ಬಿಹಾರ ಬಿಕ್ಕಟ್ಟು | ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

  • ಮೈತ್ರಿ ಮುರಿದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ
  • ಶಾ ಮತ್ತು ಸಿಂಗ್‌ ಅವರನ್ನು ಆರೋಪಿಸಿದ ನಿತೀಶ್

ಜನತಾ ದಳ ಯುನೈಟೆಡ್ (ಜೆಡಿಯು) ನಾಯಕ ನಿತೀಶ್ ಕುಮಾರ್ ಮಂಗಳವಾರ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಕೊನೆಗೊಳಿಸುವ ನಿರ್ಧಾರಕ್ಕೆ ತಮ್ಮ ಪಕ್ಷವು ಸಹಿ ಹಾಕಿದ ಕೆಲವೇ ಗಂಟೆಗಳ ಬಳಿಕ, "ನಾನು ರಾಜೀನಾಮೆ ನೀಡಿದ್ದೇನೆ" ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ನಿತೀಶ್ ಕುಮಾರ್ ಇದೀಗ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜೊತೆಗೆ ಬಿಹಾರದ ರಾಜ್ಯಪಾಲರನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ನಿತೀಶ್ ಕುಮಾರ್ ಅವರು ಎರಡನೇ ಬಾರಿಗೆ ಬಿಜೆಪಿಯನ್ನು ತ್ಯಜಿಸುವ ನಿರ್ಧಾರಕ್ಕೆ ಬರುವ ಮೊದಲು ತಮ್ಮ ಶಾಸಕರನ್ನು ಭೇಟಿಯಾದರು. ಮಂಗಳವಾರ ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು.

"ನಾನು ರಾಜೀನಾಮೆ ನೀಡಿದ್ದೇನೆ ಮತ್ತು ಈ ಬಗ್ಗೆ ನನ್ನ ಶಾಸಕರಿಗೆ ತಿಳಿಸಿದ್ದೇನೆ" ಎಂದು ಅವರು ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.

ಈ ಸುದ್ದಿ ಓದಿದ್ದೀರಾ ? ಸುದ್ದಿ ವಿವರ | ಮೈತ್ರಿ ಮುರಿಯುವ ಮೂಲಕ ಬಿಹಾರ ಬಿಕ್ಕಟ್ಟು ಮುಕ್ತಾಯ; ಹೊಸ ಸರ್ಕಾರ ರಚನೆಗೆ ಸಿದ್ಧತೆ

ನಿತೀಶ್ ಕುಮಾರ್‌ಗೆ ಸಂಭಾವ್ಯ ಬೆಂಬಲದ ಕುರಿತು ನಿರ್ಧರಿಸಲು ಕಾಂಗ್ರೆಸ್ ಸಭೆಗಳನ್ನು ನಡೆಸುತ್ತಿದೆ. ಬಿಹಾರದಲ್ಲಿ ಸರಣಿ ಸಭೆಗಳನ್ನು ಪ್ರಾರಂಭಿಸಿದೆ.

ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಲು 160 ಶಾಸಕರ ಬೆಂಬಲ ಪತ್ರವನ್ನೂ ಸಲ್ಲಿಸಿ "ನಾವು ಎನ್‌ಡಿಎ ತೊರೆಯಬೇಕು ಎಂದು ಎಲ್ಲಾ ಸಂಸದರು ಮತ್ತು ಶಾಸಕರು ಒಮ್ಮತದಿಂದ ನಿರ್ಧರಿಸಿದ್ದೇವೆ" ಎಂದು ನಿತೀಶ್ ಕುಮಾರ್ ಅವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಫಾಗು ಚೌಹಾಣ್‌ ಅವರಿಗೆ ತಿಳಿಸಿದರು.

ಪಾಟ್ನಾದಲ್ಲಿರುವ ಆರ್‌ಡಿಜೆ ಕುಲಪತಿ ಲಾಲು ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರ ನಿವಾಸಕ್ಕೆ ತೆರಳಿ ತೇಜಸ್ವಿ ಯಾದವ್ ಅವರೊಂದಿಗೆ ಮಾತುಕತೆ ನಡೆಸಿದರು. ಹೊಸ ಸಮ್ಮಿಶ್ರ ಸರ್ಕಾರದಲ್ಲಿ ಅವರು ಉಪ ಮುಖ್ಯಮಂತ್ರಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು 'ಹಿಂದೂಸ್ತಾನ್ ಟೈಮ್ಸ್‌' ವರದಿ ಉಲ್ಲೇಖಿಸಿದೆ.

ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ಅವರು ಟ್ವೀಟ್ ಮಾಡುವ ಮೂಲಕ ನಿತೀಶ್‌ ಕುಮಾರ್ ಅವರನ್ನು ಅಭಿನಂದಿಸಿದ್ದಾರೆ.

"ನಿತೀಶ್ ಜಿ ಮುಂದೆ ಸಾಗಿ. ದೇಶವು ನಿಮಗಾಗಿ ಕಾಯುತ್ತಿದೆ" ಎಂದು ಕುಶ್ವಾಹಾ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಪಕ್ಷದ ಎಲ್ಲ ಶಾಸಕರು ಮತ್ತು ಸಂಸದರು ನಿತೀಶ್ ಕುಮಾರ್ ಅವರ ನಿರ್ಧಾರವನ್ನು ಬೆಂಬಲಿಸಿರುವುದಾಗಿ ನಿತೀಶ್ ಕುಮಾರ್ ಅವರು ತಿಳಿಸಿದರು.

ಕೇಂದ್ರ ಸಚಿವ ಅಮಿತ್ ಶಾ, ಜೆಡಿಯು ವಿಭಜಿಸಲು ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ, ಆರ್‌ಸಿಪಿ ಸಿಂಗ್ ಅವರು ಅಮಿತ್ ಶಾ ಅವರ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಿತೀಶ್ ಕುಮಾರ್ ಆರೋಪಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್