ನಮೀಬಿಯಾದಿಂದ ಭಾರತಕ್ಕೆ ಜಿಗಿದ ಚೀತಾ | ರಾಷ್ಟ್ರೀಯ ಉದ್ಯಾನಕ್ಕೆ ಬಿಡುಗಡೆ ಮಾಡಿದ ಪ್ರಧಾನಿ

PM Modi releases Chitas to Kuno National Park
  • 7 ದಶಕದ ನಂತರ ಭಾರತಕ್ಕೆ ಮತ್ತೆ ಮರಳಿದ ದಕ್ಷಿಣ ಆಫ್ರಿಕಾದ ಚೀತಾ
  • ಚೀತಾ ಓಡಾಡುವುದರ ಫೊಟೋ ಕ್ಲಿಕ್ಕಿಸಿ ಸಂಭ್ರಮಿಸಿದ ಪ್ರಧಾನಿ ಮೋದಿ 

ನೈರುತ್ಯ ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ತರಲಾಗಿರುವ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಸೆ.17) ಬೆಳಿಗ್ಗೆ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡಿದ್ದಾರೆ. 

ಕುನೊ ರಾಷ್ಟ್ರೀಯ ಉದ್ಯಾನದ ವಿಶೇಷ ಆವರಣದಲ್ಲಿ ಪಂಜರದಿಂದ ಚೀತಾಗಳನ್ನು ಹೊರಗೆ ಬಿಟ್ಟಿದ್ದಾರೆ. ಬಳಿಕ ಕ್ಯಾಮರಾ ಹಿಡಿದು ಅವುಗಳ ಓಡಾಟದ ಫೊಟೋಗಳನ್ನು ಕ್ಲಿಕ್ಕಿಸಿದ್ದಾರೆ.   

“ಚೀತಾಗಳು 1952ರಲ್ಲೇ ಭಾರತದಲ್ಲಿ ನಶಿಸಿ ಹೋಗಿವೆ. ಇದು ಬೇಸರದ ಸಂಗತಿ. ದಶಕಗಳಿಂದ ಅವುಗಳಿಗೆ ಪುನರ್ವಸತಿ ಕಲ್ಪಿಸಲು ಯಾವುದೇ ಅರ್ಥಪೂರ್ಣ ಪ್ರಯತ್ನಗಳು ನಡೆದಿಲ್ಲ” ಎಂದು ಹೇಳಿದರು. 

“ಇಂದು ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲಿ ದೇಶವು ಹೊಸ ಶಕ್ತಿಯೊಂದಿಗೆ ಚೀತಾಗಳಿಗೆ ಪುನರ್ವಸತಿ ಕಲ್ಪಿಸಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ” ಎಂದು ಪ್ರಧಾನಿ ಮೋದಿ ಬಣ್ಣಿಸಿದರು. 

AV Eye Hospital ad

ಈ ಸುದ್ದಿ ಓದಿದ್ದೀರಾ? ಉಕ್ರೇನ್‌ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೆರವಾಗಲು ವೆಬ್‌ ಪೋರ್ಟಲ್‌ ಪ್ರಾರಂಭಿಸಿ: ಸುಪ್ರೀಂ ಕೋರ್ಟ್

ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ 8 ಚೀತಾಗಳನ್ನು ಗ್ವಾಲಿಯರ್‌ಗೆ ತರಲಾಗಿತ್ತು. ನಂತರ ಅವುಗಳನ್ನು ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳಲ್ಲಿ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ತರಲಾಯಿತು.

ಈ ಮೂಲಕ ನಮೀಬಿಯಾದ 5 ಹೆಣ್ಣು ಮತ್ತು 3 ಗಂಡು ಚೀತಾಗಳು ಭಾರತಕ್ಕೆ ಬಂದಿದ್ದು, ಏಳು ದಶಕದ ನಂತರ ಭಾರತದ ನೆಲಕ್ಕೆ ಚೀತಾಗಳು ಕಾಲಿಟ್ಟಂತಾಗಿದೆ. ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳಿಗೆ ವಿಶೇಷ ಆರೈಕೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 3 ತಿಂಗಳ ಕಾಲ ತೀವ್ರ ನಿಗಾದಲ್ಲಿ ಇರಿಸಲಾಗುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app