ಎಎಪಿ ಕಾರ್ಯಕ್ರಮಗಳಿಗೆ ಬಿಜೆಪಿಯಿಂದ ಬೆದರಿಕೆ ಹಾಕಿ ಗೂಂಡಾಗಿರಿ ಪ್ರದರ್ಶನ; ಅರವಿಂದ ಕೇಜ್ರಿವಾಲ್ ಅರೋಪ

Arvind Kejriwal
  • ಬಿಜೆಪಿ ಗುಜರಾತ್‌ನಲ್ಲಿ ಗೂಂಡಾಗಿರಿ ಪ್ರದರ್ಶಿಸುತ್ತಿದೆ ಎಂದು ಕೇಜ್ರಿವಾಲ್‌ ಆರೋಪ
  • ಅಧಿಕಾರಕ್ಕೆ ಬಂದರೆ ಗುಜರಾತ್‌ನಲ್ಲಿ ಮದ್ಯ ಮಾರಾಟ ನಿಷೇಧಗೊಳಿಸುವ ಭರವಸೆ

ಆಮ್‌ ಆದ್ಮಿ ಪಕ್ಷವು (ಎಎಪಿ) ಗುಜರಾತ್‌ನಲ್ಲಿ ನಡೆಸುವ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಆ ಸ್ಥಳದ ಮಾಲೀಕರಿಗೆ ಬಿಜೆಪಿ ಬೆದರಿಕೆ ಹಾಕುತ್ತಿದೆ. ಬಿಜೆಪಿಯು ರಾಜ್ಯದಲ್ಲಿ ಗೂಂಡಾಗಿರಿ ಪ್ರದರ್ಶನ ಮಾಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಂಗಳವಾರ (ಸೆ. 20) ಹೇಳಿದ್ದಾರೆ. 

ಮಂಗಳವಾರ ಮಧ್ಯಾಹ್ನ ಗುಜರಾತ್‌ನ ವಡೋದರಾಕ್ಕೆ ಆಗಮಿಸಿದ ಕೇಜ್ರಿವಾಲ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ಬಿಜೆಪಿ ಬೆದರಿಕೆ ಕರೆಗಳಿಂದ ಪಕ್ಷವು 13 ಬಾರಿ ಕಾರ್ಯಕ್ರಮಗಳ ಸ್ಥಳ ಬದಲಾಯಿಸಬೇಕಾಯಿತು. ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮದ್ಯ ಮಾರಾಟ ನಿಷೇಧಿಸುತ್ತದೆ ಎಂದು ಭರವಸೆ ನೀಡಿದರು. 

ಎಎಪಿ ಮಂಗಳವಾರ ನಿಗದಿ ಮಾಡಿದ್ದ ಕಾರ್ಯಕ್ರಮ ನಡೆಯುವ ಸ್ಥಳದ ಮಾಲೀಕರನ್ನು ಬಿಜೆಪಿ ಸಂಪರ್ಕಿಸಿದೆ ಎಂದು ದೂರಿದರು.  

“ಅವರು ಈ ರೀತಿ ಸ್ಥಳಗಳ ಮಾಲೀಕರಿಗೆ ಹೆಸರಿಸುವುದು ಸರಿಯಲ್ಲ. ನಾವು ಶತ್ರುಗಳಲ್ಲ, ಸಹ ಸ್ಪರ್ಧಿಗಳು. ನ್ಯಾಯಯುತವಾಗಿ ನಡೆದುಕೊಳ್ಳಬೇಕು. ನಮ್ಮ ಪಾಡಿಗೆ ನಮ್ಮನ್ನು ಬಿಡದೆ ಬಿಜೆಪಿಯವರು ಗೂಂಡಾಗಿರಿಯನ್ನು ಆಶ್ರಯಿಸುತ್ತಿದ್ದಾರೆ. ಅವರು ಇದನ್ನು ನಮಗೆ ಮಾತ್ರ ಮಾಡಿಲ್ಲ, ಗುಜರಾತ್ ಜನತೆಗೂ ಮಾಡಿದ್ದಾರೆ. ಗುಜರಾತ್‌ನ ಜನರು ಬಿಜೆಪಿಯ ಗೂಂಡಾಗಿರಿಯಿಂದ ಬೇಸತ್ತಿದ್ದಾರೆ” ಎಂದು ಕೇಜ್ರಿವಾಲ್‌ ಹೇಳಿದರು.

ವಡೋದರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಕೇಜ್ರಿವಾಲ್‌ ಅವರು ಅಲ್ಲಿ ನೆರೆದಿದ್ದ ಧಾರ್ಮಿಕ ಗುಂಪಿನ ಕಾರ್ಯಕರ್ತರಿಂದ ಮೋದಿ ಪರ ಘೋಷಣೆ ಕೇಳಿದ್ದರು.  

ಈ ಸುದ್ದಿ ಓದಿದ್ದೀರಾ? ಅಮಿತ್ ಶಾ- ಪಳನಿಸ್ವಾಮಿ ಭೇಟಿ | ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿಯ ಭವಿಷ್ಯದ ಬಗ್ಗೆ ಚರ್ಚೆ ಸಾಧ್ಯತೆ

“ನಾವು ಮದ್ಯ ನಿಷೇಧದ ಕಾನೂನನ್ನು ಜಾರಿಗೊಳಿಸುತ್ತೇವೆ. ಎಎಪಿ ಅಕ್ರಮ ಹಣದಲ್ಲಿ ನಡೆಯುವ ಪಕ್ಷವಲ್ಲ. ನಾವು ಪಾರದರ್ಶಕತೆ ಹೊಂದಿದ್ದೇವೆ. ಪ್ರಾಮಾಣಿಕ ವಿಧಾನಗಳ ಮೂಲಕ ಹಣ ಪಡೆದಿದ್ದೇವೆ” ಎಂದು ಅವರು ಹೇಳಿದರು.

“ಭಗವಂತ್ ಮಾನ್ ಅವರು ಮೂರು ತಿಂಗಳೊಳಗೆ ವಿದ್ಯುತ್ ಅನ್ನು ಉಚಿತವಾಗಿ ನೀಡಿದ್ದಾರೆ. ಇತರ ಪಕ್ಷಗಳು ಇಷ್ಟು ವರ್ಷಗಳ ಕಾಲ ಅದನ್ನು ಏಕೆ ಉಚಿತವಾಗಿ ನೀಡಲಿಲ್ಲ? ಪಂಜಾಬ್ ಜನರ ಎಲ್ಲ ಹಣ ಎಲ್ಲಿದೆ? ಹಿಂದಿನ ಪಕ್ಷಗಳು ಎಲ್ಲ ಹಣವನ್ನು ಎಲ್ಲಿ ಕೊಂಡೊಯ್ದವು? ನಾನು ಜನಪರ ವ್ಯಕ್ತಿ. ನಾನು ರಾಜಕೀಯ ಮಾಡುವುದಿಲ್ಲ” ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರ ಕಾರ್ಯಗಳನ್ನು ಶ್ಲಾಘಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್