ಬುಡಕಟ್ಟು ವ್ಯವಹಾರಗಳ ಇಲಾಖೆಗೆ ವರ್ಗಾಯಿಸುವ ಶಿಕ್ಷೆ ನೀಡಿ; ಎಎಪಿ ರಾಘವ್ ಚಡ್ಡಾ ವಿವಾದಾತ್ಮಕ ಹೇಳಿಕೆ

  • ಸಂದರ್ಶನದಲ್ಲಿ ವಿವಾದದ ಹೇಳಿಕೆ ನೀಡಿದ ರಾಘವ್ ಚಡ್ಡಾ
  • ಎಎಪಿ ಜನಾಂಗೀಯವಾದಿಗಳಿಂದ ತುಂಬಿದೆ ಎಂದ ಬಿಜೆಪಿ

ಸರ್ಕಾರಿ ಇಲಾಖೆಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸದ ಅಧಿಕಾರಿಗಳನ್ನು ವಜಾ ಮಾಡುವ ಬದಲು ‘ಶಿಕ್ಷೆ’ಯಾಗಿ ಬುಡಕಟ್ಟು ವ್ಯವಹಾರಗಳ ಇಲಾಖೆಗೆ ವರ್ಗಾಯಿಸಬೇಕು ಎಂದು ಎಎಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ  ಸಂದರ್ಶನವೊಂದರಲ್ಲಿ ಹೇಳಿದ್ದು ಬಾರಿ ವಿವಾದಕ್ಕೆ ಕಾರಣವಾಗಿದೆ. 

ವಿವಾದ ಸೃಷ್ಟಿಯಾದ ನಂತರ ಸಮರ್ಥನೆ ನೀಡಿದ ರಾಘವ್ ಚಡ್ಡಾ, ಬುಡಕಟ್ಟು ವ್ಯವಹಾರವನ್ನು ಉದಾಹರಣೆಗಷ್ಟೇ ಹೇಳಿದ್ದು, ಪಶು ಸಂಗೋಪನೆ ಮತ್ತು ತೋಟಗಾರಿಕೆ ಇಲಾಖೆಗೂ ಹೇಳಿಕೆಯನ್ನು ಅನ್ವಯಿಸಬಹುದು ಎಂದು ಹೇಳಿದ್ದಾರೆ.

ಅವರ ಸಂದರ್ಶನದ ಕ್ಲಿಪ್‌ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ನಾಯಕರು ರಾಘವ್ ಚಡ್ಡಾ ಮೇಲೆ ವಾಗ್ದಾಳಿ ನಡೆಸಿದ್ದಾರೆ.

            https://t.co/uXBMZlm2UB

“ರಾಘವ್ ಚಡ್ಡಾ ಅವರ ಪ್ರಕಾರ ಬುಡಕಟ್ಟು ವ್ಯವಹಾರಗಳ ಇಲಾಖೆಯು ತೋಟಗಾರಿಕೆ ಮತ್ತು ಪಶುಸಂಗೋಪನೆ ಇಲಾಖೆಗೆ ಸಮಾನವಾಗಿದೆಯೇ? ಎಎಪಿ ಪಕ್ಷ ಫ್ಯಾಸಿಸ್ಟ್‌ಗಳು ಮತ್ತು ಜನಾಂಗೀಯವಾದಿಗಳಿಂದ ತುಂಬಿದೆ” ಎಂದು ಭಾರತೀಯ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ  ಅಭಿನವ್ ಪ್ರಕಾಶ್ ಟ್ವೀಟ್ ಮಾಡಿದ್ದಾರೆ.

“ಬುಡಕಟ್ಟು ವ್ಯವಹಾರಗಳ ಇಲಾಖೆಗೆ ಅಧಿಕಾರಿಗಳನ್ನು ವರ್ಗಾಯಿಸುವುದು ಶಿಕ್ಷೆ ಎಂದು ಎಎಪಿ ಪಕ್ಷ ಭಾವಿಸಿದೆ. ಅರವಿಂದ್ ಕೇಜ್ರಿವಾಲ್ ಮತ್ತು ಅವರ ನಕಲಿ ಬುದ್ಧಿ ಜೀವಿಗಳ ತಂಡದ ಮನಸ್ಥಿತಿ ಬಯಲಾಗುತ್ತಿದೆ. ಇನ್ನು ಎಷ್ಟು ಸಮಯ ಸಾಮಾನ್ಯ ಜನರನ್ನು ವಂಚಿಸುತ್ತಿರಿ?” ಎಂದು ದೆಹಲಿ ಬಿಜೆಪಿ ನಾಯಕ ವಿನಿತ್ ಗೋಯೆಂಕಾ ಟ್ವೀಟ್ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್