ಮೈಸೂರು | ಕಾರ್ಖಾನೆಯಲ್ಲಿ ‘ಗ್ಯಾಸ್‌ ಲೀಕ್‌’ ವದಂತಿ; ಅಧಿಕಾರಿಗಳ ಸ್ಪಷ್ಟನೆ

  • ಬೆಂಕಿ ಅನಾಹುತ ಸುರಕ್ಷತಾ ಪರೀಕ್ಷೆ ವಿಡಿಯೋ ವೈರಲ್
  • ‘ಆಕಾಶದೆಡೆಗೆ ಚಿಮ್ಮಿದ್ದು ಗ್ಯಾಸ್‌ ಅಲ್ಲ ನೀರು’

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ಹೆಚ್‌ಪಿ ಘಟಕದಲ್ಲಿ 'ಗ್ಯಾಸ್‌ ಸೋರಿಕೆ' ಆಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ವದಂತಿಯ ಸುದ್ದಿ ವೈರಲ್‌ ಆಗುತ್ತಿದ್ದಂತೆ ಅಧಿಕಾರಿಗಳು ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

"ಕೈಗಾರಿಕಾ ವಯದಲ್ಲಿ ಯಾವುದೇ ಗ್ಯಾಸ್ ಸೋರಿಕೆಯಾಗಿಲ್ಲ. ಆಕಾಶದಲ್ಲಿ ಚಿಮ್ಮಿರುವುದು ಗ್ಯಾಸ್‌ ಅಲ್ಲ, ನೀರು" ಎಂದು ಹಿಂದುಸ್ತಾನ್ ಪೆಟ್ರೋಲಿಯಂ (ಹೆಚ್​ಪಿ) ಘಟಕದ ಹಿರಿಯ ವ್ಯವಸ್ಥಾಪಕರೊಬ್ಬರು ಸ್ಪಷ್ಟನೆ ನೀಡಿದ್ದಾರೆ.  

Eedina App

ಘಟಕದಲ್ಲಿ ಬೆಂಕಿ ಅನಾಹುತ ಸುರಕ್ಷತಾ ಪರೀಕ್ಷೆ ನಡೆಸಲಾಗಿದೆ. ಈ ವೇಳೆ, ನೀರನ್ನು ಚಿಮ್ಮಿಸಲಾಗಿದೆ. ಅದರ ವಿಡಿಯೋ ಮಾಡಿರುವವರು, 'ಗ್ಯಾಸ್‌ ಸೋರಿಕೆಯಾಗಿದೆ' ಎಂಬ ತಪ್ಪು ಮಾಹಿತಿಯೊಂದಿಗೆ ವಿಡಿಯೋವನ್ನು ಹರಿಬಿಟ್ಟು, ಆತಂಕ ಸೃಷ್ಟಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಟ್ಟಿಟ್ಟರ್‍‌ ಬಳಕೆದಾರರೊಬ್ಬರು "ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಅನಿಲ ಸೋರಿಕೆಯಾಗಿದೆ" ಎಂದು ತಮ್ಮ ವಾಲ್‌ನಲ್ಲಿ ಬರದುಕೊಂಡು, ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋ ನೋಡಿದ ಎಷ್ಟೋ ಟ್ವಿಟ್ಟರ್ ಬಳಕೆದಾರರು ಆತಂಕಗೊಂಡಿದ್ದರು.

AV Eye Hospital ad

“ಅಗ್ನಿ ಅವಘಡದ ವೇಳೆ ಯಾವ ರೀತಿಯಾಗಿ ಸುರಕ್ಷತೆ ಕೈಗೊಳ್ಳಬೇಕೆಂಬ ಅಣಕು ಪ್ರದರ್ಶನ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿತ್ತು. ಅನುಮತಿ ಪಡೆದು ಅಣಕು ಪ್ರದರ್ಶನ ನಡೆಸಲಾಗಿದೆ. ಆದರೆ, ಅದರ ವಿಡಿಯೋ ಮಾಡಿದ ಕಿಡಿಗೇಡಿಗಳು, ತಪ್ಪು ಮಾಹಿತಿಯೊಂದಿಗೆ ಹಂಚಿಕೊಂಡಿದ್ದಾರೆ" ಎಂದು ಹೆಚ್‌ಪಿ ಹಿರಿಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app