ಭಾರತ್ ಜೋಡೋ ಯಾತ್ರೆ | 15ನೇ ದಿನ ಮುಕ್ತಾಯ; ಯಾತ್ರೆಯಲ್ಲಿ ಪಾಲ್ಗೊಂಡ ಅಶೋಕ್ ಗೆಹ್ಲೋಟ್

  • ಯಾತ್ರೆಯಲ್ಲಿ ಹೆಜ್ಜೆ ಹಾಕಿದ ವಿಕೇಲ ಚೇತನ
  • ಯಾತ್ರಾರ್ಥಿಗಳನ್ನು ಸ್ವಾಗತಿಸಿದ ಎನ್‌ಸಿಸಿ

'ಭಾರತ್ ಜೋಡೋ ಯಾತ್ರೆ'ಯು 15ನೇ ದಿನ ಕೇರಳದ ಚಿರಂಗಾರದಲ್ಲಿ ಮುಕ್ತಾಯಗೊಂಡಿದೆ. ಸೋನಿಯಾ ಗಾಂಧಿ ಅವರೊಂದಿಗಿನ ಸಭೆಯ ಬಳಿಕ ಅಶೋಕ್ ಗೆಹ್ಲೋಟ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪಾಲ್ಗೊಂಡಿದ್ದಾರೆ. ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಬಳಿಕ ಇದೀಗ ಗೆಹ್ಲೋಟ್ ಅವರು ಹೆಜ್ಜೆ ಹಾಕುತ್ತಿದ್ದಾರೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರ ಭೇಟಿಯ ಬಳಿಕ ನೇರವಾಗಿ ಕೇರಳದಲ್ಲಿ ನಡೆಯುತ್ತಿರುವ ಯಾತ್ರೆಗೆ ಬಂದು ಸೇರಿಕೊಂಡಿದ್ದಾರೆ. 

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡುವೆ ಯಾತ್ರೆಯಲ್ಲಿ ರಾಜಸ್ಥಾನ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ವಿಕಲ ಚೇತನ

ಭಾರತ್ ಜೋಡೋ ಯಾತ್ರೆಯ 15ನೇ ದಿನ ವಿಕಲ ಚೇತನರೊಬ್ಬರು ರಾಹುಲ್ ಗಾಂಧಿ ಅವರ ಜೊತೆಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್, “ಧೈರ್ಯ ಬಂಡೆ ಇದ್ದಂತೆ, ಈ ಧೈರ್ಯದ ಮುಂದೆ ನಾವೆಲ್ಲರೂ ತಲೆ ಬಾಗುತ್ತೇವೆ” ಎಂದಿದೆ.

'ವಸುದೈವ ಕುಟುಂಬಕಂ' ಎಂದ ಕಾಂಗ್ರೆಸ್‌

ರಾಹುಲ್ ಗಾಂಧಿ ಅವರು ಯಾತ್ರೆಯಲ್ಲಿ ನೆರೆದಿದ್ದ ಕುಟುಂಬಗಳ ಜೊತೆಗಿನ ಫೋಟೋ ಹಂಚಿಕೊಂಡಿರುವ ಕಾಂಗ್ರೆಸ್, “ನೀವು ಭಾರತವನ್ನು ಒಂದು ಕುಟುಂಬ ಎಂದು ಭಾವಿಸಿದರೆ. ಏಕತೆ ಮತ್ತು ಜವಾಬ್ದಾರಿಯ ಪ್ರಜ್ಞೆಯಿಂದ ನೋಡುತ್ತೀರಿ. ಭಿನ್ನತೆಗಳ ಹೊರತಾಗಿಯೂ ನಮ್ಮ ಗುರಿ ನಮ್ಮನ್ನು ಒಂದೇ ಕಡೆ ಇರುವಂತೆ ಮಾಡುತ್ತದೆ” ಎಂದು ಟ್ವೀಟ್ ಮಾಡಿದೆ.

ಯಾತ್ರೆಯನ್ನು ಸ್ವಾಗತಿಸಿದ ಎನ್‌ಸಿಸಿ

ಕೇರಳದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಎನ್‌ಸಿಸಿ ಸ್ವಾಗತಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಲಲ್ಲು ಅವರು, “ಈ ಎನ್‌ಸಿಸಿ ಮಕ್ಕಳಿಂದ ಅಪಾರ ಪ್ರೀತಿ ದೊರೆತಿದೆ. ನಾನು ಅತ್ತುಬಿಟ್ಟೆ” ಎಂದಿದ್ದಾರೆ.

Image

ಎನ್‌ಸಿಸಿ ವಿದ್ಯಾರ್ಥಿಗಳು ದೊಡ್ಡ ಗಾತ್ರದ ಹೂಗಳನ್ನು ಕೈಯಲ್ಲಿ ಹಿಡಿದು ರಸ್ತೆ ಪಕ್ಕ ನಿಂತಿದ್ದರು. ಪ್ರತಿಯೊಬ್ಬರ ಮುಖದಲ್ಲೂ ನಗು ಇರುವ ದೃಶ್ಯಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಹಂಚಿಕೊಂಡಿದ್ದಾರೆ.

ರಾಹುಲ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ಅಭಿಮಾನಿ

ಕೇರಳದ ರಾಹುಲ್ ಗಾಂಧಿ ಅವರ ಅಭಿಯಾನಿಯೊಬ್ಬರು ಬಹುಕಾಲದಿಂದ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ ಹಂಬಲಿಸಿರುವುದಾಗಿ ಹೇಳಿದ್ದಾರೆ. ಅದು ಇಂದು ನಿಜವಾಗುತ್ತಿರುವುದು ಖುಷಿ ತಂದಿದೆ ಎಂದು ಕೇರಳದ ಅಭಿಮಾನಿಯೋರ್ವ ತಿಳಿಸಿದರು.

'ಯಾವ ಕೆಲಸವೂ ಕೀಳಲ್ಲ' ಎಂದ ಕಾಂಗ್ರೆಸ್

ರಾಹುಲ್ ಗಾಂಧಿ ಅವರು ಬಟ್ಟೆ ಕೊಳೆಯಾಗಿರುವ ವ್ಯಕ್ತಿಯೊಂದಿಗೆ ಹೆಜ್ಜೆ ಹಾಕುತ್ತಿರುವ ಫೋಟೋ ವೈರಲ್ ಅಗಿದೆ. ಪೋಟೋವನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು “ಯಾವ ಕೆಲಸವೂ ಕೀಳಲ್ಲ, ಮಾನವೀಯತೆ ಎತ್ತಿ ಹಿಡಿಯುವ ಎಲ್ಲ ಶ್ರಮಕ್ಕೂ ಘನತೆ ಇದೆ” ಎಂದು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಮಾತನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

“ರಾಹುಲ್ ಗಾಂಧಿ ಯಾವಾಗಲೂ ಶ್ರಮದ ಘನತೆಗೆ ಪ್ರಾಮುಖ್ಯತೆ ನೀಡುವ ವ್ಯಕ್ತಿಯಾಗಿದ್ದಾರೆ ಮತ್ತು ಜನರನ್ನು ಸಮಾನತೆಯಿಂದ ನಡೆಸಿಕೊಂಡಿದ್ದಾರೆ ಎಂಬುವುದಕ್ಕೆ ಇದು ಯಾತ್ರೆಯಾದ್ಯಂತ ಸಾಕ್ಷಿಯಾಗಿದೆ” ಎಂದು ಬರೆದುಕೊಂಡಿದ್ದಾರೆ.

ಮನರಂಜನೆಯ ಕುಣಿತ ಪ್ರದರ್ಶಸಿದ ಕೇರಳಿಗರು

ಪ್ರತಿದಿನವೂ ಒಂದಿಲ್ಲೊಂದು ಸಾಂಪ್ರದಾಯಿಕ ನೃತ್ಯಗಳು ಯಾತ್ರೆಯ ಉದ್ದಕ್ಕೂ ಪ್ರದರ್ಶನಗೊಳ್ಳುತ್ತಿವೆ. ಭಾರತ್ ಜೋಡೋ ಯಾತ್ರೆಯ 15ನೇ ದಿನವೂ ಇಂತಹ ಕ್ಷಣಗಳಿಗೆ ಯಾತ್ರೆ ಸಾಕ್ಷಿಯಾಗಿದೆ.

ಕುಣಿತದ ವಿಡಿಯೋ ಹಂಚಿಕೊಂಡಿರುವ ಅಬ್ದುಲ್ ಖಾನ್ ಎನ್ನುವವರು, “ಈ ಬಣ್ಣಗಳು ಭಾರತವನ್ನು ಸಂಪರ್ಕಿಸುತ್ತವೆ ಈ ಬಣ್ಣಗಳು ದ್ವೇಷವನ್ನು ಕದಡುತ್ತವೆ. ಭಾರತವು ಈ ಬಣ್ಣಗಳಿಂದ ಮಾತ್ರ ಬಣ್ಣಬಣ್ಣವಾಗಿದೆ” ಎಂದು ಬರೆದಿದ್ದಾರೆ.

15ನೇ ದಿನ ಚಿರಂಗಾರದಲ್ಲಿ ಮುಕ್ತಾಯ 

ಭಾರತ್ ಜೋಡೋ ಯಾತ್ರೆಯ 15ನೇ ಕೇರಳದ ಚಿರಂಗಾರದಲ್ಲಿ ಕೊನೆಗೊಂಡಿದೆ. ಕಾಂಗ್ರೆಸ್ ನಾಯಕರು ಕಾರ್ಯಕ್ರಮವೊಂದನ್ನು ಮಾಡುವುದರ ಮೂಲಕ ಗುರುವಾರದ ಯಾತ್ರೆಗೆ ವಿರಾಮ ನೀಡಿದ್ದಾರೆ. ಇಂದು ರಾತ್ರಿ ಯಾತ್ರಾರ್ಥಿಗಳು ಚಿರಂಗಾರದಲ್ಲಿ ತಂಗಲಿದ್ದು, 16ನೇ ಅಲ್ಲಿಂದಲೇ ಆರಂಭವಾಗಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್