Technical Issue

ಸಂಸತ್ತು ಕಲಾಪ ಮುಂದೂಡಿಕೆ; ವಿರೋಧ ಪಕ್ಷಗಳ ಪ್ರತಿಭಟನೆ, ಸೋನಿಯಾ, ಖರ್ಗೆ ಭಾಗಿ

congress protest after adjourn in parliament over rahul gandhis remarks in landon-1021-
  • ಮಾರ್ಚ್‌ 17ರವರೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ
  • ರಾಹುಲ್‌ ಗಾಂಧಿ ಕ್ಷಮೆಗೆ ಸಂಸತ್ತಿನಲ್ಲಿ ಪಟ್ಟುಹಿಡಿದ ಬಿಜೆಪಿ ಸಂಸದರು

ಅದಾನಿ ವ್ಯವಹಾರಗಳ ಬಗೆಗಿನ ಹಿಂಡನ್‌ಬರ್ಗ್ ಸಂಶೋಧನಾ ವರದಿ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಗೆ ಒತ್ತಾಯಿಸಿ ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಸಂಸತ್ತು ಆವರಣದ ಗಾಂಧಿ ಪ್ರತಿಮೆ ಎದುರು ಶುಕ್ರವಾರ (ಮಾರ್ಚ್‌ 17) ಪ್ರತಿಭಟನೆ ನಡೆಸಿದೆ. 

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿರೋಧ ಹಾಗೂ ಪ್ರತಿಪಕ್ಷಗಳು ಅದಾನಿ ತನಿಖೆಗೆ ಒತ್ತಾಯ ನಡುವೆ ಶುಕ್ರವಾರ ಆರಂಭವಾದ ಐದನೇ ದಿನದ ಸಂಸತ್ತು ಕಲಾಪದಲ್ಲಿ ಗದ್ದಲ ಉಂಟಾಯಿತು. 

ಇದರಿಂದ ಲೋಕಸಭೆ ಹಾಗೂ ರಾಜ್ಯಸಭೆಗಳ ಕಲಾಪ ಸೋಮವಾರದವರೆಗೂ (ಮಾರ್ಚ್‌ 20) ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. 

ಕಾಂಗ್ರೆಸ್‌ ಸಂಸದರು ಅದಾನಿ ಹಾಗೂ ಬಿಜೆಪಿ ವಿರುದ್ಧದ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಪ್ರತಿಭಟನೆಯ ವಿಡಿಯೋವನ್ನು ಕಾಂಗ್ರೆಸ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ರಾಹುಲ್‌ ಗಾಂಧಿ ತಮ್ಮ ಲಂಡನ್‌ ಹೇಳಿಕೆಗಾಗಿ ಕ್ಷಮೆ ಕೋರದಿದ್ದರೆ ಸದನದಲ್ಲಿ ರಾಹುಲ್‌ ಅವರು ಮಾತನಾಡಲು ಅವಕಾಶ ಕೊಡುವುದಿಲ್ಲ ಎಂದು ಬಿಜೆಪಿ ಹೇಳಿದೆ. 

ಕಲಾಪದ ವೇಳೆ ಪ್ರತಿಪಕ್ಷಗಳ ನಾಯಕರ ಮೈಕ್‌ ಅನ್ನು ಬಂದ್‌ ಮಾಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಉದ್ಯಮಿ ಗೌತಮ್ ಅದಾನಿಗೂ ಇರುವ ಸಂಬಂಧದ ಬಗ್ಗೆ ಸದನದ ಜಂಟಿ ಸಮಿತಿಯ ತನಿಖೆ ನಡೆಯಬೇಕು ಎಂದು ವಿಪಕ್ಷಗಳು ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸುತ್ತಿವೆ.

ಈ ಸುದ್ದಿ ಓದಿದ್ದೀರಾ? ಪ್ರಜಾಸತ್ತಾತ್ಮಕ ಹಕ್ಕನ್ನು ಕೇಳಿ ಚಂಡನ್ನು ಸರ್ಕಾರದ ಅಂಗಳಕ್ಕೆ ಮರಳಿಸಿದ ರಾಹುಲ್ ಗಾಂಧಿ

ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ಅಧಿವೇಶನ ನಡೆಸುವ ಬಗ್ಗೆ ಒಮ್ಮತದ ನಿರ್ಧಾರ ಬಾರದ ನಂತರ ಸಭಾಧ್ಯಕ್ಷ ಓಂ ಬಿರ್ಲಾ ಅವರು ಲೋಕಸಭೆಯ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು. ರಾಜ್ಯಸಭೆಯಲ್ಲೂ ಕಲಾಪವನ್ನು ಮುಂದೂಡಲಾಯಿತು. 

ನಿಮಗೆ ಏನು ಅನ್ನಿಸ್ತು?
0 ವೋಟ್