ಬಿಹಾರ ಸಂಪುಟ|ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಹಾಘಟಬಂಧನದ 31 ಶಾಸಕರು

  • ಸಚಿವ ಸ್ಥಾನಗಳ ಪೈಕಿ ಆರ್‌ಜೆಡಿಗೆ ಸಿಂಹಪಾಲು
  • ತೇಜಸ್ವಿ ಯಾದವ್ ಸಹೋದರಿನಿಗೂ ಸಚಿವ ಸ್ಥಾನ 

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದ ಮಹಾಘಟಬಂಧನ ಸರ್ಕಾರದಲ್ಲಿ 31 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು, ರಾಷ್ಟ್ರೀಯ ಜನತಾ ದಳವು ಸಚಿವಸಂಪುಟದಲ್ಲಿ ಸಿಂಹಪಾಲು ಪಡೆದಿದೆ.

ಆರ್‌ಜೆಡಿಯ 16 ಶಾಸಕರು, ಜೆಡಿಯುನ 11, ಕಾಂಗ್ರೆಸ್‌ 2, ಎಚ್ಎಎಂನ ಒಬ್ಬರು ಹಾಗೂ ಸ್ವತಂತ್ರ ಅಭ್ಯರ್ಥಿ ಸುಮೀತ್ ಕುಮಾರ್ ಅವರು ಸೇರಿದಂತೆ ಒಟ್ಟು 31 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಲಾಲು ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಕೂಡ ಪ್ರಮಾಣ ವಚನ ಸ್ವೀಕರಿಸಿದ್ದು, ಮಧ್ಯಾಹ್ನದ ನಂತರ ಖಾತೆ ಘೋಷಣೆಯಾಗಲಿದೆ.

ಮಂಗಳವಾರ ಬೆಳಗ್ಗೆ 11.30ಕ್ಕೆ ರಾಜಭವನದಲ್ಲಿ ಮಹಾಘಟಬಂಧನದ 31 ಶಾಸಕರು, ಮುಖ್ಯಮಂತ್ರಿ ನಿತೀಶ್‌ ಕುಮಾರ್ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೊಸ ಸರ್ಕಾರದಲ್ಲಿ ಒಟ್ಟು 36 ಸಚಿವ ಸ್ಥಾನಗಳು ಇರಲಿದ್ದು, ಭವಿಷ್ಯದ ವಿಸ್ತರಣೆಗಾಗಿ ಐದು ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

ಈ ಸುದ್ದಿ ಓದಿದ್ದೀರಾ? ಬಿಹಾರ | ಒಂದೆಡೆ ಸಚಿವ ಸಂಪುಟ ವಿಸ್ತರಣೆ, ಮತ್ತೊಂದೆಡೆ ಬಿಜೆಪಿ ಹೈಕಮಾಂಡ್ ಸಭೆ

ಬಿಹಾರದಲ್ಲಿ ಏಕೈಕ ದೊಡ್ಡ ಪಕ್ಷವಾಗಿರುವ ಆರ್‌ಜೆಡಿ ಸಚಿವ ಸ್ಥಾನಗಳ ಪೈಕಿ ಸಿಂಹಪಾಲು ಪಡೆದಿದ್ದು, ಪಕ್ಷದ 16 ಶಾಸಕರು ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಗೃಹ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆರ್‌ಜೆಡಿ ಪಕ್ಷದವರಿಗೆ ಸಚಿವ ಸ್ಥಾನ

ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ ಸೇರಿದಂತೆ ಆರ್‌ ಜೆಡಿಯ ಕುಮಾರ್ ಸರ್ವಜೀತ್, ಲಲಿತ್ ಯಾದವ್, ಸುರೇಂದ್ರ ಯಾದವ್, ಅಲೋಕ್ ಮೆಹ್ತಾ (ಎಂಎಲ್‌ಸಿ), ಅನಿತಾ ದೇವಿ, ಸುರೇಂದ್ರ ರಾಮ್, ಸಮೀರ್ ಮಹಾಸೇತ್, ಶಾ ನವಾಜ್ ಅಹ್ಮದ್, ಮೊಮಮ್ಮದ್ ಶಮೀಮ್, ಕಾರ್ತಿಕ್ ಮಾಸ್ಟರ್(ಎಂಎಲ್‌ಸಿ), ರಮಾನಂದ್ ಯಾದವ್, ಚಂದ್ರಶೇಖರ್ ಯಾದವ್, ಸುಧಾಕರ್ ಸಿಂಗ್ ಹಾಗೂ ಜಿತೇಂದ್ರ ರೈ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್