
- ಶಿವಸೇನೆಯ ಪಕ್ಷದ ಚುಕ್ಕಾಣಿ ಹಿಡಿಯಲು ಎರಡು ಬಣಗಳ ಪ್ರಯತ್ನ
- ಗೊಗವಾಲೆ ಪಕ್ಷದ ಮುಖ್ಯ ಸಚೇತಕ ಎಂದು ಸ್ಪಷ್ಟಪಡಿಸಿದ ಶಿಂಧೆ
ಹೊಸ ಸರ್ಕಾರದ ವಿಶ್ವಾಸಮತ ಪರೀಕ್ಷೆಗೆ ತಮ್ಮ ವಿಪ್ ಧಿಕ್ಕರಿಸಿದ ಎಲ್ಲಾ ಶಿವಸೇನೆ ಶಾಸಕರಿಗೆ ಏಕನಾಥ್ ಶಿಂಧೆ ಬಣದ ಮುಖ್ಯ ಸಚೇತಕ ಭರತ್ ಗೊಗವಾಲೆ ಅವರು ಅನರ್ಹತೆ ನೋಟಿಸ್ ನೀಡಿದ್ದಾರೆ.
ಬಾಳಾಸಾಹೇಬ್ ಠಾಕ್ರೆ ಅವರ ಗೌರವದ ಸಂಕೇತವಾಗಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆ ಅವರಿಗೆ ನೋಟಿಸ್ ನೀಡಲಾಗಿಲ್ಲ ಎಂದು ಭರತ್ ಗೋಗಾವಾಲೆ ಹೇಳಿದ್ದಾರೆ.
ಭರತ್ ಗೊಗಾವಾಲೆ ಅವರ ವಿಪ್ ಧಿಕ್ಕರಿಸಿದ್ದಕ್ಕೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಶಿಂಧೆ ಬಣ ಸದನದ ವಿಶ್ವಾಸಮತದ ಮೊದಲು ಎಚ್ಚರಿಕೆ ನೀಡಿತ್ತು. ಎರಡು ಬಣಗಳು 56 ವರ್ಷದ ಶಿವಸೇನೆಯ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿವೆ.
ಈ ಸುದ್ದಿ ಓದಿದ್ದೀರಾ ? ಝೀ ಟಿವಿ ನಿರೂಪಕರ ಬಂಧನಕ್ಕೆ ಎರಡು ರಾಜ್ಯಗಳ ಪೊಲೀಸರ ಕಿತ್ತಾಟ
ತಾನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಮತ್ತು ಭರತ್ ಗೊಗವಾಲೆ ಪಕ್ಷದ ಮುಖ್ಯ ಸಚೇತಕ ಎಂದು ಏಕನಾಥ ಶಿಂಧೆ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಮತ್ತು ಸೋಮವಾರ ಸುನಿಲ್ ಪ್ರಭು ಮತ್ತು ಭರತ್ ಗೊಗವಾಲೆ ಅವರ ನೇತೃತ್ವದಲ್ಲಿ ಎರಡು ಪ್ರತ್ಯೇಕ ವಿಪ್ ಜಾರಿಗೊಳಿಸಿದ್ದರು. ಹಾಗೂ ಎರಡು ಬಣಗಳು ಪ್ರತ್ಯೇಕ ಮತ ಚಲಾಯಿಸದ್ದವು, ಇದೀಗ ಠಾಕ್ರೆ ಬಣ ಅನರ್ಹತೆ ಎದುರಿಸುತ್ತಿದೆ.
ಏಕನಾಥ ಶಿಂಧೆ ಬಣವು ಸುನಿಲ್ ಪ್ರಭು ಅವರ ವಿಪ್ ಧಿಕ್ಕರಿಸಿತ್ತು. ಸರ್ಕಾರವು ಜುಲೈ 3ರ ಸಭಾಪತಿ ಚುನಾವಣೆ ಮತ್ತು ಜುಲೈ 4ರಂದು ನಡೆದ ವಿಶ್ವಾಸಮತವನ್ನು ನಿರೀಕ್ಷಿತ ರೀತಿಯಲ್ಲಿ ಸರಾಗವಾಗಿ ಸಾಬೀತುಪಡಿಸಿದೆ.
ಜುಲೈ 11ರಂದು ಸುಪ್ರೀಂಕೋರ್ಟ್ ವಿಚಾರಣೆಯ ನಂತರ ಮುಂದಿನ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ.