ಪ್ರಧಾನಿ ಮೋದಿ ಮಿತ್ರತ್ವ ಪ್ರೇಮದಿಂದ ದೇಶದ ಆರ್ಥಿಕತೆ ಹಾಳು| ಮನೀಶ್ ಸಿಸೋಡಿಯಾ

  • 'ಕೇಂದ್ರ ಉತ್ತರಿಸುವ ಬದಲು ಬರಿ ಮಾತನಾಡುತ್ತದೆ'
  • ನರೆಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿಸೋಡಿಯಾ

ಪ್ರಧಾನಿ ನರೇಂದ್ರ ಮೋದಿಯವರ ಮಿತ್ರತ್ವದ ಪ್ರೇಮವು ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ಹಾಳುಮಾಡಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶನಿವಾರ (ಆಗಸ್ಟ್‌ 13) ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಸ್ನೇಹಿತರಿಗಾಗಿ ತೆರಿಗೆ ವಿನಾಯಿತಿ ಏಕೆ ಘೋಷಿಸಿದ್ದಾರೆ.  ಅವರ ಕೋಟ್ಯಂತರ ಮೌಲ್ಯದ ಸಾಲವನ್ನು ಏಕೆ ಮನ್ನಾ ಮಾಡಿದ್ದಾರೆ ಎಂಬುದಕ್ಕೆ ಉತ್ತರಿಸುವಂತೆ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರವು ₹10 ಲಕ್ಷ ಕೋಟಿ  ಸಾಲ ಮನ್ನಾ ಮಾಡಿದೆ.  ಮೋದಿಯವರ ಸ್ನೇಹಿತರಿಗೆ ₹5 ಲಕ್ಷ ಕೋಟಿ  ತೆರಿಗೆ ವಿನಾಯಿತಿ ನೀಡಿದೆ. ಇದು ದೇಶದ ಆರ್ಥಿಕತೆಯನ್ನು ಕೆಟ್ಟ ಸ್ಥಿತಿಗೆ ತಳ್ಳಿದೆ” ಎಂದು ಅವರು ಆರೋಪಿಸಿದ್ದಾರೆ.

"ಪ್ರಧಾನಿ ಮೋದಿ ತಮ್ಮ ಸ್ನೇಹಿತರ ₹10 ಲಕ್ಷ ಕೋಟಿ  ಸಾಲವನ್ನು ಏಕೆ ಮನ್ನಾ ಮಾಡಿದರು. ಅವರಿಗೆ  ₹5 ಲಕ್ಷ ಕೋಟಿ  ತೆರಿಗೆಯನ್ನು ವಿನಾಯಿತಿ ಏಕೆ  ನೀಡಿದರು. ಅವರ ಸ್ನೇಹಿತರ ಮೇಲಿನ ಪ್ರೇಮ ದೇಶದ ಆರ್ಥಿಕತೆಯನ್ನು ಕೆಟ್ಟ  ಸ್ಥಿತಿಗೆ ತಂದಿದೆ. ಈ ಬಗ್ಗೆ ಉತ್ತರಿಸಲು ನಾನು ಮತ್ತೊಮ್ಮೆ ಪ್ರಧಾನಿ ಅವರಲ್ಲಿ ಮನವಿ ಮಾಡುತ್ತೇನೆ. ಈಗ ಜನರಿಗೆ ಏನನ್ನಾದರೂ ಉಚಿತವಾಗಿ ನೀಡಿದರೆ ದೇಶವು ಹಾಳಾಗುತ್ತದೆಯೇ ಎಂದು ನೀವು ಹೇಳಬೇಕು" ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ದ್ವಜಾರೋಹಣ ಮಾಡದವರನ್ನು ದೇಶ ನಂಬುವುದಿಲ್ಲ ಎಂದ ಬಿಜೆಪಿ ನಾಯಕ; ವಿಪಕ್ಷಗಳಿಂದ ತೀವ್ರ ವಿರೋಧ

ಪ್ರಧಾನಿ ಮೋದಿ ಅವರ ಕಳೆದ ತಿಂಗಳ 'ರೇವ್ಡಿ' ಸಂಸ್ಕೃತಿಯ ಹೇಳಿಕೆ, ದೇಶದಲ್ಲಿ ಉಚಿತ ಕೊಡುಗೆಗಳ ಕುರಿತು ಬಗ್ಗೆ ಚರ್ಚೆ ಪ್ರಾರಂಭಿಸಿದೆ. ಈ ವಿಷಯದ ಕುರಿತು ಬಿಜೆಪಿ ಮತ್ತು ಎಎಪಿ ನಡುವೆ ರಾಜಕೀಯ ಜಟಾಪಟಿ ಏರ್ಪಟ್ಟಿದೆ.

“ಹಾಲು, ಮೊಸರು, ಗೋಧಿ ಹಾಗೂ ಅಕ್ಕಿಯಂತಹ ಆಹಾರ ಪದಾರ್ಥಗಳಿಗೆ ಕೇಂದ್ರ ಸರ್ಕಾರವು ತೆರಿಗೆ ವಿಧಿಸಿದೆ. ಕಳೆದ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಕ್ಷಣಗಳಿಗೆ ದೇಶ ಸಾಕ್ಷಿಯಾಗಿದೆ” ಎಂದು ಸಿಸೋಡಿಯಾ ಹೇಳಿದ್ದಾರೆ.

ಶಾಲೆ, ಆಸ್ಪತ್ರೆಗಳ ನಿರ್ಮಾಣ, ಪಿಂಚಣಿ ಮತ್ತು ದೇಶದ ಬಡವರಿಗೆ ಪರಿಹಾರ ನೀಡುವ ಬಗ್ಗೆ ಕೇಂದ್ರ ಸರ್ಕಾರ ತನ್ನ ಬಳಿ ಹಣವಿಲ್ಲ ಎಂದು ಹೇಳುತ್ತಿದೆ ಎಂದು ಟೀಕಿಸಿದರು.

ಇಂತಹ ಕ್ರಮಗಳನ್ನು ಬೆಂಬಲಿಸಲು ಕೇಂದ್ರಕ್ಕೆ ಹಣದ ಕೊರತೆಯಿದೆ ಏಕೆಂದರೆ ಅದು ತೆರಿಗೆದಾರರ ಹಣವನ್ನು ಪ್ರಧಾನಿ ಮೋದಿಯವರ ಸ್ನೇಹಿತರ ಬೊಕ್ಕಸ ತುಂಬಲು ಬಳಸಿದೆ ಎಂದು ಸಿಸೋಡಿಯಾ ಕಿಡಿಕಾರಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್