ಭಾರತ್ ಜೋಡೋ | ಕೈಬೀಸುತ್ತಾ ಯಾತ್ರಿಗಳ ಫೋಟೋ ಸೆರೆ ಹಿಡಿದ ಸ್ಥಳೀಯರು

Bharat jodo yatra in maharashtra
  • ಹಿಂಗೋಲಿ ಸೇತುವೆ ಮೇಲೆ ಜನವೋ ಜನ
  • ಇಂದಿರಾ ಗಾಂಧಿ, ನೆಹರೂ ಇರುವ ಚಿತ್ರ ಉಡುಗೊರೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಂಗಳವಾರ 69ನೇ ದಿನಕ್ಕೆ ಕಾಲಿಟ್ಟಿದೆ. ಮಹಾರಾಷ್ಟ್ರದ ವಿದರ್ಭದ ವಾಶಿಮ್ ಜಿಲ್ಲೆಗೆ ತಲುಪಲಿದೆ.

ಮಂಗಳವಾರ ಬೆಳಗ್ಗೆ ಹಿಂಗೋಲಿ ಜಿಲ್ಲೆಯ ಫಾಲೇಗಾಂವ್‌ನಿಂದ ಯಾತ್ರೆ ಆರಂಭವಾಗಿದೆ. ಕಾಂಗ್ರೆಸ್ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಮಹಾರಾಷ್ಟ್ರದ ಮಾಜಿ ಸಚಿವೆ ಯಶೋಮತಿ ಠಾಕೂರ್ ಹಾಗೂ ಪಕ್ಷದ ಇತರ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಕೈಬೀಸುತ್ತಾ ಯಾತ್ರಿಗಳ ಫೋಟೋ ಸೆರೆ ಹಿಡಿದ ಸ್ಥಳೀಯರು

ಭಾರತ್ ಜೋಡೋ ಯಾತ್ರೆಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರದಲ್ಲಿಯೂ ಸಹ ಪಾದಯಾತ್ರೆ ನೋಡಲು ಮನೆ ಮೇಲ್ಛಾವಣಿ ಮೇಲೆ, ಮೇಲುರಸ್ತೆಗಳ ಮೇಲೆ ಜನರು ನೂಕುನುಗ್ಗಲಿನಲ್ಲಿ ನೆರೆದಿದ್ದ ದೃಶ್ಯಗಳು ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದ್ದವು. ಇದೀಗ ಮಹಾರಾಷ್ಟ್ರದ ಜನತೆ ಯಾತ್ರಿಗಳಿಗೆ ಕೈಬೀಸುತ್ತಾ, ಪಾದಯಾತ್ರೆಯಲ್ಲಿ ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವ ದೃಶ್ಯಗಳು ಕಂಡುಬಂದಿವೆ. 

AV Eye Hospital ad

ಬಿರ್ಸಾ ಮುಂಡಾ ಜನ್ಮದಿನದ ಶುಭಕೋರಿದ ಜೈರಾಮ್ ರಮೇಶ್

ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಜನ್ಮದಿನದ ಪ್ರಯುಕ್ತ ಜೈರಾಮ್ ರಮೇಶ್ ಅವರು ಶುಭಕೋರಿ ಟ್ವೀಟ್ ಮಾಡಿದ್ದಾರೆ.

"ಇಂದು ಭಾರತ್ ಜೋಡೋ ಯಾತ್ರೆಯ 69ನೇ ದಿನ, ಸರ್ದಾರ್ ಪಟೇಲ್ ಪಟೇಲರಿಗಿಂತ 15 ದಿನಗಳ ನಂತರ ಜನಿಸಿದ ಬಿರ್ಸಾ ಮುಂಡಾ ಅವರ 147ನೇ ಜನ್ಮದಿನ. ಆದರೆ, ದುರಂತವೆಂದರೆ ಅವರು ತಮ್ಮ 25ನೇ ವಯಸ್ಸಿನಲ್ಲಿಯೇ ರಾಂಚಿಯ ಬ್ರಿಟಿಷ್ ಜೈಲಿನಲ್ಲಿ ಮೃತರಾದರು" ಎಂದು ಹೇಳಿದ್ದಾರೆ.

"ಬುಡಕಟ್ಟು ಸಮುದಾಯದವರ ಭೂಮಿಯ ಹಕ್ಕುಗಳಿಗಾಗಿ ಹೋರಾಡಿ, ಮಡಿದ ಬಿರ್ಸಾ ಮುಂಡಾ ಅವರು ಎಲ್ಲ ಭಾರತೀಯರಿಗೆ ಸ್ಫೂರ್ತಿಯಾಗಬೇಕು" ಎಂದು ಹೇಳಿದ್ದಾರೆ.

ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಹೋರಾಟವನ್ನು ಸ್ಮರಿಸಲು ಸರ್ಕಾರವು ನವೆಂಬರ್ 15 ಅನ್ನು ‘ಜಂಜಾಟಿಯ ಗೌರವ್ ದಿವಸ್’ ಎಂದು ಘೋಷಿಸಿತ್ತು.

ಇಂದಿರಾ ಗಾಂಧಿ, ನೆಹರೂ ಇರುವ ಚಿತ್ರ ಉಡುಗೊರೆ

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಆರಂಭಿಸಿದಾಗಿನಿಂದ ಅವರಿಗೆ ಉಡುಗೊರೆಗಳು ದೊರೆಯುತ್ತಲೇ ಇವೆ. ಗಾಂಧಿ ಕುಟುಂಬದ ಚಿತ್ರಗಳು ಹೆಚೆತ್ತಾವಾಗಿ ಉಡುಗೊರೆ ರೂಪದಲ್ಲಿ ರಾಹುಲ್ ಗಾಂಧಿ ಕೈಸೇರಿವೆ. ಇದೀಗ ಅಂತಹದ್ದೆ ಮತ್ತೊಂದು ಚಿತ್ರವನ್ನು ರಾಹುಲ್ ಗಾಂಧಿ ಸ್ವೀಕರಿಸಿದ್ದಾರೆ. ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಇಂದಿರಾಗಾಂಧಿ ಅವರು ಕುಳಿತಿರುವ ಫೋಟೋವೊಂದನ್ನು ಅಭಿಯಾನಿಯೊಬ್ಬರು ನೀಡಿದ್ದಾರೆ.

ಹಿಂಗೋಲಿ ಸೇತುವೆ ಮೇಲೆ ಜನವೋ ಜನ!

ಕಾಂಗ್ರೆಸ್ಸಿನ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆಯನ್ನು ಸೇರಿಕೊಳ್ಳುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ಪಾದಯಾತ್ರಿಗಳು ಹಿಂಗೋಲಿ ಜಿಲ್ಲೆಯ ಸೇತುವೆಯೊಂದರ ಮೇಲೆ ಹೆಜ್ಜೆ ಹಾಕುತ್ತಿರುವಾಗಲೂ ಇಂತಹದೊಂದು ದೃಶ್ಯ ಸೆರೆಸಿಕ್ಕಿದೆ.

ಭಾರತದ ತ್ರಿವರ್ಣ ಧ್ವಜದ ಜೊತೆಗೆ ಹೆಚ್ಚಿನ ಸಂಖ್ಯೆಯ ಜನರಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app