
- ಗುಜರಾತ್ ವಿಧಾನಸಭೆ ಚುನಾವಣೆಗೆ 12 ಅಭ್ಯರ್ಥಿಗಳ ಬಿಜೆಪಿ ಪಟ್ಟಿ
- ಡಿ. 1 ಮತ್ತು 5ರಂದು ಚುನಾವಣೆ, ಡಿಸೆಂಬರ್ 8ರಂದು ಫಲಿತಾಂಶ
ಕೆಲ ದಿನಗಳಷ್ಟೇ ಬಾಕಿಯಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ (ಆಪ್) ಪ್ರಚಾರ ತಂತ್ರ ಹೆಣೆಯುತ್ತಿವೆ. ಇನ್ನೊಂದೆಡೆ ಕಳೆದ ಎರಡು ದಿನಗಳಿಂದ ಗೃಹಸಚಿವ ಅಮಿತ್ ಶಾ ರಾಜ್ಯದಲ್ಲಿ ಬಿಜೆಪಿ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ತರಾತುರಿಯಲ್ಲಿ ಪ್ರಕಟಿಸುತ್ತಿದ್ದಾರೆ.
ಅನೇಕ ನಾಯಕರ ನಡುವೆ ಅಸಮಾಧಾನದ ಹೊಗೆಯಾಡುತ್ತಿದೆ. 178 ಸ್ಥಾನಗಳ ಪೈಕಿ 12 ಸ್ಥಾನಗಳಲ್ಲಿ ಸ್ಪರ್ಧೆಯನ್ನು ಬಿಜೆಪಿ ಸೋಮವಾರ (ನ. 14) ಘೋಷಿಸಿದೆ. ಈಗಾಗಲೇ ಪ್ರಕಟಿಸಿರುವ 40 ಸ್ಥಾನಗಳ ಅಭ್ಯರ್ಥಿಗಳಲ್ಲಿ ಅಸಮಾಧಾನವಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಚುನಾವಣೆ ನಡೆಯಲಿದೆ.
ಏತನ್ಮಧ್ಯೆ, ಬಿಜೆಪಿ ಸೋಮವಾರ ಇನ್ನೂ 12 ಅಭ್ಯರ್ಥಿಗಳನ್ನು ಘೋಷಿಸಿದೆ. ಇದರೊಂದಿಗೆ 182 ಸದಸ್ಯ ಬಲದ ವಿಧಾನಸಭೆಗೆ 178 ಅಭ್ಯರ್ಥಿಗಳನ್ನು ಪಕ್ಷ ಘೋಷಿಸಿದಂತಾಗಿದೆ.
ಅಮಿತ್ ಶಾ ಅವರು ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಾನಾ ಪಕ್ಷದ ನಾಯಕರೊಂದಿಗೆ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಸರಣಿ ಸಭೆ ನಡೆಸಿದರು. ಸೋಮವಾರದ ಸಭೆಯಲ್ಲಿ ಪಕ್ಷದ ನಾಯಕರಲ್ಲಿ ಅಸಮಾಧಾನ ಹೋಗಲಾಡಿಸುವ ಕಾರ್ಯ ಯೋಜನೆಗಳ ಬಗ್ಗೆ ಅಮಿತ್ ಶಾ ಚರ್ಚಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಟಿಕೆಟ್ ಕೈತಪ್ಪಿರುವ ಉಳಿದ 16 ಅಭ್ಯರ್ಥಿಗಳನ್ನು ಬಿಜೆಪಿ ಮೊಬೈಲ್ ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಬಯಾದ್ ಕ್ಷೇತ್ರದಲ್ಲಿ ಪಕ್ಷವು ಕೈಬಿಟ್ಟಿರುವ ಧವಲಸಿಂಗ್ ಝಾಲಾ ಅವರ ಬೆಂಬಲಿಗರು ಬಿಜೆಪಿ ಕೇಂದ್ರ ಕಚೇರಿ ಕಮಲಂನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಟಾಣ್ ಕ್ಷೇತ್ರದಲ್ಲಿಯೂ ಇದೇ ರೀತಿ ಆಗಿದೆ.
ಗುಜರಾತ್ ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಗುಜರಾತ್ನ ಕಮಲಮ್ನಲ್ಲಿಯ ಪಕ್ಷದ ಕಚೇರಿ ಹೊರಗೆ ಮಂಗಳವಾರ (ನ.15) ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ರವಿ ಕಪೂರ್ ಎಂಬುವವರು ಟ್ವೀಟ್ ಮಾಡಿ ಪ್ರತಿಭಟನೆಯ ವಿಡಿಯೊ ಹಂಚಿಕೊಂಡಿದ್ದಾರೆ.
Massive protests outside the BJP’s Gujarat office in Kamalam for corruption in the ticket distribution fir the Gujarat Elections. pic.twitter.com/NjSmTpz98L
— Ravi Kapur (@Kap57608111) November 15, 2022
ಅಭ್ಯರ್ಥಿಗಳ ಮೊದಲ ಮತ್ತು ಎರಡನೇ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಗೊಂದಲ ಆರಂಭವಾಗಿದೆ. ಟಿಕೆಟ್ ಕೈ ತಪ್ಪಿರುವ ನಾಯಕರ ಸಮಾಧಾನಗೊಳಿಸಲು ಶಾ ಗುಜರಾತ್ನಲ್ಲಿ ಇನ್ನೂ ಮೂರು ದಿನಗಳ ಕಾಲ ತಂಗುವ ಸಾಧ್ಯತೆಯಿದೆ.
ಕಮಲಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ (ನ. 13) ಸಂಜೆ ಶಾ ನಾಲ್ಕು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ನಾಲ್ಕು ರಾಜ್ಯಗಳ ವಲಯಗಳ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ಮಿಜೋರಾಂ | ಕಲ್ಲುಗಣಿ ಕುಸಿತ; 8 ಕಾರ್ಮಿಕರು ಸಾವು, ನಾಲ್ವರು ಕಣ್ಮರೆ
“ಅಸಮಾಧಾನಗೊಂಡವರು ಬಿಜೆಪಿ ಕುಟುಂಬಕ್ಕೆ ಸೇರಿದವರು. ಅವರ ಮೇಲೆ ಒತ್ತಡ ಹೇರುವ ಬದಲು ತಿಳುವಳಿಕೆ ಮತ್ತು ಪ್ರೀತಿಯಿಂದ ವರ್ತಿಸಬೇಕಿದೆ” ಎಂದು ಅಮಿತ್ ಶಾ ಸಭೆಯಲ್ಲಿ ಹೇಳಿರುವುದಾಗಿ ವರದಿಯಾಗಿದೆ.
ಅತೃಪ್ತ ನಾಯಕರ ಜತೆ ರಾಜ್ಯ ನಾಯಕರ ತಂಡ ಒಂದಿಲ್ಲೊಂದು ಚರ್ಚೆ ನಡೆಸಲಿದೆ ಎಂದು ಬಿಜೆಪಿ ತಿಳಿಸಿದೆ.