ಆದಿತ್ಯ ಠಾಕ್ರೆ- ತೇಜಸ್ವಿ ಯಾದವ್ ಭೇಟಿ | ಮುಂಬೈ ಚುನಾವಣೆಯಲ್ಲಿ ಠಾಕ್ರೆ ಬಣದ ಪರ ಯಾದವ್ ಪ್ರಚಾರ?

Aaditya Thackray and tejaswi yadav.
  • ಮುಂಬೈ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣ
  • ನಿತೀಶ್ ಕುಮಾರ್‌ ಜೊತೆಗೆ ಸಭೆ ನಡೆಸಿದ ಆದಿತ್ಯ ಠಾಕ್ರೆ

ಮುಂಬರುವ ಬೃಹತ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಉದ್ಧವ್ ಠಾಕ್ರೆಯ ಬಾಳಾ ಸಾಹೇಬ್‌ ಶಿವಸೇನೆ ತಯಾರಿ ನಡೆಸಿದೆ. ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಉದ್ಧವ್ ಠಾಕ್ರೆ ಬಣದ ಪರವಾಗಿ ಪ್ರಚಾರ ಮಾಡುವ ಸಾಧ್ಯತೆಯಿದೆ.

ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಬುಧವಾರ ತೇಜಸ್ವಿ ಯಾದವ್ ಅವರನ್ನು ಪಾಟ್ನಾದಲ್ಲಿ ಭೇಟಿಯಾದ ಬಳಿಕ ಈ ಬೆಳವಣಿಗೆ ನಡೆದಿದೆ. 

ಶಿವಸೇನೆ ವಿಭಜನೆಯಾದ ಬಳಿಕ ಭಾರತೀಯ ಜನತಾ ಪಕ್ಷ (ಬಿಜೆಪಿ)ವನ್ನು ಸೋಲಿಸಲು ಉದ್ಧವ್ ಬಣ ಸಿದ್ಧತೆ ನಡೆಸಿದೆ. ಮುಂಬೈ ಮಹಾನಗರ ಪಾಲಿಕೆಯಲ್ಲಿನ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ ಎನ್ನಲಾಗುತ್ತಿದೆ.

ಉತ್ತರಪ್ರದೇಶ ಮತ್ತು ಬಿಹಾರದಿಂದ ಮುಂಬೈಗೆ ವಲಸೆ ಬಂದು ಅಲ್ಲಿ ನೆಲೆಸಿದವರ ಸಂಖ್ಯೆ 50 ಲಕ್ಷ ಇರುವುದರಿಂದ ಬಿಎಂಸಿ ಚುನಾವಣೆಯಲ್ಲಿ ವಲಸೆ ಬಂದವರು ಬಹುದೊಡ್ಡ ಪಾತ್ರ ವಹಿಸಲಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಮಧ್ಯಪ್ರದೇಶ | ಭಾರತ್ ಜೋಡೋಗೆ ಪ್ರತಿಯಾತ್ರೆ ಪ್ರಾರಂಭಿಸಿದ ಬಿಜೆಪಿ

ಏಕನಾಥ್ ಶಿಂಧೆ ಶಿವಸೇನೆ ವಿರುದ್ಧ ಬಂಡಾಯ ಸಾರಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದ್ದರು. ಹಾಗಾಗಿ ಬಿಜೆಪಿ ಸೇರಿದಂತೆ ವಿಭಜನೆಯಾಗಿರುವ ಎರಡು ಶಿವಸೇನಾ ಬಣಗಳಿಗೆ ಮುಂಬೈ ಚುನಾವಣಾ ಭಾರೀ ಪ್ರತಿಷ್ಠೆಯ ಕಣವಾಗಲಿದೆ. 

ಉದ್ಧವ್ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ಅವರು ಬಿಎಂಸಿ ಚುನಾವಣೆಯಲ್ಲಿ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡುವಂತೆ ಕೋರಲು ಆರ್‌ಜೆಡಿ ನಾಯಕರನ್ನು ಭೇಟಿ ಮಾಡಿರುವುದಾಗಿ ವರದಿಯಾಗಿದೆ. 

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರಿಬ್ಬರ ಜೊತೆ ಆದಿತ್ಯ ಠಾಕ್ರೆ ಜಂಟಿಯಾಗಿ ಸಭೆ ನಡೆಸಿದ್ದಾರೆ. ಈ ಮೊದಲು ಠಾಕ್ರೆ ಮತ್ತು ಯಾದವ್ ದೂರವಾಣಿಯಲ್ಲಿ ಮಾತನಾಡಿದ್ದರು. ಆದರೆ, ಇದೇ ಮೊದಲ ಬಾರಿ ಮುಖಮುಖಿ ಭೇಟಿಯಾಗಿದ್ದಾರೆ.

ಮೂವತ್ತು ನಿಮಿಷಗಳ ಸಭೆ ಬಳಿಕ ಮಾತನಾಡಿದ ಆದಿತ್ಯಾ ಠಾಕ್ರೆ, "ನಾವೆಲ್ಲ ಯುವ ನಾಯಕರು ಹೀಗೆ ಹೊಂದಾಣಿಕೆಯಿಂದ ಇದ್ದರೆ ದೇಶಕ್ಕೆ ಒಳಿತಾಗುತ್ತದೆ. ಈ ಸ್ನೇಹ ಹೀಗೆ ಮುಂದೆ ಸಾಗಲಿದೆ" ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180