ಗುಜರಾತ್ ಚುನಾವಣೆ | 560 ಅಭ್ಯರ್ಥಿಗಳಲ್ಲಿ ಕೇವಲ 40 ಮಹಿಳಾ ಅಭ್ಯರ್ಥಿಗಳು

women candidates in gujarat electoion
  • 2017ರಲ್ಲಿ ಶಾಸಕಿಯರಾಗಿದ್ದ 13 ಮಹಿಳಾ ಅಭ್ಯರ್ಥಿಗಳು
  • ಮಹಿಳೆಯರು ಸ್ಪರ್ಧಿಸಿದರೆ ಗೆಲುವು ಕಠಿಣ ಎನ್ನುತ್ತಿವೆ ಪಕ್ಷಗಳು

ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭೆಯ ಚುನಾವಣಾ ಅಖಾಡಕ್ಕೆ ಬಿಜೆಪಿ, ಕಾಂಗ್ರೆಸ್, ಎಎಪಿ ಹಾಗೂ ಎಐಎಂಐಎಂ ಒಟ್ಟು 560 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರಲ್ಲಿ ಕೇವಲ 40 ಮಹಿಳಾ ಅಭ್ಯರ್ಥಿಗಳಿದ್ದಾರೆ. 

ಕಳೆದ ಬಾರಿಯ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಏರಿಕೆಯಾಗಿದೆ. 2017ರಲ್ಲಿ 22 ಮಹಿಳಾ ಅಭ್ಯರ್ಥಿಗಳಿದ್ದರು. 2012ರಲ್ಲಿ 33 ಮಹಿಳೆಯರು ಚುನಾವಣಾ ಕಣಕ್ಕಿಳಿದಿದ್ದರು. ಈ ಬಾರಿ ಬಿಜೆಪಿ 17 ಅಭ್ಯರ್ಥಿಗಳನ್ನು, ಕಾಂಗ್ರೆಸ್ 14, ಆಮ್‌ ಆದ್ಮಿ 7 ಹಾಗೂ ಎಐಎಂಐಎಂ ಇಬ್ಬರು ಮಹಿಳೆಯರನ್ನು ಕಣಕ್ಕಿಳಿಸಿದೆ.

Eedina App

2012ರ ವಿಧಾನಸಭೆಯಲ್ಲಿ ಒಟ್ಟು 16 ಮಹಿಳಾ ಮಹಿಳಾ ಅಭ್ಯರ್ಥಿಗಳ ಗೆಲುವು ಸಾಧಿಸಿ ಶಾಸಕಿಯರಾಗಿದ್ದರು. ಈ 2017ರಲ್ಲಿ 13ಕ್ಕೆ ಇಳಿಕೆಯಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯವರೇ ಗೆಲುವು ಸಾಧಿಸಿದ್ದರು.

ಕಡಿಮೆ ಸಂಖ್ಯೆಯ ಹೊರತಾಗಿಯೂ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಮಹಿಳಾ ಅಭ್ಯರ್ಥಿಗಳ ಯಶಸ್ಸಿನ ಪ್ರಮಾಣವು ಅಧಿಕವಾಗಿತ್ತು. ಏಕೆಂದರೆ ಎರಡು ಪಕ್ಷಗಳ 22 ಮಹಿಳಾ ಅಭ್ಯರ್ಥಿಗಳಲ್ಲಿ ಶೇ. 59ರಷ್ಟು ಮಹಿಳಾ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದರೆ, 2012ರಲ್ಲಿ ಯಶಸ್ಸಿನ ಪ್ರಮಾಣ ಶೇ. 51ರಷ್ಟಿತ್ತು.

AV Eye Hospital ad

ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ಗುಜರಾತ್ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜೆನ್ನಿ ತುಮ್ಮರ್, "182 ಅಭ್ಯರ್ಥಿಗಳ ಪೈಕಿ 35 ಮಹಿಳಾ ಅಭ್ಯರ್ಥಿಗಳಿರಬೇಕು ಎಂಬುದು ತನ್ನ ಅಪೇಕ್ಷೆಯಾಗಿತ್ತು" ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಗುಜರಾತ್ ಚುನಾವಣೆ | ಬಿಜೆಪಿ ವಿರುದ್ಧ ಅಭಿಯಾನ ನಡೆಸಲು ಮುಂದಾದ ಕಿಸಾನ್ ಮೋರ್ಚಾ

“ಒಟ್ಟು 92 ಮಹಿಳೆಯರು ತಮ್ಮ ಲಿಖಿತ ವಿನಂತಿಗಳಲ್ಲಿ ಟಿಕೆಟ್ ಕೇಳಿದ್ದರು. ಆದರೆ ಇದು ಸಮೀಕ್ಷೆಗಳು, ಜಾತಿ ಸಮೀಕರಣಗಳು ಮೇಲೆ ಅವಲಂಬಿತವಾಗಿರುತ್ತದೆ. ಅದರ ಆಧಾರದ ಮೇಲೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಬಿಜೆಪಿ ಆರಂಭದಲ್ಲಿ ಸುರೇಂದ್ರನಗರದ ವಾಧ್ವಾನ್ ಕ್ಷೇತ್ರದಿಂದ ಜಿಗ್ನಾಬೆನ್ ಪಾಂಡ್ಯ ಅವರನ್ನು ಕಣಕ್ಕಿಳಿಸಿತ್ತು. ಆದರೆ ಕಳೆದ ವಾರ ಮೊದಲ ಹಂತದ ನಾಮನಿರ್ದೇಶನ ಪ್ರಕ್ರಿಯೆ ಮುಕ್ತಾಯಗೊಳ್ಳುವ ಹಂತದಲ್ಲಿ  ಜಿಗ್ನಾಬೆನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ವರ್ಷಾಬೆನ್ ದೋಷಿ ಅವರು ಜಿಗ್ನಾಬೆನ್ ಪಾಂಡ್ಯ ಅವರೊಂದಿಗೆ ಗಾಂಧಿನಗರದಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಸ್ಪರ್ಧಿಸಲು ನಿರಾಕರಿಸಿದ ಪತ್ರ ಸಲ್ಲಿಸಿದ್ದರು. "ಇದರಲ್ಲಿ ಲಿಂಗವು ಒಂದು ಸಮಸ್ಯೆಯಲ್ಲ" ವರ್ಷಾಬೆನ್ ದೋಷಿ ಪಾಂಡ್ಯ ಹೇಳಿದ್ದಾರೆ.

ಜಿಗ್ನಾಬೆನ್ ಪಾಂಡ್ಯ ಅವರು ಹಿಂದೆ ಸರಿದಿರುವುದನ್ನು ಸಮರ್ಥಿಸಿಕೊಂಡಿದ್ದ ವರ್ಷಾಬೆನ್ ದೋಷಿ, "2017ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಒಂಬತ್ತು ಶಾಸಕಿಯರಲ್ಲಿ ಮೂವರಿಗೆ ಮಾತ್ರ ಟಿಕೆಟ್‌ ನೀಡಿದೆ. ಇಷ್ಟು ಮಾತ್ರವಲ್ಲದೆ, ಸಚಿವರಾಗಿ ಮತ್ತು ವಿಧಾನಸಭಾಧ್ಯಕ್ಷರನ್ನಾಗಿ ನೇಮಿಸಿದ ಪಕ್ಷ ಬಿಜೆಪಿ. ಸಂಸ್ಥೆಯಲ್ಲಿಯೂ ಮಹಿಳೆಯನ್ನು ಉಪಾಧ್ಯಕ್ಷೆ ಮಾಡುವುದು ಅತ್ಯಂತ ದೊಡ್ಡ ವಿಷಯ" ಎಂದಿದ್ದಾರೆ.

ಬಿಜೆಪಿಗೆ ತಿರುಗೇಟು ನೀಡಿದ ಜೆನ್ನಿ ತುಮ್ಮರ್, "ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹೋರಾಡುತ್ತಿದೆ, ಹೀಗಾಗಿ ಮಹಿಳೆಯರಿಗೆ ಕಡಿಮೆ ಅವಕಾಶ ನೀಡಿರುವುದನ್ನು ಒಪ್ಪಿಕೊಳ್ಳಬಹುದು. ಆದರೆ, ಬಿಜೆಪಿ ತನ್ನ ಭದ್ರಕೋಟೆಗಳಲ್ಲೂ ಮಹಿಳಾ ಕಾರ್ಯಕರ್ತರನ್ನು ನಂಬುವುದಿಲ್ಲ. ಈಗಾಗಲೇ ಅಧಿಕಾರದಲ್ಲಿರುವ ಬಿಜೆಪಿ, ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅಪಾಯ ತೆಗೆದುಕೊಳ್ಳಬಹುದಿತ್ತು. ಆದರೆ, ನಗರ ಪ್ರದೇಶಗಳ ಸುರಕ್ಷಿತ ಕ್ಷೇತ್ರಗಳಲ್ಲಿಯೂ ಮಹಿಳೆಯರನ್ನು ಕಣಕ್ಕಿಳಿಸದಿರುವುದು ತುಂಬಾ ದುಃಖಕರ" ಎಂದು ಅವರು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app