ಮಾತನಾಡುವ ಭಾಷೆ, ತಿನ್ನುವ ಆಹಾರ ಅವರವರ ಸ್ವಂತದ್ದು; ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್

MOHAN BHAGVAT
  • ಮಾನವ ಕುಲದ ನಾವೆಲ್ಲರೂ ಒಂದೇ ಡಿಎನ್ಎ ಸಂಜಾತರೆನ್ನುವುದನ್ನು ವಿಜ್ಞಾನ ದಾಖಲಿಸಿದೆ
  • ಭೌಗೋಳಿಕ ಅಸ್ತಿತ್ವಕ್ಕೆ ತಕ್ಕಂತೆ ಭಾಷೆ, ಆಹಾರ ಪದ್ಧತಿ ರೂಢಿಯಾಗಿದೆ. ಇದು ಅವರ ಸ್ವಂತದ್ದು

"ನಮ್ಮ ಭಾಷೆ ಮತ್ತು ಆಹಾರ ಪದ್ಧತಿ 40 ಸಾವಿರ ವರ್ಷಗಳಷ್ಟು ಹಳೆಯದ್ದು; ಅವರವರ ಭಾಷೆ ಮತ್ತು ಆಹಾರ ಪದ್ಧತಿಯನ್ನು ಅವರವರು ಅನುಸರಿಸುತ್ತಾ ಹೋಗುವುದರಲ್ಲಿ ತಪ್ಪಿಲ್ಲ" ಎಂದು ಆರ್‌ಎಸ್‌ಎಸ್‌ ಸರಸಂಘ ಸಂಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಅಖಂಡ ಭಾರತ ಅಸ್ತಿತ್ವದಲ್ಲಿ ಇದ್ದಾಗ ಭೌಗೋಳಿಕ ಕಾರಣಗಳಿಂದ ಹಲವು ಪದ್ಧತಿಗಳು ಬಳಕೆಯಲ್ಲಿದ್ದವು. ಅಂತೆಯೇ ಆ ಕಾಲದಿಂದಲೇ ಭಾಷೆ ಮತ್ತು ಆಹಾರ ಪದ್ಧತಿಗಳು ಅನುಸರಣೆಯಾಗುತ್ತಾ ಬಂದಿವೆ. ಅವುಗಳು ಅವರವರ ಸ್ವಂತದ್ದು" ಎಂದು ಅವರು ಹೇಳಿದ್ದಾರೆ.

Eedina App

ಅವರ ಈ ಹೇಳಿಕೆಯನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ. ಅದರ ಸಾರಾಂಶ ಹೀಗಿದೆ.

"ನಾವೆಲ್ಲರೂ ಒಂದೇ ಮೂಲದಿಂದ ಬಂದವರು. ನಮ್ಮೆಲ್ಲರ ಪೂರ್ವಜರು ಸಾಮಾನ್ಯರಾಗಿದ್ದವರು. 40,000 ವರ್ಷಗಳ ಹಿಂದೆ ಅಖಂಡ ಭಾರತ ಕಾಬೂಲ್‌ನಿಂದ ಪಶ್ಚಿಮದ ಚಿಂಡ್ವಿನ್ ನದಿಯವರೆಗೆ ಮತ್ತು ಚೀನಾದ ಇಳಿಜಾರುಗಳಿಂದ ಶ್ರೀಲಂಕಾದ ದಕ್ಷಿಣದವರೆಗೆ ಹರಡಿ ನಿಂತಿತ್ತು. ಈಗ ನಾವು ಒಪ್ಪುತ್ತೇವೆಯೋ ಬಿಡುತ್ತೇವೆಯೋ; ಆದರೆ, ವಿಜ್ಞಾನ ಮಾತ್ರ ಮಾನವ ಜನಾಂಗ 40,000 ವರ್ಷಗಳವರೆಗೆ ಒಂದೇ ಡಿಎನ್ಎ ಹೊಂದಿತ್ತು" ಎಂದು ತಿಳಿಸಿದೆ ಎಂದು ಭಾಗವತ್‌ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಶಾಲಾ ಕಾಲೇಜು ಕೊಠಡಿಗೆ ಕೇಸರಿ ಬಣ್ಣ | ಹಿಂಬಾಗಿಲು ಮೂಲಕ ಆರ್‌ಎಸ್‌ಎಸ್‌ ಅಜೆಂಡಾ ಹೇರುವ ಹುನ್ನಾರ; ಸಚಿವರ ನಡೆಗೆ ಟೀಕೆ

"ಬದಲಾದ ಕಾಲಮಾನದಲ್ಲಿ ನಮ್ಮಗಳ ಭೌಗೋಳಿಕ ಅಸ್ತಿತ್ವದ ಹಿನ್ನೆಲೆಯಲ್ಲಿ ಆಯಾಯ ಭಾಗಕ್ಕೆ ತಕ್ಕಂತೆ ಆಹಾರ, ಭಾಷೆಗಳ ಬಳಕೆ, ಪೂಜಾ ವಿಧಾನಗಳು ಆರಂಭವಾದವು. ಇವೆಲ್ಲವೂ ರೂಢಿಗತ ಅಭ್ಯಾಸ ಮತ್ತು ಸ್ವಂತ ಪರಂಪರೆ" ಎಂದು ಮೋಹನ್ ಭಾಗವತ್ ಹೇಳಿಕೊಂಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
6 ವೋಟ್
eedina app