ನೆಹರು ಕೋಮು ಸರ್ವಾಧಿಕಾರದ ಜತೆ ರಾಜಿ ಬಯಸಿದ್ದರು ಎಂದ ಕೇರಳ ಕಾಂಗ್ರೆಸ್ ಅಧ್ಯಕ್ಷ

K Sudhakaran
  • 1947ರಿಂದ 1950ರವರೆಗೆ ನೆಹರು ಸರ್ಕಾರದಲ್ಲಿ ಸಚಿವರಾಗಿದ್ದ ಶ್ಯಾಮ್‌ ಪ್ರಸಾದ್  
  • ಬಿಜೆಪಿಯ ಸಂಸ್ಥಾಪಕ ಎಂದು ಕರೆಯಲಾಗುವ ಶ್ಯಾಮ್‌ ಪ್ರಸಾದ್‌ ಮುಖರ್ಜಿ  

ಜವಾಹರಲಾಲ್ ನೆಹರು ಅವರು ಕೋಮು ಸರ್ವಾಧಿಕಾರತ್ವದ ಜತೆ ರಾಜಿ ಮಾಡಿಕೊಳ್ಳಲು ಬಯಸಿದ್ದರು ಎಂದು ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಕೆ ಸುಧಾಕರನ್‌ ಸೋಮವಾರ (ನ. 14) ಹೇಳಿದ್ದಾರೆ. 

ನೆಹರು ಅವರು ಕೋಮು ಸರ್ವಾಧಿಕಾರದ ಜತೆ ಸ್ನೇಹ ಬಯಸಿದ್ದರು. ಅದಕ್ಕಾಗಿಯೇ ಸ್ವತಂತ್ರ ಭಾರತದ ಮೊದಲ ಕೇಂದ್ರ ಸಚಿವ ಸಂಪುಟದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರನ್ನು ಸಚಿವರನ್ನಾಗಿ ಮಾಡಿದರು ಎಂದು ಲೋಕಸಭೆ ಸದಸ್ಯರೂ ಆಗಿರುವ ಸುಧಾಕರನ್‌ ಹೇಳಿದ್ದಾರೆ.

Eedina App

ನೆಹರು ಜನ್ಮ ದಿನಾಚರಣೆಯ ಅಂಗವಾಗಿ ಸೋಮವಾರ ಕಣ್ಣೂರಿನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕ್ರಮದಲ್ಲಿ ಸುಧಾಕರನ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಈ ಹಿಂದೆಯೂ ಸುಧಾಕರನ್‌ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಕಾಂಗ್ರೆಸ್‌ ವಿದ್ಯಾರ್ಥಿ ನಾಯಕನಾಗಿದ್ದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಗಳಿಗೆ ಸಿಪಿಐನಿಂದ ರಕ್ಷಣೆ ನೀಡಿದ್ದೇನೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.

AV Eye Hospital ad

“ಬಿ ಆರ್ ಅಂಬೇಡ್ಕರ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿದ ಉನ್ನತ ಮಟ್ಟದ ಪ್ರಜಾಸತ್ತಾತ್ಮಕ ಪ್ರಜ್ಞೆಯ ಪ್ರತೀಕ ನೆಹರು. ಅವರು ಆರ್‌ಎಸ್‌ಎಸ್‌ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿಯವರನ್ನು ತಮ್ಮದೇ ಸಂಪುಟದಲ್ಲಿ ಸಚಿವರಾಗಿ ಮಾಡಿದರು. ಈ ಮೂಲಕ ನೆಹರು ಅವರು ಕೋಮು ಸರ್ವಾಧಿಕಾರ ತತ್ವದೊಂದಿಗೆ ರಾಜಿ ಮಾಡಿಕೊಳ್ಳಲು ತಯಾರಿದ್ದರು” ಎಂದು ಕಾರ್ಯಕ್ರಮದಲ್ಲಿ ಸುಧಾಕರನ್‌ ಹೇಳಿದರು.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಬಿಜೆಪಿಗೆ ಸೇರಿದ ಸುಪ್ರೀಂ ಕೋರ್ಟ್‌ ವಕೀಲ ವಿಕಾಸ್‌ ಬನ್ಸೋಡೆ

ಶ್ಯಾಮ್‌ ಪ್ರಸಾದ್‌ ಮುಖರ್ಜಿಯವರು 1947ರಿಂದ 1950ರವರೆಗೆ ನೆಹರು ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ ಅವರು ಸಂಪುಟ ತೊರೆದು ಭಾರತೀಯ ಜನಸಂಘ ಸ್ಥಾಪಿಸಿದರು. ಅದು ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಗಿದೆ. ಅವರನ್ನು ಬಿಜೆಪಿಯ ಸಂಸ್ಥಾಪಕ ಎಂದು ಕರೆಯಲಾಗುತ್ತದೆ.

“ನೆಹರು ಅವಧಿಯಲ್ಲಿ ಸಂಸತ್ತಿನಲ್ಲಿ ಪ್ರತಿಪಕ್ಷ ಇರಲಿಲ್ಲ. ಪ್ರತಿಪಕ್ಷಗಳಿಗೆ ಸಾಕಷ್ಟು ಸಂಖ್ಯಾಬಲ ಇರಲಿಲ್ಲ. ಆದರೆ ಎ ಕೆ ಗೋಪಾಲನ್ (ಕೋಮುವಾದಿ ಪಕ್ಷ) ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಮಾಡುವ ಮೂಲಕ ನೆಹರು ಪ್ರಜಾಸತ್ತಾತ್ಮಕ ಅರ್ಥವನ್ನು ಸಾರ್ಥಕವಾಗಿಸಿದರು. ಸರ್ಕಾರವನ್ನು ಟೀಕಿಸಲು ಯಾರಾದರೂ ಇರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು” ಎಂದು ಸುಧಾಕರನ್ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app