ಬಾಬು ಜಗಜೀವನ್ ರಾಮ್ ಜಯಂತಿಗೆ ನಮನ ಸಲ್ಲಿಸಲು ಎದ್ದು ಬಂದರೇ ಅರುಣ್ ಜೇಟ್ಲಿ?!

  • ಏಪ್ರಿಲ್ 5ರಂದು ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದ ಪ್ರಧಾನಿ ಮೋದಿ
  • ಪೋಟೋದಲ್ಲಿ ಪ್ರತ್ಯಕ್ಷರಾದ ದಿವಂಗತ ಅರುಣ್ ಜೇಟ್ಲಿ

ಕಳೆದ ಏಪ್ರಿಲ್ 5ರಂದು ಬಾಬು ಜಗಜೀವನ್ ರಾಮ್ 115ನೇ ಜಯಂತಿಯಂದು ನಮನ ಸಲ್ಲಿಸಿದ ಫೋಟೋವೊಂದನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಈ ಫೋಟೋದಲ್ಲಿ ದಿವಂಗತ ಅರುಣ್ ಜೇಟ್ಲಿ ಕಂಡು ಬಂದಿರುವುದು ವ್ಯಾಪಕ ಟ್ರೋಲ್‌ಗೆ ಕಾರಣವಾಗಿದೆ.   

ಏಪ್ರಿಲ್ 5, 2022ರಂದು ಭಾರತದ ಶ್ರೇಷ್ಠ ದಲಿತ ನಾಯಕರಲ್ಲೊಬ್ಬರಾದ ಬಾಬು ಜಗಜೀವನ್ ರಾಮ್ 115ನೇ ಜಯಂತಿ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, "ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು ಅವರಿಗೆ ನಮನಗಳು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮತ್ತು ಸ್ವಾತಂತ್ರ್ಯದ ನಂತರ ಅವರ ಗಮನಾರ್ಹ ಕೊಡುಗೆಯನ್ನು ನಮ್ಮ ದೇಶವು ಯಾವಾಗಲೂ ಸ್ಮರಿಸುತ್ತದೆ. ಅವರ ಆಡಳಿತ ಕೌಶಲ್ಯ ಮತ್ತು ಬಡವರ ಮೇಲಿನ ಕಾಳಜಿಗಾಗಿ ಅವರು ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದ್ದಾರೆ” ಎಂದು ಬರೆದಿದ್ದಾರೆ.

ವಿಪರ್ಯಾಸವೇನೆಂದರೆ ಅವರು ಟ್ವೀಟ್ ಮಾಡಿದ ಫೋಟೋದಲ್ಲಿ 2019ರ ಆಗಸ್ಟ್ 24ರಂದು ನಿಧನರಾಗಿದ್ದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿದ್ದ ಅರುಣ್ ಜೇಟ್ಲಿ ಇರುವುದು ಕಂಡು ಬಂದಿದೆ. ಇದು ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಟ್ರೋಲ್‌ಗೆ ಕಾರಣವಾಗಿದೆ.

ಅಮಿರ್ ಶೇರ್ವಾಣಿ ಇದನ್ನು ಗಮನಿಸಿ, ರೀಟ್ವೀಟ್ ಮಾಡಿ, "ತಮ್ಮ ಹರಿಯ ಬಿಟ್ಟ ಚಿತಾಭಸ್ಮದಿಂದ ಜೇಟ್ಲಿಯವರು ಎದ್ದು ಬಂದರು" ಎಂದು ಬರೆದಿದ್ದಾರೆ.

ನ್ಯಾಯವಾದಿ ಪುನೀತ್ ಅಪ್ಪು ಪ್ರಧಾನಿಯವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು "ಜುಮ್ಲಾ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ" ಎಂದು ಬರೆದುಕೊಂಡಿದ್ದಾರೆ. 

ಬಾಬು ಜಗಜೀವನ್ ರಾಮ್ ಜಯಂತಿಗೆ ನರೇಂದ್ರ ಮೋದಿಯವರು ಹಳೆಯ ಫೋಟೋವೊಂದನ್ನು ಹಂಚಿಕೊಂಡು ನಮನ ಸಲ್ಲಿಸಿದ್ದಾಗಿ ತಿಳಿಸಿ ನಗೆಪಾಟಲಿಗೀಡಾಗಿದ್ದಾರೆ. ಫೋಟೋ ಟ್ರೋಲ್ ಆಗುತ್ತಲೇ ಇದ್ದರೂ ಈವರೆಗೆ 3,929 ಮಂದಿ ರೀಟ್ವೀಟ್ ಮಾಡಿದ್ದಾರೆ. ಅಲ್ಲದೇ,  ಪ್ರಧಾನಿ ಮೋದಿಯವರ ಖಾತೆಯಿಂದ ಈವರೆಗೆ (ಏಪ್ರಿಲ್ 8, 2022) ಡಿಲೀಟ್ ಮಾಡಿಲ್ಲ ಎನ್ನುವುದು ವಿಪರ್ಯಾಸ.  ಅದು ಈಗಲೂ ಕೂಡ ಕಾಣಲು ಸಾಧ್ಯ.

Image

ಮಾಧ್ಯಮಗಳೂ ಈ ಫೋಟೋವನ್ನು ಸುದ್ದಿಯೊಂದಿಗೆ ಪ್ರಕಟಿಸಿವೆ. ಆದರೆ ಫೋಟೋವನ್ನು ಕ್ರಾಪ್‌ ಮಾಡಿ ಪ್ರಕಟಣೆಗೆ ಬಳಸಿವೆ. ಎನ್‌ಡಿಟಿವಿ ಹೀಗೆ ಫೋಟೋವನ್ನು ಕ್ರಾಪ್‌ ಮಾಡಿ ಬಳಸಿದೆ. 

Image
NDTV Screenshot
ನಿಮಗೆ ಏನು ಅನ್ನಿಸ್ತು?
5 ವೋಟ್