ಸಾಮರಸ್ಯದ ರಾಷ್ಟ್ರ ನಿರ್ಮಾಣ ನನ್ನ ಕನಸು| ಮಮತಾ ಬ್ಯಾನರ್ಜಿ

  •  ಚುನಾವಣೆಯಲ್ಲಿ ಸೋಲುವ ಭಯದಿಂದ ಮೋದಿಯಿಂದ ತನಿಖಾ ಸಂಸ್ಥೆಗಳ ದುರುಪಯೋಗ
  • ನನ್ನ ಸ್ವಂತ ಇಚ್ಛೆಯಂತೆ ನಾನು ಧ್ವಜಾರೋಹಣ ಮಾಡುತ್ತೇನೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  

ಪಶ್ಮಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹಸಿವು ಮತ್ತು ಅನಕ್ಷರತೆ ಇಲ್ಲದ ಭಾರತ ಸಾಮರಸ್ಯದ ರಾಷ್ಟ್ರ  ನಿರ್ಮಿಸುವ ಕನಸಿದೆ ಎಂದು ಹೇಳಿದ್ದಾರೆ.

"ಭಾರತಕ್ಕಾಗಿ ನನಗೊಂದು ಕನಸಿದೆ!, ಯಾರೂ ಹಸಿವಿನಿಂದ ಇರದ, ಮಹಿಳೆಯರಿಗೆ ರಕ್ಷಣೆ ಕಾಡದ, ಪ್ರತಿ ಮಗು ಶಿಕ್ಷಣದ ಬೆಳಕು ನೋಡುವ, ಎಲ್ಲರನ್ನು ಸಮಾನವಾಗಿ ಕಾಣುವ, ದಮನಕಾರಿ ಶಕ್ತಿಗಳು ಜನರನ್ನು ವಿಭಜಿಸದ ಹಾಗೂ ಸಾಮರಸ್ಯದ ರಾಷ್ಟ್ರವನ್ನು ನಿರ್ಮಿಸಲು ನಾನು ಬಯಸುತ್ತೇನೆ” ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

"ನಮ್ಮ ಕನಸಿನ ಭಾರತಕ್ಕಾಗಿ ನಾನು ಪ್ರತಿದಿನ ಶ್ರಮಿಸುತ್ತೇನೆ ಎಂದು ಈ ಮಹಾನ್ ರಾಷ್ಟ್ರದ ಜನರಿಗೆ ನಾನು ಭರವಸೆ ಕೊಡುತ್ತೇನೆ" ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ರಾಷ್ಟ್ರೀಯ ರಾಜಕಾರಣದಲ್ಲಿ ಹೆಚ್ಚು ಮತ್ತು ಜಂಟಿ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ.
 
ನನಗೆ ಧ್ವಜರೋಹಣದ ಪಾಠ ಮಾಡಬೇಡಿ

ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 'ಹರ್ ಘರ್ ತಿರಂಗಾ' ಅಭಿಯಾನವನ್ನು ಗುರಿಯಾಗಿಸಿಕೊಂಡ ಮಮತಾ ಬ್ಯಾನರ್ಜಿ “ಹುಟ್ಟಿನಿಂದಲೂ ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದೇನೆ ನನಗೆ ಧ್ವಜಾರೋಹಣದ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಐತಿಹಾಸಿಕ ವಾಸ್ತವ ತಿರುಚುವುದನ್ನು ಕಾಂಗ್ರೆಸ್ ಎಂದಿಗೂ ಒಪ್ಪಿಕೊಳ್ಳುವುದಿಲ್ಲ: ಸೋನಿಯಾ ಗಾಂಧಿ

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಬೆಹಾಲಾದಲ್ಲಿ ನಡೆದ ಟಿಎಂಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, "ನಾನು ನನ್ನ ಹುಟ್ಟಿನಿಂದಲೂ ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದೇನೆ, ಧ್ವಜವನ್ನು ಹೇಗೆ ಹಾರಿಸಬೇಕೆಂದು ನನಗೆ ಕಲಿಸುವ ಅಗತ್ಯವಿಲ್ಲ, ನನ್ನ ಸ್ವಂತ ಇಚ್ಛೆಯಂತೆ ನಾನು ಧ್ವಜಾರೋಹಣ ಮಾಡುತ್ತೇನೆ. ಬಿಜೆಪಿಯವರು ನಮಗೇನು ಕಲಿಸುತ್ತಾರೆ?" ಎಂದು ಹೇಳಿದ್ದಾರೆ.

“2024ರ ಲೋಕಸಭೆಯ ಚುನಾವಣೆಯಲ್ಲಿ ಮೋದಿ ಗೆಲ್ಲುವುದಿಲ್ಲ ಎನ್ನುವ ಕಾರಣಕ್ಕೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿಪಕ್ಷಗಳ ಮೇಲೆ ದಾಳಿ ನಡೆಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್