ಸಂಚಲನ ಸೃಷ್ಟಿಸಿದ ಮೋದಿ- ದೀದಿ ಭೇಟಿ| 45 ನಿಮಿಷ ಮೋದಿಯೊಂದಿಗೆ ಸಭೆ, ಬಾಕಿ ಅನುದಾನ ಕೋರಿದೆ ಎಂದ ಮಮತಾ!

  • ಬಿಜೆಪಿ ನಾಯಕ ದಿಲೀಪ್ ಘೋಷ್‌ ಬಂಧನಕ್ಕೆ ಒತ್ತಾಯ
  • ಬಾಕಿ ಮೊತ್ತ ಕೊಡುವಂತೆ ಕೇಂದ್ರಕ್ಕೆ ತೃಣಮೂಲ ಬೇಡಿಕೆ

ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಮೋದಿ ಅವರೊಂದಿಗೆ 45 ನಿಮಿಷಗಳ ಕಾಲ ಚರ್ಚೆ ನಡೆಸಿದ್ದು, 2024ರ ಚುನಾವಣೆಯ ಹೊಂದಾಣಿಕೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ.

"ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನಿ ಮಂತ್ರಿ ಅವಾಸ್ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಅನುಷ್ಠಾನಕ್ಕೆ ಸುಮಾರು 17.996 ಕೋಟಿ ರೂಪಾಯಿಯನ್ನು ಕೇಂದ್ರ ಬಾಕಿ ಉಳಿಸಿಕೊಂಡಿದೆ. ಆದ್ದರಿಂದ ತುರ್ತಾಗಿ ಬಾಕಿ ಮೊತ್ತ ಬಿಡುಗಡೆ ಮಾಡುವಂತೆ ವಿನಂತಿಸುತ್ತೇನೆ” ಎಂದು ಮಮತಾ ಪ್ರಧಾನಿ ಮೋದಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ.

"ಕೇಂದ್ರ ಸರ್ಕಾರವು ಹಲವು ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಖಾತೆಯಲ್ಲಿ ಸುಮಾರು 1,00,968.44 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಮೊತ್ತ ಬಾಕಿ ಉಳಿದ ಕಾರಣ, ರಾಜ್ಯದಲ್ಲಿ ಆಡಳಿತ ನಡೆಸಲು ತೊಂದರೆಯಾಗುತ್ತಿದೆ” ಎಂದು ಮನವಿ ಪತ್ರದಲ್ಲಿ ಬರೆಯಲಾಗಿದೆ.

ಕೇಂದ್ರ ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ, ಬಾಕಿ ಇರುವ ಮೊತ್ತವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ತೃಣಮೂಲ ಕಾಂಗ್ರೆಸ್‌ ದೀರ್ಘಕಾಲದಿಂದ ಬೇಡಿಕೆ ಇಡುತ್ತ ಬಂದಿದೆ.

ಈ ಸುದ್ದಿ ಓದಿದ್ದಿರಾ? ಪ್ರಧಾನಿ ನಿವಾಸ ಘೇರಾವ್ | ರಾಹುಲ್ ಗಾಂಧಿ ಸೇರಿ ಕೆಲವು ಸಂಸದರ ಬಂಧನ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ಪ್ರತಿಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಿಗೆ ಉದ್ದೇಶಪೂರ್ವಕವಾಗಿ ಜಿಎಸ್‌ಟಿ ಹಣವನ್ನು ಬಾಕಿ ಉಳಿಸಿಕೊಳ್ಳುತ್ತಿದೆ ಎಂದು ಪಶ್ಚಿಮಬಂಗಾಳ ಆಗಾಗ್ಗೆ ಆರೋಪಿಸುತ್ತ ಬಂದಿದೆ.

ಕೇಂದ್ರ ಸರ್ಕಾರವು ಪಶ್ಚಿಮಬಂಗಾಳಕ್ಕೆ ಬಿಡುಗಡೆ ಮಾಡಬೇಕಿದ್ದ ಸುಮಾರು 27,000 ಕೋಟಿ ರೂಪಾಯಿ ಬಾಕಿ ಮೊತ್ತ ಬಿಡುಗಡೆ ಮಾಡಿಲ್ಲ ಎಂದು ಬಂಗಾಳ ಮುಖ್ಯಮಂತ್ರಿಯ ಪ್ರಧಾನ ಮುಖ್ಯ ಸಲಹೆಗಾರ ಅಮಿತ್ ಮಿತ್ರಾ ಅವರು ಜೂನ್‌ನಲ್ಲಿ ಆರೋಪಿಸಿದ್ದರು.

ಆದಾಗ್ಯೂ, ಜಾರಿ ನಿರ್ದೇಶನಾಲಯ ಪಾರ್ಥ ಚಟರ್ಜಿ ಅವನ್ನು ಬಂಧಿಸಿದ ಬಳಿಕ, ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿ ಸಭೆ ನಡೆಸಿದ್ದು, ಅನೇಕ ಊಹಾಪೋಹಗಳನ್ನು ಸೃಷ್ಟಿಸಿದೆ. ಬ್ಯಾನರ್ಜಿ ಕುಟುಂಬದ ವಿರುದ್ಧ ಅನುಚಿತವಾಗಿ ಟೀಕೆ ಮಾಡುತ್ತಿರುವ ರಾಜ್ಯ ಬಿಜೆಪಿ ನಾಯಕ ದಿಲೀಪ್ ಘೋಷ್‌ ಅವರನ್ನು ಬಂಧಿಸುವಂತೆ ಒತ್ತಾಯಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180