
- ಭಾರತ್ ಜೋಡೋ ಕಾರ್ಯಕ್ರಮದ ವೇಳೆ ನೇಪಾಳ ರಾಷ್ಟ್ರಗೀತೆ ಪ್ರಸಾರ
- ನವೆಂಬರ್ 20ರಂದು ಮಧ್ಯಪ್ರದೇಶ ಪ್ರವೇಶಿಸಲಿರುವ ಭಾರತ್ ಜೋಡೋ
ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರದಲ್ಲಿ ಗುರುವಾರ (ನ.17) 71ನೇ ಕಾಲಿರಿಸಿದೆ. ಯಾತ್ರೆಯ ವಿರಾಮದ ವೇಳೆ, ವೇದಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎದುರಲ್ಲೇ ರಾಷ್ಟ್ರಗೀತೆ ವಿಷಯದಲ್ಲಿ ಅಭಾಸಕಾರಿ ಘಟನೆಯೊಂದು ನಡೆದಿದೆ. ಆ ವಿಷಯ ಇದೀಗ ಬಿಜೆಪಿಗೆ ರಾಹುಲ್ ವಿರುದ್ಧ ವಾಗ್ದಾಳಿಗೆ ಮತ್ತೊಂದು ಅಸ್ತ್ರವಾಗಿ ಒದಗಿಬಂದಿದೆ.
ಕಾರ್ಯಕ್ರಮದ ವೇಳೆ ರಾಹುಲ್ ಗಾಂಧಿ ಅವರು ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವಂತೆ ಸೂಚಿಸಿದ್ದಾರೆ. ಆದರೆ ಅಲ್ಲಿ ಏಕಾಏಕಿ ನೇಪಾಳ ರಾಷ್ಟ್ರಗೀತೆಯು ಪ್ರಸಾರವಾಗಿದೆ. ಈ ವೇಳೆ ಒಂದು ಕ್ಷಣ ಎಲ್ಲರೂ ಅವಕ್ಕಾಗಿರುವುದು ಕಂಡು ಬಂದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಈಗ ರಾಷ್ಟ್ರಗೀತೆ ಆರಂಭವಾಗಲಿದೆ” ಎಂದು ರಾಹುಲ್ ಗಾಂಧಿ ಮೈಕ್ನಲ್ಲಿ ಹೇಳುತ್ತಾರೆ. ಎಲ್ಲರೂ ರಾಷ್ಟ್ರಗೀತೆಗೆ ಗೌರವ ಸೂಚಿಸಲು ಅಣಿಯಾಗುತ್ತಾರೆ.
ಆದರೆ ಅನ್ಯ ದೇಶದ ರಾಷ್ಟ್ರಗೀತೆ ಪ್ರಸಾರವಾಗುತ್ತಿರುವುದು ಕೇಳುತ್ತದೆ. ಆಗ ರಾಹುಲ್ ಗಾಂಧಿಯವರು ಆಶ್ಚರ್ಯದಿಂದ ನೋಡಿ ಕಾಂಗ್ರೆಸ್ ನಾಯಕರ ಕಡೆ ಪ್ರಶ್ನಾರ್ಥಕವಾಗಿ ಸಜ್ಞೆ ಮಾಡುತ್ತಾರೆ. ಬಳಿಕ ಸಂಗೀತದ ಉಸ್ತುವಾರಿ ವಹಿಸಿದ್ದವರು ಅಲ್ಲಿಗೆ ಧಾವಿಸುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ತಪ್ಪಾಗಿ ಪ್ರಸಾರ ಮಾಡಿದ ಗೀತೆಯು ನೇಪಾಳದ ರಾಷ್ಟ್ರಗೀತೆಯಾಗಿತ್ತು. ಕೊನೆಗೂ ತಪ್ಪು ಸರಿಪಡಿಸಿ, ಆ ಗೀತೆಯನ್ನು ಕೂಡಲೇ ನಿಲ್ಲಿಸಿ, ರಾಷ್ಟ್ರಗೀತೆ ಹಾಕಲಾಯಿತು. ಆದರೆ ಐದು ಪ್ಯಾರಾಗಳನ್ನು ಒಳಗೊಂಡ ಆವೃತ್ತಿಯ ದೀರ್ಘ ಗೀತೆಯನ್ನು ಆಯ್ಕೆ ಮಾಡಲಾಗಿತ್ತು ಎಂದು ಟ್ವಿಟರ್ ಪೋಸ್ಟ್ನಲ್ಲಿ ಹೇಳಲಾಗಿದೆ.
ಆದ್ದರಿಂದ ಗೀತೆಯು ಪ್ರಸಾರವಾಗುವಾಗಲೇ ಕೆಲವರು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ್ದಾರೆ. ಆಗ ಗೀತೆಯನ್ನು ನಿಲ್ಲಿಸಲಾಗಿದೆ ಎಂದು ಟ್ವಿಟರ್ ಪೋಸ್ಟ್ಗಳು ಹೇಳಿವೆ.
ತಪ್ಪು ರಾಷ್ಟ್ರಗೀತೆ ಪ್ರಸಾರವಾಗಿದ್ದ ವಿಡಿಯೊವನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯೂ ಹಂಚಿಕೊಂಡಿದ್ದಾರೆ. “ಭಾರತವನ್ನು ಒಂದುಗೂಡಿಸಲು ಈ ರಾಷ್ಟ್ರಗೀತೆಯೇ?” ಎಂದು ವ್ಯಂಗ್ಯವಾಡಿದ್ದಾರೆ.
भारत जोड़ने वालों का राष्ट्रगीत? pic.twitter.com/nMUR1KO9iZ
— Sunil Deodhar (@Sunil_Deodhar) November 17, 2022
ಈ ಸುದ್ದಿ ಓದಿದ್ದೀರಾ? ಇಂಡಿಯನ್ ಓವರ್ ಸೀಸ್ ಬ್ಯಾಂಕ್ಗೆ 750 ಕೋಟಿ ರೂ. ವಂಚನೆ; ರೊಟೊಮ್ಯಾಕ್ ಕಂಪನಿ ವಿರುದ್ಧ ಸಿಬಿಐ ಪ್ರಕರಣ ದಾಖಲು
ಈ ವಿಡಿಯೊ ಹಂಚಿಕೊಂಡಿರುವ ತಮಿಳುನಾಡಿನ ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಅವರು, “ರಾಹುಲ್ ಗಾಂಧಿಯವರೇ ಏನಿದು?” ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
Sh. @RahulGandhi, what is this?pic.twitter.com/LAabKCOzqP
— Amar Prasad Reddy (@amarprasadreddy) November 16, 2022
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು ನವೆಂಬರ್ 20ರಂದು ಮಧ್ಯಪ್ರದೇಶವನ್ನು ಪ್ರವೇಶಿಸಲಿದೆ.