ಮೈಸೂರು | ಸಂವಿಧಾನ - ಪ್ರಜಾಪ್ರಭುತ್ವ ಉಳಿವಿಗಾಗಿ ಒಗ್ಗೂಡಲಿವೆ ದಲಿತ ಸಂಘಟನೆಗಳು

  • ಜಿಲ್ಲೆಯ ಹಲವೆಡೆ ಐಕ್ಯ ಹೋರಾಟ ಸಮಿತಿ ಸಭೆ
  • ಬೆಂಗಳೂರಿನ ಸಮಾವೇಶಕ್ಕೆ ಭಾಗವಹಿಸುವಂತೆ ಕರೆ

ಡಿಸೆಂಬರ್ 6ರಂದು ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಬೆಂಗಳೂರಿನಲ್ಲಿ ದಲಿತ ಸಂಘಟನೆಗಳ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಎಲ್ಲ ದಲಿತ ಸಂಘಟನೆಗಳು ಒಗ್ಗೂಡಲಿವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಒಗ್ಗೂಡಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಹೇಳಿದ್ದಾರೆ.

ಮೈಸೂರು ಜಿಲ್ಲೆಯಾದ್ಯಂತ 'ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ' ಸಭೆ ನಡೆಸುತ್ತಿದ್ದು, ಟಿ ನರಸೀಪುರದಲ್ಲಿ ನಡೆದ ಸಭೆಯಲ್ಲಿ ಆಲಗೂಡು ಶಿವಕುಮಾರ್ ಮಾತನಾಡಿದರು. "ಬೆಂಗಳೂರಿನ ಸಮಾವೇಶದಲ್ಲಿ ಭಾಗವಹಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ, ದಲಿತ ಸಂಘಟನೆಗಳ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮದಲ್ಲಿ ದಲಿತರೆಲ್ಲರೂ ಭಾಗಿಯಾಗಿ ಬದ್ಧತೆ ತೋರಬೇಕಿದ್ದು, ನಾವೆಲ್ಲ ಮತ್ತೆ ಒಂದುಗೂಡುವ ಸಮಯ ಬಂದಿದೆ” ಎಂದರು.

Eedina App

ಸಭೆಯಲ್ಲಿ ಬನ್ನಹಳ್ಳಿ ಸೋಮಣ್ಣ, ಸಂಚಾಲಕ ಯರಗನ ಹಳ್ಳಿ ಸುರೇಶ್, ಸಿದ್ದರಾಜು, ತಾ ಸಂಚಾಲಕ ಸೋಮಶೇಖರ್, ಕುಕ್ಕೂರು ರಾಜು, ನಂಜುಂಡಸ್ವಾಮಿ, ಮಹದೇವಸ್ವಾಮಿ, ತಲಕಾಡು ಆನಂದ್, ನವಿದುಲ್ಲ, ನಾಗೇಶ್, ಹೆಮ್ಮಿಗೆ ಚಂದ್ರು, ಮಧು ತಲಕಾಡು, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.

ಹುಣಸೂರಿನಲ್ಲಿ ಸಭೆ

AV Eye Hospital ad

ಮೈಸೂರು ಜಿಲ್ಲೆ ಹುಣಸೂರಿನಲ್ಲಿಯೂ ದಸಂಸ ಮುಖಂಡ ಮಹದೇವು ಜೆ ಹಾಗೂ ಅತ್ತಿಕುಪ್ಪೆ ರಾಮಕೃಷ್ಣ ನೇತೃತ್ವದಲ್ಲಿ ಐಕ್ಯ ಹೋರಾಟ ಸಮಿತಿ ಸಭೆ ನಡೆದಿದೆ. ಸಭೆಯಲ್ಲಿ ಮಾತನಾಡಿದ ರಾಮಕೃಷ್ಣ, “ಡಿಸೆಂಬರ್ 6ರಂದು ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಹುಣಸೂರು ತಾಲೂಕಿನ ಪ್ರತಿ ಹಳ್ಳಿ ಹಳ್ಳಿ ಮನೆ ಬಾಗಿಲಿಗೆ ತೆರಳಿ ಆಹ್ವಾನಿಸಬೇಕು. ಸಮಾವೇಶದ ಪ್ರಾಮುಖ್ಯತೆ, ಯಾಕೆ ಭಾಗವಹಿಸಬೇಕು ಎಂಬುದನ್ನು ತಿಳಿಸಬೇಕು” ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಬೀದರ್ : ಭಯತೊರೆದು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ : ಚಂದ್ರಕಾಂತ ಶಾಬಾದಕರ್

“ಮುಂದಿನ ಪೀಳಿಗೆಗೆ ದಾರಿ ತೋರಿಸುವಂತಹ ಕೆಲಸ ಆಗಬೇಕಾಗಿದ್ದು, ಇಂತ ಸುಸಂದರ್ಭದಲ್ಲಿ ತಾವೆಲ್ಲ ಜೊತೆಗೂಡ ಬೇಕು ಎಂದು” ಕರೆ ಕೊಟ್ಟರು.

ಸಭೆಯಲ್ಲಿ ದಸಂಸ ಹಿರಿಯ ಮುಖಂಡರಾದ ರತ್ನಾಪುರಿ ಪುಟ್ಟಸ್ವಾಮಿ, ರಾಜು ಚಿಕ್ಕ ಹುಣಸೂರು, ಅತ್ತಿಕುಪ್ಪೆ ರಾಮಕೃಷ್ಣ, ಡೇವಿಡ್ ರತ್ನಾಪುರಿ, ಕೊಳಗಟ್ಟ ಕೃಷ್ಣ, ವರದರಾಜು, ಶಾಂತರಾಜು, ಸಿದ್ದೇಶ್ ಸೇರಿದಂತೆ ಪ್ರಮುಖರು ಹಾಜರಿದ್ದರು.

ಮಾಹಿತಿ: ಮೋಹನ್, ಮೈಸೂರು ಜಿಲ್ಲಾ ಮಾಧ್ಯಮ ಸಂಯೋಜಕ, ಮಾಸ್‌ ಮೀಡಿಯಾ
ನಿಮಗೆ ಏನು ಅನ್ನಿಸ್ತು?
0 ವೋಟ್
eedina app