ ಒಂದು ತಿಂಗಳಿನಿಂದ ಕೆಎಸ್ಒಯು ಹಣಕಾಸು ಅಧಿಕಾರಿ ಹಂಗಾಮಿ ಉಪಕುಲಪತಿ ಮತ್ತು ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app