ಮೇಯರ್‌ಗಳ ಸಭೆಯಲ್ಲಿ ಸ್ಯಾಟಲೈಟ್ ಟೌನ್‌ಗಳ ಅಗತ್ಯವನ್ನು ಮುಂದಿಟ್ಟ ಪ್ರಧಾನಿ ಮೋದಿ

Narendra Modi
  • ಅಹಮದಾಬಾದ್‌ ಪಾಲಿಕೆಯ ಮೇಯರ್ ಆಗಿದ್ದ ಸರ್ದಾರ್‌ ವಲ್ಲಭಭಾಯಿ ಪಟೇಲ್‌
  • ಬಿಜೆಪಿ ಮೇಯರ್‌- ಉಪಮೇಯರ್‌ ಸಭೆಯಲ್ಲಿ ವರ್ಚುವಲ್‌ ಮೂಲಕ ಪ್ರಧಾನಿ ಭಾಗಿ

ನಗರ ಯೋಜನೆಯ ವಿಕೇಂದ್ರೀಕರಣವು ಬಹಳ ಅಗತ್ಯ ಮತ್ತು ಸ್ಯಾಟಲೈಟ್ ಟೌನ್‌ಗಳು ಅಭಿವೃದ್ಧಿಗೆ ಪೂರಕ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ (ಸೆ. 20) ಗುಜರಾತ್‌ನ ಎಲ್ಲ ನಗರ ಪಾಲಿಕೆಗಳ ಬಿಜೆಪಿಯ ಮೇಯರ್ ಮತ್ತು ಉಪ ಮೇಯರ್‌ಗಳ ಪರಿಷತ್ತು ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿ ಅವರು ಮಾತನಾಡಿದರು. 

ಸ್ಯಾಟ್‌ಲೈಟ್ ಟೌನ್‌ಗಳ ಅಭಿವೃದ್ಧಿಯಿಂದ ನಗರಗಳ ಮೇಲಿನ ಒತ್ತಡ ಕಡಿಮೆಯಾಗುತ್ತಿದೆ. ರಾಜ್ಯಮಟ್ಟದಲ್ಲೂ ಈ ಕಾರ್ಯ ಆಗಬೇಕಿದೆ ಎಂದು ಪ್ರಧಾನಿ ಹೇಳಿದರು. 

“ಈ ವರ್ಷದ ಬಜೆಟ್‌ನಲ್ಲಿ ನಗರ ಯೋಜನೆಗೆ ಒತ್ತು ನೀಡಲಾಗಿದೆ, ನಗರ ಯೋಜನೆಯು ವಿಕೇಂದ್ರೀಕರಣಗೊಳ್ಳುವುದು ಅಗತ್ಯ. ಕೇಂದ್ರ ಸರ್ಕಾರದಿಂದಲೇ ಎಲ್ಲವೂ ನಿರ್ಧಾರವಾಗುವುದಿಲ್ಲ. ಆದ್ದರಿಂದ ರಾಜ್ಯ ಮಟ್ಟದಲ್ಲಿಯೇ ರೂಪುಗೊಳ್ಳಬೇಕು” ಎಂದು ಅವರು ಹೇಳಿದರು.

“ಅಭಿವೃದ್ಧಿ ಹೊಂದುತ್ತಿರುವ ದೇಶದ ದೊಡ್ಡ ನಗರಗಳ ಸುತ್ತ ಸ್ಯಾಟಲೈಟ್‌ ಟೌನ್‌ಗಳಿವೆ. ದೊಡ್ಡ ನಗರಗಳ ಸುತ್ತ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಹಲವಾರು ಸ್ಯಾಟ್‌ಲೈಟ್ ಟೌನ್‌ಗಳಿವೆ. ಅವುಗಳನ್ನು ನಿಯಮಿತವಾಗಿ ಅಭಿವೃದ್ಧಿಪಡಿಸಬೇಕಿದೆ. ಆಗ ಮಾತ್ರ ನಗರಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ” ಎಂದು ವಿವರಿಸಿದರು. 

“ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ  ಮುಂದಿನ 25 ವರ್ಷಗಳ ಕಾಲ ಭಾರತದ ನಗರಾಭಿವೃದ್ಧಿಯ ಮಾರ್ಗಸೂಚಿಯನ್ನು ಸಿದ್ಧಪಡಿಸುವಲ್ಲಿ ಇಂತಹ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ” ಎಂದು ಶ್ಲಾಘಿಸಿದರು.

ಈ ಈ ಸುದ್ದಿ ಓದಿದ್ದೀರಾ? ಸುದ್ದಿ ನೋಟ | ತನಿಖಾ ಸಂಸ್ಥೆಗಳು ಅಂದು ಪಂಜರದ ಗಿಳಿ; ಇಂದು ಪ್ರತಿಪಕ್ಷಗಳ ಮೇಲಿನ ದಾಳಿಗೆ ಅಸ್ತ್ರ

“ನಮ್ಮ ದೇಶವು ಬಿಜೆಪಿ ಮೇಲೆ ನಂಬಿಕೆ ಇರಿಸಿದೆ. ಆದ್ದರಿಂದ ತಳಮಟ್ಟದಿಂದ ಕೆಲಸ ಮಾಡುವುದು ಎಲ್ಲ ಬಿಜೆಪಿಯ ಮೇಯರ್‌ಗಳ ಜವಾಬ್ದಾರಿ. ನಗರಗಳಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕು. ಅದರ ಅಭಿವೃದ್ಧಿಗೆ ಕಾರ್ಯತಂತ್ರ ರೂಪಿಸಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.

“ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಹಮದಾಬಾದ್ ಪುರಸಭೆಯ ಸದಸ್ಯರಾಗಿದ್ದರು. ಅವರು ಅಹಮದಾಬಾದ್ ಅನ್ನು ಮೇಯರ್ ಆಗಿ ಮುನ್ನಡೆಸಿದ್ದರು. ಬಳಿಕ ಅವರು ಉಪಪ್ರಧಾನಿಯಾದರು. ಅವರು ಪುರಸಭೆಯಲ್ಲಿ ದಶಕಗಳ ಹಿಂದೆ ಮಾಡಿದ ಕೆಲಸವನ್ನು ಇಂದಿಗೂ ಗೌರವದಿಂದ ಸ್ಮರಿಸಲಾಗುತ್ತದೆ. ಉತ್ತಮ ಭಾರತಕ್ಕಾಗಿ ಅವರು ಹಾಕಿಕೊಟ್ಟ ಮಾರ್ಗವನ್ನು ಎಲ್ಲರೂ ಅನುಸರಿಸಬೇಕು. ಎಲ್ಲ ಮೇಯರ್‌ಗಳು ಅಭಿವೃದ್ಧಿಗಾಗಿ ಶ್ರಮಿಸಬೇಕು” ಎಂದರು. 

ನಿಮಗೆ ಏನು ಅನ್ನಿಸ್ತು?
0 ವೋಟ್