ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಪ್ರಶ್ನಿಸಿ ‘ಸುಪ್ರೀಂ’ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಐಎಎಸ್‌ ಅಧಿಕಾರಿ

Shah Faesal
  • ಭಾರತೀಯ ಆಡಳಿತ ಸೇವೆಗೆ ಮರುಸೇರ್ಪಡೆಗೊಂಡ 6 ತಿಂಗಳ ನಂತರ ಅರ್ಜಿ ಹಿಂಪಡೆದ ಅಧಿಕಾರಿ
  • 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ 23 ಅರ್ಜಿದಾರರು

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿದ್ದ ರಾಷ್ಟ್ರಪತಿಗಳ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಐಎಎಸ್‌ ಅಧಿಕಾರಿ ಶಾ ಫೈಸಲ್‌ ಅವರು ಮಂಗಳವಾರ (ಸೆ. 20) ಹಿಂಪಡೆದಿದ್ದಾರೆ ಎಂದು ನ್ಯಾಯಾಲಯದ ಮೂಲಗಳು ಹೇಳಿವೆ.  

370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ 23 ಅರ್ಜಿದಾರರಲ್ಲಿ ಫೈಸಲ್ ಕೂಡ ಒಬ್ಬರು.

ಈ ವರ್ಷದ ಏಪ್ರಿಲ್‌ನಲ್ಲಿ ಶಾ ಫೈಸಲ್‌ ಅವರು ಭಾರತೀಯ ಆಡಳಿತ ಸೇವೆಗೆ ಮರಳಿ ಸೇರ್ಪಡೆಗೊಂಡರು. ಬಳಿಕ ಅವರನ್ನು ಸಂಸ್ಕೃತಿ ಸಚಿವಾಲಯದ ಉಪ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಇದಾದ ಆರು ತಿಂಗಳ ಬಳಿಕ ಫೈಸಲ್‌ ಈ ನಿರ್ಧಾರ ಕೈಗೊಂಡಿದ್ದಾರೆ.   

ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪಿಸಲು 2019ರ ಪ್ರತಿಭಟನೆಯಲ್ಲಿ ಭಾಗವಹಿಸಿ ಫೈಸಲ್ ಅವರು ಸೇವೆಗೆ ರಾಜೀನಾಮೆ ನೀಡಿದ್ದರು. ಆದರೆ, ಅವರ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿರಲಿಲ್ಲ. ಬಳಿಕ ಫೈಸಲ್‌ ರಾಜೀನಾಮೆ ಹಿಂಪಡೆದಿದ್ದರು.  

ಈ ಸುದ್ದಿ ಓದಿದ್ದೀರಾ? ಮೇಯರ್‌ಗಳ ಸಭೆಯಲ್ಲಿ ಸ್ಯಾಟಲೈಟ್ ಟೌನ್‌ಗಳ ಅಗತ್ಯವನ್ನು ಮುಂದಿಟ್ಟ ಪ್ರಧಾನಿ ಮೋದಿ

ಫೈಸಲ್‌ ಅವರು 2019ರ ಮಾರ್ಚ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್‌ (ಜೆಕೆಪಿಎಂ) ಸ್ಥಾಪಿಸಿದ್ದರು. ಆಗಸ್ಟ್‌ 5ರಂದು ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದಾಗ ಫೈಸಲ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಸರ್ಕಾರದ ನಿರ್ಧಾರ ಇತಿಹಾಸದ ದೊಡ್ಡ ದುರಂತ ಎಂದು ಕರೆದಿದ್ದರು.   

ಬಳಿಕ ಫೈಸಲ್‌ ಅವರ ಇಸ್ತಾಂಬುಲ್‌ ಪ್ರಯಾಣವನ್ನು ನಿರ್ಬಂಧಿಸಿ ಅವರನ್ನು ಬಂಧಿಸಲಾಯಿತು. ನಂತರ 2020ರ ಜೂನ್‌ನಲ್ಲಿ ಅವರನ್ನು ಆರೋಪಮುಕ್ತಗೊಳಿಸಿ ಬಿಡುಗಡೆಗೊಳಿಸಲಾಯಿತು. 

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180