ಬಿಲ್ಕೀಸ್ ಬಾನು ಪ್ರಕರಣ | ಸರ್ಕಾರದ ನಿರ್ಧಾರ ರದ್ದು ಮಾಡುವಂತೆ ಪ್ರಧಾನಿಗೆ ಕೆಟಿಆರ್ ಒತ್ತಾಯ

  • 'ಸೌಮ್ಯವಾಗಿ ಹೇಳುವುದು ವಾಕರಿಕೆ ತರಿಸುತ್ತದೆ'
  • ಅಗತ್ಯ ಕಾನೂನು ತಿದ್ದುಪಡಿ ಮಾಡುವಂತೆ ಸಚಿವರ ಒತ್ತಾಯ

ಗುಜರಾತ್ ಗಲಭೆಯ ಸಂತ್ರಸ್ತೆ ಬಿಲ್ಕೀಸ್ ಬಾನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೆಲಂಗಾಣ ಸಚಿವ ಕೆಟಿ ರಾಮರಾವ್ ಬುಧವಾರ ಒತ್ತಾಯಿಸಿದ್ದಾರೆ.

ಬಿಡುಗಡೆ ನಿರ್ಧಾರದ ಕುರಿತು ಟ್ವೀಟ್ ಮಾಡಿರುವ ಕೆಟಿ ರಾಮರಾವ್ “ಪ್ರಿಯ ಪ್ರಧಾನಿ ನರೇಂದ್ರ ಮೋದಿ ಜೀ, ನೀವು ಮಾತನಾಡಿದಂತೆ ನಿಮಗೆ ಮಹಿಳೆಯರ ಮೇಲೆ ನಿಜವಾದ ಗೌರವವಿದ್ದರೆ ಕೂಡಲೇ ಮಧ್ಯಪ್ರವೇಶಿಸಿ 11 ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸರ್. ಈ ವಿಚಾರವನ್ನು ಸೌಮ್ಯವಾಗಿ ಹೇಳುವುದು ವಾಕರಿಕೆ ತರಿಸುತ್ತದೆ. ಎಂಎಚ್‌ಎ ಆದೇಶದ ವಿರುದ್ಧ ರಾಷ್ಟ್ರಕ್ಕೆ ನೀವು ಜಾಣತನ ತೋರಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಅತ್ಯಾಚಾರಿಗಳಿಗೆ ನ್ಯಾಯಾಂಗದ ಮೂಲಕ ಜಾಮೀನು ಸಿಗದಂತೆ, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಅಪರಾಧ ಪ್ರಕ್ರಿಯೆ ಸಂಹಿತೆಯಲ್ಲಿ (ಸಿಆರ್‌ಪಿಸಿ) ಸೂಕ್ತ ತಿದ್ದುಪಡಿ ತರಬೇಕೆಂದು ತೆಲಂಗಾಣದ ಕೈಗಾರಿಕೆ ಮತ್ತು ಐಟಿ ಸಚಿವ ರಾಮರಾವ್ ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಿಲ್ಕೀಸ್‌ ಬಾನು ಪ್ರಕರಣ| ಅತ್ಯಾಚಾರಿಗಳ ಬಿಡುಗಡೆ ಮೋದಿಯ ನಾರಿ ಶಕ್ತಿ ಭಾಷಣಕ್ಕೆ ಕಪಾಳಮೋಕ್ಷ ಎಂದ ಪ್ರತಿಪಕ್ಷಗಳು

"ಸರ್, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯಲ್ಲಿ (ಸಿಆರ್‌ಪಿಸಿ) ಅಗತ್ಯ ತಿದ್ದುಪಡಿ ಮಾಡುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಇದರಿಂದ ಅತ್ಯಾಚಾರಿಗಳು ನ್ಯಾಯಾಂಗದ ಮೂಲಕ ಜಾಮೀನು ಪಡೆಯಬಾರದು. ಬಲವಾದ ಕಾನೂನುಗಳು ನ್ಯಾಯಾಂಗವನ್ನು ಖಚಿತಪಡಿಸಿಕೊಳ್ಳಲು ಇದೊಂದೆ ಏಕೈಕ ಮಾರ್ಗವಾಗಿದೆ. ತ್ವರಿತವಾಗಿ ಮತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ” ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಂಗಳವಾರ ಗೋಧ್ರಾ ನಂತರದ ಗಲಭೆ ಪ್ರಕರಣದಲ್ಲಿ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಬಿಡುಗಡೆಯನ್ನು ಕಟುವಾಗಿ ಟೀಕಿಸಿದ್ದಾರೆ. "ಪ್ರಧಾನಿ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ್ದಾರೆ. ಆದರೆ ಅತ್ಯಾಚಾರಿಗಳ ಬಿಡುಗಡೆಯಿಂದ ಯಾವ ಸಂದೇಶ ನೀಡಲಾಗುತ್ತಿದೆ" ಎಂದು ಕಿಡಿಕಾರಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್