ನಾಗೇಶ ಹೆಗಡೆ

Nagesha Hegade

ಕನ್ನಡದ ಹೊಸ ತಲೆಮಾರಿಗೆ 'ಪರಿಸರ' ಎಂದಾಕ್ಷಣ ನೆನಪಾಗುವ ಮೊದಲ ಹೆಸರು ನಾಗೇಶ ಹೆಗಡೆ. 'ಪ್ರಜಾವಾಣಿ' ಬಳಗದ 'ಸುಧಾ' ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ವಿಜ್ಞಾನ-ತಂತ್ರಜ್ಞಾನದ ಲೇಖನಗಳು ಕನ್ನಡದಲ್ಲಿ ಹೆಚ್ಚು ಸಿಗುತ್ತಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಇವರ ಪ್ರೋತ್ಸಾಹವೂ ಒಂದು. ಎಂತಹ ಕ್ಲಿಷ್ಟ ವಿಷಯವೇ ಆದರೂ, ಜನಸಾಮಾನ್ಯರಿಗೆ ಸಲೀಸಾಗಿ ಅರ್ಥವಾಗುವಂತೆ ಬರೆಯುವುದು ಇವರ ಬರಹಗಳ ಜೀವಾಳ.