ವಿಶ್ವಸಂಸ್ಥೆಯಲ್ಲಿ ಭಾರತ ವಿರುದ್ಧದ ಟೀಕೆ: ಪಾಕಿಸ್ತಾನ ಪ್ರಧಾನಿಗೆ ಭಾರತ ತಿರುಗೇಟು

Mijito Vinito
  • ವಿಶ್ವಸಂಸ್ಥೆಯ 77ನೇ ಅಧಿವೇಶನದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಪ್ರಧಾನಿ ಟೀಕೆ
  • ಕಾಶ್ಮೀರ ಸಮಸ್ಯೆ ಕುರಿತ ಶೆಹಬಾಜ್‌ ಷರೀಫ್‌ ಹೇಳಿಕೆ ಸುಳ್ಳಾಗಿದೆ ಎಂದ ವಿನಿತೊ

ಶುಕ್ರವಾರ (ಸೆ.23) ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) 77ನೇ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಭಾರತ-ವಿರೋಧಿ ಟೀಕೆಗಾಗಿ ಭಾರತ ಶನಿವಾರ (ಸೆ.24) ಕಟುವಾಗಿ ಟೀಕಿಸಿದೆ.

ವಿಶ್ವಸಂಸ್ಥೆಯ ಭಾರತೀಯ ಮಿಷನ್‌ನ ಮೊದಲ ಕಾರ್ಯದರ್ಶಿ ಮಿಜಿತೊ ವಿನಿತೊ ಅವರು, ಕಾಶ್ಮೀರ ಸಮಸ್ಯೆಯ ಕುರಿತು ಶೆಹಬಾಜ್ ಷರೀಫ್ ಅವರ ಹೇಳಿಕೆಗಳು ಸುಳ್ಳು ಎಂದು ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಹೇಳಿದ್ದಾರೆ. ಪಾಕಿಸ್ತಾನ ಇಸ್ಲಾಮಾಬಾದ್‌ ಗಡಿಯಲ್ಲಿ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ.  

“ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಪಾಕಿಸ್ತಾನದ ಪ್ರಧಾನಿ ವಿಶ್ವಸಂಸ್ಥೆಯ ವೇದಿಕೆಯನ್ನು ಆರಿಸಿಕೊಂಡಿರುವುದು ವಿಷಾದನೀಯ. ಅವರು ತಮ್ಮ ದೇಶದ ದುಷ್ಕೃತ್ಯಗಳನ್ನು ಮರೆಮಾಚಲು ಇಂತಹ ಕಾರ್ಯ ಮಾಡಿದ್ದಾರೆ. ಭಾರತದ ವಿರುದ್ಧ ಪಾಕಿಸ್ತಾನದ ಕ್ರಮಗಳನ್ನು ಸಮರ್ಥಿಸಲು ಹೀಗೆ ಮಾಡಿದ್ದಾರೆ” ಎಂದು ವಿನಿತೊ ಹೇಳಿದರು.

ತನ್ನ ನೆರೆಹೊರೆಯವರೊಂದಿಗೆ ಶಾಂತಿಯನ್ನು ಬಯಸುವುದಾಗಿ ಹೇಳಿಕೊಳ್ಳುವ ದೇಶವು 1993ರ ಮುಂಬೈ ಬಾಂಬ್ ಸ್ಫೋಟದ ಸಂಚುಕೋರರಿಗೆ ಎಂದಿಗೂ ಆಶ್ರಯ ನೀಡುವುದಿಲ್ಲ ಎನ್ನುತ್ತಲೇ ಭಯೋತ್ಪಾದಕ ದಾವೂದ್‌ ಇಬ್ರಾಹಿಂಗೆ ಆಶ್ರಯ ನೀಡಿರುವುದನ್ನು ಉಲ್ಲೇಖಿಸಿದರು. 

AV Eye Hospital ad

“ತನ್ನ ನೆರೆಹೊರೆಯವರೊಂದಿಗೆ ಶಾಂತಿಯನ್ನು ಬಯಸುತ್ತದೆ ಎಂದು ಹೇಳಿಕೊಳ್ಳುವ ಒಂದು ಆಡಳಿತವು, ಎಂದಿಗೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರಾಯೋಜಿಸುವುದಿಲ್ಲ. ಅದು ಭೀಕರ ಮುಂಬೈ ಭಯೋತ್ಪಾದಕ ದಾಳಿಯ ಯೋಜಕರಿಗೆ ಆಶ್ರಯ ನೀಡುವುದಿಲ್ಲ" ಎಂದು ವಿನಿತೊ  ಖಂಡಿಸಿದರು. 

ಭಯೋತ್ಪಾದನೆ, ದ್ವೇಷ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧಗಳನ್ನು ಭಾರತ ಬಯಸುತ್ತದೆ ಎಂದು ವಿನಿತೊ ಪುನರುಚ್ಛರಿಸಿದರು.

ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿ ಇತ್ತು, ಮುಂದೆಯೂ ಅದು ಹಾಗೆಯೇ ಮುಂದುವರಿಯುತ್ತದೆ ಎಂದು ಹೇಳಿದರು.  

ಪಾಕಿಸ್ತಾನದಲ್ಲಿ ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಕುಟುಂಬಗಳ ಬಾಲಕಿಯರ ಬಲವಂತದ ಅಪಹರಣ ಮತ್ತು ವಿವಾಹದ ಘಟನೆಗಳನ್ನು ಉಲ್ಲೇಖಿಸಿದ ವಿನಿತೊ, “ಅಲ್ಪಸಂಖ್ಯಾತರ ಹಕ್ಕುಗಳ ತೀವ್ರ ಉಲ್ಲಂಘನೆ ಮಾಡಿದ ದೇಶವು ಜಾಗತಿಕ ವೇದಿಕೆಯಲ್ಲಿ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ” ಎಂದು ಟೀಕಿಸಿದರು.

ಈ ಸುದ್ದಿ ಓದಿದ್ದೀರಾ? ಭಾರತ್‌ ಜೋಡೋ ಯಾತ್ರೆ | ಪೆರಂಬ್ರಾದಿಂದ ಯಾತ್ರೆ ಪುನಾರಂಭಿಸಿದ ರಾಹುಲ್‌ ಗಾಂಧಿ

"ಭಾರತದಲ್ಲಿ ಶಾಂತಿ, ಭದ್ರತೆ ಮತ್ತು ಪ್ರಗತಿಯ ಬಯಕೆಯು ಸತ್ಯವಾಗಿದೆ. ಗಡಿಯಾಚೆಗಿನ ಭಯೋತ್ಪಾದನೆಯು ಕೊನೆಗೊಂಡಾಗ, ಸರ್ಕಾರಗಳು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಮತ್ತು ತಮ್ಮ ಸ್ವಂತದ ಜನರೊಂದಿಗೆ ನಿಸ್ವಾರ್ಥದಿಂದ ವ್ಯವಹರಿಸಿದಾಗ ಇದು ಖಂಡಿತ ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.

ಶುಕ್ರವಾರ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, “ಇಸ್ಲಾಮಾಬಾದ್ ಭಾರತ ಸೇರಿದಂತೆ ತನ್ನ ಎಲ್ಲ ನೆರೆಹೊರೆಯವರೊಂದಿಗೆ ಶಾಂತಿಯನ್ನು ಬಯಸುತ್ತದೆ. ಆದರೆ ಕಾಶ್ಮೀರ ವಿವಾದಕ್ಕೆ ನ್ಯಾಯಯುತ ಮತ್ತು ಶಾಶ್ವತ ಪರಿಹಾರದ ನಂತರ ಮಾತ್ರ ಇದು ಸಾಧ್ಯ” ಎಂದು ಹೇಳಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app